Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಹೊತ್ತಾರೆಯ ಪೂಜೆ
ಹಗಲಿನ ಪೂಜೆ
ಬೈಗಿನ ಪೂಜೆ
ನಿಚ್ಚಕ್ಕೆ ಪೂಜೆಯ ಮಾಡಿ ಅಚ್ಚಿಗಗೊಂಡರೆಲ್ಲರು. ನಿಶ್ಚಿಂತ ನಿರಾಳ ನಿಜೈಕ್ಯಲಿಂಗವ ಹೊತ್ತಿಂಗೆ ತರಲಹುದೆ ? ಹೊತ್ತನೆ ಪೂಜಿಸಿ
ಹೊತ್ತನೆ ಅರ್ಚಿಸಿ
ಇತ್ತಲೆಯಾದರೆಲ್ಲರು. ನಿಶ್ಚಿಂತವನರಿದು ನಿಜವನೆಯ್ದುವರೆ ಸುಚಿತ್ತ ಸಮಾಧಾನ. ಕೂಡಲಚೆನ್ನಸಂಗನೆಂಬ ಲಿಂಗ ನಿಶ್ಚಿಂತ ನಿಜೈಕ್ಯವು.