ಹೆಣ್ಣು ಪ್ರಾಣವೆ ಪ್ರಾಣವಾಗಿಪ್ಪರಯ್ಯ.


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಹೆಣ್ಣು ಪ್ರಾಣವೆ ಪ್ರಾಣವಾಗಿಪ್ಪರಯ್ಯ. ಮಣ್ಣು ಪ್ರಾಣವೆ ಪ್ರಾಣವಾಗಿಪ್ಪರಯ್ಯ. ಹೊನ್ನು ಪ್ರಾಣವೆ ಪ್ರಾಣವಾಗಿಪ್ಪರಯ್ಯ. ಈ ಹೆಣ್ಣು ಮಣ್ಣು ಹೊನ್ನೆಂಬಿವು ಪ್ರಾಣಂಗೆ ಪ್ರಪಂಚುಭಾವವೆಂದರಿದು ಪ್ರಾಣಂಗೆ ಲಿಂಗಕಳೆಯ ಸಂಬಂಧಿಸಿ ಲಿಂಗಕ್ಕೆ ಪ್ರಾಣಕಳೆಯ ಸಂಬಂಧಿಸಿ ಪ್ರಾಣ ಲಿಂಗವೆಂಬ ಪ್ರತಿಭಾವ ತೋರದೆ ಅಪ್ರತಿಮ ಲಿಂಗಸಂಬಂಧಿಯಾಗಿರ್ದೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.