ಹೊಲೆ ಹೊಲೆ ಎಂದನಯ್ಯಾ ಬಸವಣ್ಣ. ಹೊಲೆ ಹುಟ್ಟಿದ ಮೂರು ದಿನಕ್ಕೆ ಪಿಂಡಕ್ಕೆ ನೆಲೆಯಾಯಿತ್ತು. ನರರಿಗೆ ಹೊಲೆ ಸುರರಿಗೆ ಹೊಲೆ ಹರಿಬ್ರಹ್ಮಾದಿಗಳಿಗೆ ಹೊಲೆ. ಇಂತೀ ಹೊಲೆಯಲ್ಲಿ ಹುಟ್ಟಿ ಹೊಲೆಯನತಿಗಳೆದೆನೆಂಬ ಉಭಯಭ್ರಷ್ಟರ ಮುಖವ ನೋಡಲಾಗದು_ ಕೂಡಲಚೆನ್ನಸಂಗಮದೇವಾ