ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೦೯

ಈ ಪುಟವನ್ನು ಪ್ರಕಟಿಸಲಾಗಿದೆ

ಟೆಂಪ್ಲೇಟು:Rh=೪೯


"ಯಾವನು ಅರ್ಧಬಿಸಿಲಿನಲ್ಲಿಯೂ, ಅರ್ಧಛಾಯೆಯಲ್ಲಿಯೂ ನನ್ನ ಎದು `ಗೆ ಬರುವನೋ, ಅವನಿಗೆ ಒಂದು ಸಾವಿರ ರೂಸಾಯಿಗಳನ್ನು ಜಾರಿತೋ ಪಕವಾಗಿ ಕೊಡುವೆನು ?” ಎಂದು ಡಂಗುರವನ್ನು ಸಾರಿಸಿದನು. ಈ ವರ್ತ ಮಾನವು ಕರ್ಣೋದಕರ್ಣವಾಗಿ ಬೀರಬಲನಿದ್ದ ಗ್ರಾಮಕ್ಕೆ ಬಂದು ತಲುಪಿ ತು; ಆಗ ಅವನು ಒಂದು ಹೊರಸನ್ನು ತರಿಸಿ, ಒಬ್ಬ ಮನುಷ್ಯನಿಗೆ ಕೋ ಟ್ಟು ಇದನ್ನು ತೆಗೆದುಕೊಂಡು ಹೋಗಿ ಬಾದಶಹನ ಸಮ್ಮುಖದಲ್ಲಿ ನಿಂತು ಕೊಂಡು ತಮ್ಮ ಅಪ್ಪಣೆಯ ಮೇರೆಗೆ ಅರ್ಧ ಬಿಸಿಲಿನಲ್ಲಿಯೂ ಅರ್ಧ ಛಾ ಯೆಯಲ್ಲಿಯೂ ಬಂದಿದ್ದೇನೆ. ತಾವು ಪಾರಿತೋಷಕವಾಗಿ ಕೊಡುತ್ತೇವೆಂದು ಪ್ರಕಟ ಪಡಿಸಿದ ಪ್ರಕಾರ ನನಗೆ ಒಂದು ಸಾವಿರ ರೂಪಾಯಿಗಳನ್ನು ಕೊಡಬೇಕು ” ಎಂದು ಕಲಿಸಿ ಕೊಟ್ಟು ಅವನನ್ನು ಕಳುಹಿಸಿದನು.


ಬೀರಬಲನ ಕೀಕ್ಷಾನು ಸಾರವಾಗಿ ಆ ಮನುಷ್ಯನು ಆಹೊರಸ(ಖಾ ಜನ್ನು ತಲೆಯ ಮೇಲೆ ಹೊತ್ತುಕೊಂಡು ಬಾದಕಹನ ಎದುರಿಗೆ ಬಂದು ನಿಂತುಕೊಂಡು ಬೀರಬಲನು ಕಲಿಸಿಕೊಟ್ಟಂತೆ ನಿವೇದನ ಮಾಡಿದನು. ಆಗ ಬಾದಕನು “ ಎಲೈ ನಿನಗೆ ಈ ಯುಕ್ತಿಯನ್ನು ಯಾರು ಹೇಳಿದರು! ಎಂಬ ಸಂಗತಿಯನ್ನು ನಿಜವಾಗಿ ಹೇಳು ! ಎಂದು ಆಜ್ಞಾಪಿಸಿದನು. ಆಗ ಆ ಮ ನುಷ್ಯನು, “ ಪೃಥ್ವಿನಾಥ ನಮ್ಮ ಊರಲ್ಲಿ ಬೀರಬಲನೆಂಬ ಒಬ್ಬ ಬ್ರಾ ಹ್ಮಣನಿದ್ದಾನೆ. ಅವನೇ ನನಗೆ ಈ ಹಂಚಿಕೆಯನ್ನು ಕಲಿಸಿಕೊಟ್ಟನು" ಎಂದು ವಿಜ್ಞಪ್ತಿಯನ್ನು ಮಾಡಿಕೊಂಡನು. ಈ ಮಾತನ್ನು ಕೇಳಿದ ಕೂಡಲೇ ಆ ಬಾದಶಹನಿಗೆ ಬಹಳ ಹರುಪವಾಯಿತು. ಆಗ ಆ ಮನುಷ್ಯನಿಗೆ ಒಂದುಸಾ ವಿರ ರೂಪಾಯಿಗಳನ್ನಿತ್ತು ಬೀರಬಲನನ್ನು ಕರೆಯಿಸಿಕೊಂಡನು


- ೩೬ ನೀನು ದೊಡ್ಡ ಕತ್ತೆಯಾಗಿರುವಿ !

ಒಂದು ಸಮಯದಲ್ಲಿ ಬಾದಶಹನ ಬೀರಬಲನೂ ಮಾತಾಡುತ್ತ ಬಹಳ ಹೊತ್ತು ಕುಳಿತುಕೊಂಡಿದ್ದರು. ಆಗ ಅಕಸ್ಮಾತ್ತಾಗಿ ಬೀರಬಲನಿಂ ದ ಅಧೋವಾಯುವು ಹೊರಟಿತು ಆಗ ಬಾದಷಹನು, - ( ನೀನು ದೊಡ್ಡಕ ತ್ತೆಯಾಗಿರುವಿ ” ಎಂದನು. ಅದಕ್ಕೆ ಬೀರಬಲನು ; ( ಪ್ರಭುವೇ ! ನಾನು ಮೊದಲು ಒಳ್ಳೆಬುದ್ಧಿವಂತನಿದ್ದೆನು. ಆದರೆ ಈಗ ತಮ್ಮ ಸಂಗಡ ಇದ್ರದ ರಿಂದ ಕತ್ತೆಯಾಗ ಬೇಕಾಯಿತು” ಎಂದು ಉತ್ತರ ಕೊಟ್ಟನು ಬಾದಶಹ ನು ನಿರುತ್ತರನಾದನು.

- ೩೭. ಯಾತರ ಮೇಲೆ ಹತ್ತುವಿರಿ !)

ಬಾದಕಹನೂ ಬೀರಬಲನ ಕೂಡಿಕೊಂಡು ಮೃಗಯಾವಿಹಾರಕ್ಕೆ