ಹೃದಯಕಂದದ ಮೇಲೆ ಹುಟ್ಟಿತ್ತು ಹರಿದು ಹಬ್ಬಿ ಕೊಬ್ಬಿ ಹಲವು ಫಲವಾಯಿತ್ತು_ನೋಡಿರೆ ! ಪರಿಪರಿಯ ಫಲಂಗಳನು ಬೇಡಿದವರಿಗಿತ್ತು ಆ ಫಲವ ಬಯಸಿದವರು ಜಲದೊಳಗೆ ಬಿದ್ದಡೆ [ನೋಡಿ] ನಗುತ್ತಿರ್ದೆನು_ಗುಹೇಶ್ವರಾ.