ಹೃತ್ಕಮಲಕರ್ಣಿಕೆಯ ಕುಹರದಲೊಮ್ಮೆ ಪೃಥಗ್ಭಾವದಿಂದ ನೋಡಿ ಕಾಬನೆ ಶರಣನು ? ವಕ್ತ್ರಶ್ರಯದ ಜಿಹ್ವೆಯ ಕೊನೆಯಲ್ಲಿ ಪರವಕ್ತ್ರನಾಗಿ ನೋಡಿ ನುಡಿವನೆ ಶರಣನು ? ಪ್ರಕೃತಿ ತನುಗುಣರಹಿತ ಸುಕೃತ ಶೂನ್ಯ ಘನಮುಗ್ಧ ಮಹಂತ ಕೂಡಲಚೆನ್ನಸಂಗಾ ಲಿಂಗೈಕ್ಯನು.