ಏನು ಭೈರವಲೀಲೆಯೀ ವಿಶ್ವಭ್ರಮಣೆ! |
ಏನು ಭೂತಗ್ರಾಮನರ್ತನೋನ್ಮಾದ! ||
ಏನಗ್ನಿ ಗೋಳಗಳು! ಏನಂತರಾಳಗಳು! ||
ಏನು ವಿಸ್ಮಯ ಸೃಷ್ಟಿ! - ಮಂಕುತಿಮ್ಮ|| ೯
ಭೂತಗ್ರಾಮ+ನರ್ತನ+ಉನ್ಮಾದ) (ಏನು+ಅಗ್ನಿ) (ಏನು+ಅಂತ್ರಾಳಗಳು)
ಈ ವಿಷ್ವದ ತಿರುಗಾಟ ಎನ್ನುವುದು, ಒಂದು ಭೀಕರವಾದ ಆಟವೇ ಸರಿ. ಏನು ಪಂಚಮಹಾ ಭೂತಗಳ ಮತ್ತು ನಾನಾ ಪ್ರಾಣಿಚೈತನ್ಯಗಳ(ಭೂತಗ್ರಾಮ),
ಹುಚ್ಚಿಡುಸುವ ನೃತ್ಯ! ಏನು ಬೆಂಕಿಯ ಗೋಳಗಳು!ಏನು ಅವುಗಳ ನಡುವಿನ ಅವಕಾಶಗಳು(ಅಂತರಾಳ)! ಈ ಸೃಷ್ಟಿ ಎನ್ನುವುದು ಎಷ್ಟು ಆಶ್ಚರ್ಯಕರವಾಗಿದೆ, ನೋಡಲಿಕ್ಕೆ.