ನದಿಯ ತಿರಿಯವೊಲುರುಳಿ ಹೊರಳುರಿರುವುದು ಜೀವ|
ಮೊದಲಿಲ್ಲ ಮುಗಿವಿಲ್ಲ ನಿಲುವಿಲ್ಲವದಕೆ||
ಬದುಕೇನು ಸಾವೇನು ಸೊದೆಯೇನು ವಿಷವೇನು ?|
ಉದಕಬುದ್ಬುದವೆಲ್ಲ! - ಮಂಕುತಿಮ್ಮ|| ೧೮
(ತೆರೆಯ+ಒಲು+ಉರುಳಿ) (ಹೊರುಳುತ+ಇರುವುದು) (ನಿಲುವಿಲ್ಲ+ಅದಕೆ) (ಉದಕ+ಬುದ್ಬುದ+ಎಲ್ಲ)
ಈ ಜಗತ್ತಿನಲ್ಲಿರುವ ಜೀವಿಗಳು ನದಿಯ ತೆರಿಗಳಂತೆ ಉರುಳಿ ಹೊರಲಾಡುತ್ತಿವೆ. ಅದರಂತೆಯೇ ಇವಕ್ಕೆ ಮೊದಲು,ನಿಲುವು ಮತ್ತು ಕೊನೆ ಇಲ್ಲ. ಅಂತೆಯೇ ಜನರ ಬದುಕು,
ಸಾವು, ಅಮೃತ ಅಥವಾ ವಿಷ, ಇವುಗಳೆಲ್ಲವೂ ನೀರಿನ ಗುಳ್ಳೆಗಳು. ಈವತ್ತು ಇರುತ್ತವೆ, ನಾಳೆ ಹೋಗುತ್ತವೆ. ಶಾಶ್ವತವಲ್ಲ.