ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೦೨

ಈ ಪುಟವನ್ನು ಪರಿಶೀಲಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.
೮೭

ಧ್ಯಾಹ್ನದಲ್ಲಿ ಬರುತ್ತೇವೆ ಕದಾಚಿತ್ ನಮ್ಮಿಬ್ಬರಲ್ಲಿ ಯಾವನಾದರೂ ಒಬ್ಬನೇ ಬಂದ ಪಕ್ಷದಲ್ಲಿ ಇವುಗಳನ್ನು ಕೊಡಬೇಡಿರಿ ! ನಾವಿಬ್ಬರೂ ಕೂಡಿಕೊಂಡೇ ಬಂದರೆ ಕೊಡಿರಿ:
ಆವರ್ತಕನು ಆ ಆಭರಣಗಳನ್ನು ತನ್ನ ಪೆಟ್ಟಿಗೆಯಲ್ಲಿ ಇಟ್ಟು ಕೊಂಡನು ಆಮೇಲೆ ಆ ಮೋಸಗಾರರು ಸ್ವಲ್ಪ ದೂರ ಹೋಗಿ ನಿಂತುಕೊಂಡರು ಮುಂದೆ ಸ್ವಲ್ಪ ಅವಕಾಶವನ್ನು ಬಿಟ್ಟು ಅವರೊಳಗಿನವನೊಬ್ಬನು ಆವತಕನ ಹತ್ತಿರ ಬಂದು;- “ ಸೇಟಸಾಹೇಬ ! ನಮ್ಮ ಆಭರಣಗಳನ್ನು ಕೊಟ್ಟು ಬಿಡಿರಿ ! ನಾಳ ನಾವು ಮಧ್ಯಾನ್ಹಕ್ಕೆ ಬರುವ ಮುಂದೆ ಅವುಗಳನ್ನು ತೆಗೆದುಕೊಂಡು ಬರುತ್ತೇವೆ ” ಎಂದು ಕೇಳಿದನು.
ವರ್ತಕ-ನಿಮ್ಮ ಸಂಗಡಿಗನು ಎಲ್ಲಿ ಇದ್ದಾನೆ ! ಮೋಸಗಾರ -(ಅಲ್ಲಿ ನಿಂತುಕೊಂಡಿದ್ದ, ಎರಡನೇ ಮೋಸಗಾರನನ್ನು ಬೆರಳಿನಿಂದ ತೋರಿಸಿ) ಅಗೋ, ಅಲ್ಲಿನಿಂತು ಕೊಂಡಿದ್ದಾನೆ ನೋಡಿರಿ. ಆಗ ಆ ವರ್ತಕನು ದೂರದಲ್ಲಿ ನಿಂತುಕೊಂಡಿದ್ದವನನ್ನು ನೋಡಿದನು. ಆ ಮೋಸಗಾರನು ಯಾವನ ಸಂಗಡಲೋ ಮಾತ ನಾಡುತ್ತ ನಿಂತುಕೊಂಡಂತೆ ಕಂಡಿತು ಆಗ ಅವನು ಅಂಗಡಿಯೊಳಗೆ ಬಂದು ಪೆಟ್ಟಿಗೆಯಲ್ಲಿ ಇಟ್ಟದ್ದ ಆಭರಣಗಳನ್ನು ತೆಗೆದು ವಿಶ್ವಾಸದಿಂದ ಆ ಮೋಸ ಗಾರನ ಕೈಯಲ್ಲಿ ಕೊಟ್ಟನು.
ಮರುದಿವಸ ಮಧ್ಯಾಹ್ನದಲ್ಲಿ ಆ ಎರಡನೇ ಠಕ್ಕನು, ಆವರ್ತಕನ ಬಳಿಗೆ ಬಂದು ಆಭರಣಗಳನ್ನು ಕೊಡಿರಿ ! ಎಂದು ಕೇಳಹತ್ತಿದನು. ಆಗ ಆ ವರ್ತಕನು ಅನ್ನುತಾನೆ;- "ನಿಮ್ಮ ಜೊತೆಗಾರನು ಆಕೂಡಲೇ ಬಂದು, ಆಭರಣಗಳನ್ನು ತೆಗೆದುಕೊಂಡು ಹೋದನು ಈಗ ನೀನೇಕೆ ಕೇಳಲಿಕ್ಕೆ ಬಂದಿ ? ಅವನು ಈ ಸಂಗತಿಯನ್ನು ನಿನಗೆ ತಿಳಿಸಲಿಲ್ಲವೋ ?
ಮೋಸಗಾರ-"ಇಂಥ ಮೋಸದ ಮಾತುಗಳನ್ನು ನನ್ನೆದುರಿಗೆ ಹೇಳಬೇಡ ನಾವಿಬ್ಬರೂ ಕೂಡಿಕೊಂಡು ಬಂದರೇ ಆಭರಣಗಳನ್ನು ಕೊಡಿರಿ ಎಂದು ನಾವು ಮೊದಲೇ ಹೇಳಿದ್ದಿಲ್ಲವೇ ? ಹೀಗಿದ್ದು ಬುದ್ಧಿವಂತನೆಂದು ಹೆಸರಾಗಿರುವನು, ಅವನೊಬ್ಬನೇ ಬಂದಕಾಲದಲ್ಲಿ ಯಾಕೆ ಕೊಟ್ಟ ! ನಾನೇನು ಹೀಗೆ ಹೋಗತಕ್ಕವನಲ್ಲ ! ಆಭರಣಗಳನ್ನು ಕೊಟ್ಟುಬಿಡು !!
ವರ್ತಕ-ನೀನು ನಮ್ಮ ಅಂಗಡಿಯಿಂದ ಸ್ವಲ್ಪದೂರದಲ್ಲಿ ನಿಂತುಕೊಂಡಿದ್ರಿ ಆಗ ನಿನ್ನ ಜತೆಗಾರನು ಬಂದು ಆಭರಣಗಳನ್ನು ತೆಗೆದುಕೊಂಡು