ಒಳ್ಳೇ ನಾರಿ ಕಂಡೆ ಸಂಪಾದಿಸಿ

  • ವಿಶ್ವದ ತಾಯಿ ದೇವಿಯ ವರ್ಣನೆ ಜ್ಞಾನ ಸ್ವರೂಪಿಣಿ ಶರಸ್ವತಿಯೂ ಅಹುದು: ಜಗತ್ತನ್ನು ಆವರಿಸಿರುವ ಮಾಯಾ ಸ್ವರೂಪಿಣಿಯೂ ಅಹುದು:

ಒಳ್ಳೇ ನಾರಿ ಕಂಡೆ - ಈಗಲೆ
ಒಳ್ಳೇ ನಾರಿ ಕಂಡೆ,
ಇಳೆಯ ತಳದಿ ತಪದೊಳು ನಿಂತು
ಕಳೆಯ ಋಷಿಗಳ ಮರಳು ಮಾಡುವ
 
ಕೈಯು ಕಾಲು - ಉಸುರು
ಮೈಯಿ ಮೊದಲೆ ಇಲ್ಲ;
ಚೆಲ್ಲುತ ಪರಮಾನಂದ ಎದಿಯೊಳು
ಎಲ್ಲವ ಬಿಡಿಸಿ ಕರುಣದಿ ಕಾಯುವ
 
ಮುಟ್ಟಲು ಕೊಲ್ಲುವಳೋ - ಕಾಮನ
ಕಟ್ಟಿ ಆಳುತಿಹಳೊ ;
ಬಟ್ಟಕುಂಚಕ, ಬರೆದಿಟ್ಟ ಕುಪ್ಪಸಕ
ನಟ್ಟು ಮನಸು ನಡೆಗೆಟ್ಟು ನಿಂತಿತೋ.
 
ಮೀಸಲು ನಗೆಯುವಳು - ಶಿಶುನಾಳಾ
ಧೀಶಗೆ ಸೋತವಳು ;
ವಾಸಿಸಿ ಗುಡಿಪುರದಿ - ಗೋವಿಂದನ
ದಾಸರನ್ನು ತಾ ಸೆಳೆಯುತಲಿಹಳು.[೧]

ನೋಡಿ ಸಂಪಾದಿಸಿ

ಶರೀಫ ಸಾಹಿತ್ಯ

ಉಲ್ಲೇಖ ಸಂಪಾದಿಸಿ

  • ಶಿಶುನಾಳ ಶರೀಫರ ಪದಗಳು -ಅನಾಮಿಕ
  1. ಕವನ ಸಂಗ್ರಹ.‎ ‎ಸಂತ ಶಿಶುನಾಳ ಶರೀಫ.‎ ಶಿಶುನಾಳ ಶರೀಫರ ಗೀತೆಗಳು.