ಅತ್ತ ಇತ್ತ ಹರಿದಾಡುವ ಮನಸಿಗೆ
ಸಂಪಾದಿಸಿ- ಧ್ಯಾನದಲ್ಲಿ ಮನಸ್ಸನ್ನು ಕೇಂದ್ರಿಕರಿಸಲು ಬೋಧ:
ಅತ್ತ ಇತ್ತ ಹರಿದಾಡುವ ಮನಸಿಗೆ
ಮಚ್ಚಿಲ್ಹೊಡೆದು ನಿಲ್ಲಿಸು ಜಾಣ.||ಪಲ್ಲವಿ||
ಕಡುವಿಷಯದಿ ಸಂಸಾರಕೆ ಮರುಗುತ
ಪೊಡವಿ ತಳದಿ ಮಿಡಿಕ್ಯಾಡುವ ಮನಸಿಗೆ
ಮಚ್ಚಿಲ್ಹೊಡೆದು ನಿಲ್ಲಿಸು ಜಾಣ.||೧||
ಸಿರಿ ಸಂಪದ ಸೌಭಾಗ್ಯ ತನಗೆ ಬಲು
ಹಿರಿದಾಗಲಿಬೇಕೆಂಬುವ ಮನಸಿಗೆ
ಮಚ್ಚಿಲ್ಹೊಡೆದು ನಿಲ್ಲಿಸು ಜಾಣ.||೨||
ವಸುಧೆಯೊಳಗೆ ಶಿಶುನಾಳಾಧೀಶನ
ಹೆಸರು ಮರೆತು ಕೊಸರ್‍ಯಾಡುವ ಮನಸಿಗೆ
ಮಚ್ಚಿಲ್ಹೊಡೆದು ನಿಲ್ಲಿಸು ಜಾಣ.||೩||
ನೋಡಿ
ಸಂಪಾದಿಸಿಉಲ್ಲೇಖ
ಸಂಪಾದಿಸಿ- ಶಿಶುನಾಳ ಶರೀಫರ ಪದಗಳು -ಅನಾಮಿಕ