ಹೊತ್ತಾರೆ ಪೂಜಿಸಲು ಬೇಡ ಕಂಡಾ. ಬೈಗೆಯೂ ಪೂಜಿಸಲು ಬೇಡ ಕಂಡಾ. ಇರುಳುವುನು ಹಗಲುವನು ಕಳೆದು ಪೂಜೆಯನು ಪೂಜಿಸಲು ಬೇಕು ಕಂಡಾ ಇಂತಪ್ಪ ಪೂಜೆಯನು ಪೂಜಿಸುವರ ಎನಗೆ ನೀ ತೋರಾ ಗುಹೇಶ್ವರಾ.