ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೦೩

ಈ ಪುಟವನ್ನು ಪರಿಶೀಲಿಸಲಾಗಿದೆ
೮೮
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.



ಹೋದನು.
ಮೋಸಗಾರ:- ನಾನೇನು ಅವುಗಳನ್ನು ತೆಗೆದುಕೊಂಡು ಬಾ ಎಂದು ಹೇಳಿ ದ್ದಿಲ್ಲ ಇಂಥ ಒಣಮಾತುಗಳಿಂದ ಪ್ರಯೋಜನವಿಲ್ಲ ನನ್ನ ಆಭರಣಗಳನ್ನು ನನಗೆ ಕೊಟ್ಟು ಬಿಡು ! ಇಲ್ಲದಿದ್ದರೆ ನ್ಯಾಯಾಧೀಶನ ಎದುರಿಗೆ ನಿನ್ನನ್ನು ನಿಲ್ಲಿಸುವೆನು.
ಈ ಪ್ರಕಾರ ಅವರಿಬ್ಬರ ನಡುವೆ ಕೆಲವು ಹೊತ್ತು ವಾದವಿವಾದ ಮೇಲೆ ವರ್ತಕನು ಸಿಟ್ಟಿಗೆದ್ದು"ನಾನಂತೂ ಈ ಮೊದಲೇ ಆಭರಣಗಳನ್ನು ಕೊಟ್ಟು ಬಿಟ್ಟಿದ್ದೇನೆ. ಎಂದು ಸತ್ಯವಾಗಿ ಹೇಳುತ್ತೇನೆ. ಇದರಮೇಲೆ ನೀನು ಬೇಕಾದಲ್ಲಿ ಹೋಗಿ ಹೇಳು ! ಎಂದು ನುಡಿದನು.
ಆ ಕೂಡಲೆ ಆ ಎರಡನೇ ಮೋಸಗಾರನು ಬೀರಬಲನ ಹತ್ತಿರಹೋಗಿ ತನ್ನ ವೃತ್ತಾಂತವನ್ನು ತಿಳಿಸಿದನು. ಬೀರಬಲನು ಆ ಠಕ್ಕನ ಯಾವತ್ತು ಸಂಗತಿಯನ್ನು ಕೇಳಿಕೊಂಡ ಮೇಲೆ ಆ ಸಾವುಕಾರನನ್ನು ತನ್ನ ಹತ್ತಿರ ಕರಿಸಿಕೊಂಡನು ಆಗ ಆವರ್ತಕನು ಬಂದು ತನ್ನ ಅಂಗಡಿಯಲ್ಲಿ ನಡೆದ ಯಾವತ್ತು ಸಂಗತಿಯನ್ನು ತಿಳಿಸಿ ತನ್ನ ನೆರೆ ಹೊರೆಯ ನಾಲ್ಕು ಜನ ಪ್ರತಿಷ್ಟಿತರಾದ ವರ್ತಕರ ಸಾಕ್ಷಿಯನ್ನು ಕೊಟ್ಟನು. ಈ ವೃತ್ತಾಂತವನ್ನೆಲ್ಲ ಕೇಳಿಕೊಂಡ ಮೇಲೆ ವಾದಿಯು ಮೋಸಗಾರ ನಾಗಿದ್ದಾನೆಂಬ ನಂಬಿಕೆಯ ಹುಟ್ಟಿತು ಈ ವರ್ತಕನ ಮೇಲೆ ಸುಮ್ಮನೆ ಅಪವಾದವನ್ನು ಹೊರಿಸಿದ್ದಾನೆ ಎಂದು ಮನವರಿಕೆ ಮಾಡಿಕೊಂಡು ಆ ಮೋಸಗಾರನನ್ನು ಕುರಿತು " ಈವ೯ರೂ ಕೂಡಿಕೊಂಡು ಬಂದರೇ ಆಭರಣಗಳನ್ನು ಕೊಡಬೇಕೆಂದು ?” ಹೇಳಿ ದ್ದಿಯಷ್ಟೆ ಎಂದು ಪ್ರಶ್ನೆ ಮಾಡಿದನು. ಆಗ ಆ ಠಕ್ಕನು ಮಹರಾಜ ಅಹುದು, ಹೀಗೆ ನಾವು ಹೇಳಿದ್ದೆವು” ಎಂದನು. ಆಗ ಬೀರಬಲನು;- ಹಾ ಗಾದರೆ ಆಭರಣಗಳನ್ನು ತೆಗೆದುಕೊಂಡು ಹೋಗಲಿಕ್ಕೆ ನೀನೊಬ್ಬನೇ ಯಾ ಕೆಬಂದಿ ? ಎಂದು ಪುನಃ ಪ್ರಶ್ನೆ ಮಾಡಿದನು.
ಆಗ ಮೋಸಗಾರನು ಏನೂ ಮಾತಾಡದೆ ಅಲ್ಲಿಂದ ಹೊರಟು ಹೋದನು. ಆ ಮೇಲೆ ಬೀರಬಲನು ಆ ವರ್ತಕನಿಗೆ "ಇನ್ನು ಮೇಲೆ ಆ ಆಭರಣ ಬೇಡಲಿಕ್ಕೆ ಯಾರಾದರೂ ಬಂದರೆ ಅವರನ್ನು ನನ್ನ ಹತ್ತಿರ ಕರೆದುಕೊಂಡು ಬಾ ಎಂದು ಹೇಳಿ ಆ ವರ್ತಕನನ್ನು ಕಳುಹಿಸಿಕೊಟ್ಟನು. ಆದಿನ ಮೊದಲ್ಗೊಂಡು ಆ ಮೋಸಗಾರರು ಆ ವರ್ತಕನಿಗೆ ತಮ್ಮ ಕೃಷ್ಣ ಪದನವನ್ನು ಬಂದೂ ತೋರಿಸಲಿಲ್ಲ.