ಹೆಣ್ಣ ಬಿಟ್ಟಡೇನು ಹೊನ್ನಿನಾಸೆ ಉಳ್ಳನ್ನಬರ ? ಅಲ್ಲಿಗೆ ಹಿರಿಯತನ ಸಾಲದು. ಹೊನ್ನ ಬಿಟ್ಟಡೇನು ಮಣ್ಣಿನಾಸೆ ಉಳ್ಳನ್ನಬರ ? ಅಲ್ಲಿಗೆ ಹಿರಿಯತನ ಸಾಲದು. ಅವುಗಳೊಳಗೊಂದ ಹಿಡಿದಡೆಯೂ ಆ ತ್ರಿವಿಧವ ಹಿಡಿದವ
ಆ ಮಾಯೆ ಒಂದ ಬಿಟ್ಟೊಂದಿರದಾಗಿ. ಅವನತಿಗಳೆದಲ್ಲದೆ ಭವಂ ನಾಸ್ತಿಯಾಗದು. ಇದು ಕಾರಣ_ಕೂಡಲಚೆನ್ನಸಂಗಮದೇವಾ ಈ ತ್ರಿವಿಧಮಲವ ಕಳೆದು ಸುಳಿವ ನಿಜಸುಳುಹಿಂಗೆ ನಮೋ ನಮೋ ಎಂಬೆನಯ್ಯಾ.