ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೧೦

ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರವಾದ ವಿನೋದ ಕಥೆಗಳು.
೯೫


ಹೋಗಿದ್ದರು ಆಗ ಒಂದು ಕೃಷ್ಣಮೃಗವು ದೃಷ್ಟಿಗೆ ಬಿದ್ದದ್ದರಿಂದ ಇಬ್ಬರೂ ಬಹುದೂರ ಹೋಗಿ ಬಿಟ್ಟರು, ಬಳಿಯಲ್ಲಿ ತಿನ್ನುವದಕ್ಕೆ ಏನೂ ಇದ್ದಿಲ್ಲ ಬಿಸಿಲು ಬಲಿಯಿತು. ಆಗ ಅವರು ಶ್ರಾಂತರಾಗಿ ಒಂದು ಮರಕ್ಕೆ ಕುದುರೆಗೆಳನ್ನು ಕಟ್ಟಿ, ಶ್ರಮ ನಿವಾರಣಿಯಗೋಸುಗ ಕುಳಿತುಕೊಂಡರು ಆದರೆ ಕ್ಷುದ್ಬಾಧೆಯು ಸಹಿಸಲಸದಳವಾಯಿತು. ಬಾದಶಹನು ಕುದುರೆಯ ತೋಬರಿಯಲ್ಲಿದ್ದ ಕಡಲೇ ಕಾಳುಗಳನ್ನು ತಿನ್ನ ಹತ್ತಿದನು ಅಕಸ್ಮಾತ್ತಾಗಿ ಮೂರು ನಾಲ್ಕು ಜನ ಸ್ತ್ರೀಯರು ಆ ಮಾರ್ಗವಾಗಿ ಹೋಗುತ್ತಿದ್ದರು ಅವರನ್ನು ನೋಡಿ ಕುದುರೆಗಳು ಹೇಷಾರವವನ್ನು ಮಾಡಿರವು ಆಗ ಬಾದಶಹನು ಆ ಸ್ತ್ರೀಯರಿಗೆ, “ ನಿಮ್ಮನ್ನು ನೋಡಿ ಕುದುರೆಗಳು ಏನು ಹೇಳಹತ್ತಿವೆ ? ಎಂದು ಪ್ರಶ್ನೆ ಮಾಡಿದನು. ಆಗ ಆ ಸ್ತ್ರೀಯರು. ಎಲೋ ಯಾತ್ರಿಕರೇ ಆ ಕುದುರೆಗಳು ಹೇಳಿದ್ದೇನಂದರೆ, ಈ ನಮ್ಮ ಮೇಲೆ ಕುಳಿತು ಕೊಳ್ಳತಕ್ಕ ಯಜಮಾನರು ನಮ್ಮ ತೋಬರಿಯೊಳಗಿನ ಕಾಳುಗಳನ್ನು ತಿನ್ನ ಹತ್ತಿದ ಮೇ ಲೆ, ತಿರುಗಿ ಯಾತರ ಮೇಲೆ ಹತ್ತಿಕೊಂಡು ಹೋಗುವರು! ” ಎಂದು ನಮಗೆ ಪ್ರಶ್ನೆ ಮಾಡಿದವು ” ಎಂದು ಉತ್ತರಕೊಟ್ಟು ತಮ್ಮ ಮಾರ್ಗವನ್ನು ಹಿಡಿ ದು ಹೋದರು.
- (೩೮, ಮುಂದೆ ಹೋಗಿ ಸಾಯಬೇಕೆನ್ನುವಿಯಾ ? )-
ಒಂದು ದಿವಸ ಬಾದಶಹನು ಯಾವ ಒಂದು ಉನ್ನತವಾದ ಸ್ಥಳದಮೇಲೆ ಹೋಗಬೇಕೆಂದು ನಿಚ್ಚಣಿಕೆಯನ್ನು ಹಚ್ಚಿ ಏರಹತ್ತಿದ್ದನು. ಆಗ ಬಾದಶಹನು, ನಾನು ಈ ನಿಚ್ಚಣಿಕೆಯ ಕಡೆಯ ಹಲ್ಲನ್ನು ಮುಟ್ಟುವದ ರೊಳಗಾಗಿ ನೀನು ನನಗೆ ನಗೆಯು ಬರುವಹಾಗೆ ಮಾಡದಿದ್ದರೆ ನಿನ್ನ ಆಯುಷ್ಯವು ಈ ದಿವಸ ತೀರಿತೆಂದು ತಿಳಿದುಕೊ ! ” ಎಂದು ಹೇಳಿದನು. ಆಗ ಬೀರಬಲನು ಅನೇಕ ಪ್ರಕಾರದ ಹಾಸ್ಯದ ಮಾತು ಕಥೆಗಳನ್ನು ಹೇಳಹತ್ತಿದನು, ಆದರೆ ಬಾದಶಹನು ಒಂದು ತುಟಿಯನ್ನು ಎರಡು ಮಾಡಲಿಲ್ಲ. ಇನ್ನು ಆ ನಿಚ್ಚಣಿಕೆಯ ಹಲ್ಲು ಒಂದೇ ಉಳಿಯಿತು. ಆಗ ಬೀರಬಲನು "ಯಾಕೆ ? ಈಗ ಮುಂದೆಹೋಗಿ ಸಾಯಬೇಕೆನ್ನು ವಿಯಾ ? ” ಎಂದು ನುಡಿದನು, ಅದನ್ನು ಕೇಳಿದಕೂಡಲೆ ಬಾದಶಹನು. ಕಿಲಕಿಲ ನಕ್ಕನು.
-( ೩೯, ವುನೋಚಂದ್ರಕೊ ಚೀರ ಕುಸುಮ ಚುವಾಯೋ.) -
ಒಂದು ಸಾರೆ ಬಾದಶಹನು ತನ್ನ ಪ್ರಿಯ ಪಾತ್ರಳಾದ ರಾಣಿಗೆ ತನ್ನ ಬಾಯಿಯಲ್ಲಿದ್ದ ವೀಳ್ಯವನ್ನು ತಿನಿಸಿದನು ಅವಳು ತಾಂಬೂಲವನ್ನು ಮುಖದಲ್ಲಿ ಇಟ್ಟುಕೊಂಡು ಹಿಂದಕ್ಕೆ ಸರಿಯಬೇಕೆನ್ನು ವಷ್ಟರಲ್ಲಿ ಬಾದಶ