ಹೊನ್ನಿಂಗೆ ಕೂರ್ತು ಜಂಗಮವನವಿಶ್ವಾಸವ ಮಾಡುವೆ ಹೆಣ್ಣಿಂಗೆ ಕೂರ್ತು ಜಂಗಮವನವಿಶ್ವಾಸವ ಮಾಡುವೆ ಮಣ್ಣಿಂಗೆ ಕೂರ್ತು ಜಂಗಮವನವಿಶ್ವಾಸವ ಮಾಡುವೆ ಎಲೆ ಕುಚಿತ್ತಮನವೆ ಕುಚಿತ್ತಾಶ್ರಯದಲ್ಲಿ ಎನ್ನನಿರಿಸದಿರಾ ಸುಚಿತ್ತವಾಗಿ ಬಸವನೆಂದೆನಿಸಾ ಕೂಡಲಚೆನ್ನಸಂಗಯ್ಯಾ ಎನ್ನ ಚಿತ್ತವು ಕಾಡಿಹುದಯ್ಯಾ.