ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೧೫

ಈ ಪುಟವನ್ನು ಪ್ರಕಟಿಸಲಾಗಿದೆ
೧೦೦
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು. -



ಹನು ಸಂತುಷ್ಟನಾಗಿ ಪಾರಿತೋಷಕವನ್ನಿತ್ತನು,
೪೭. ನೂರು ಗೋವುಗಳನ್ನು ರಕ್ಷಿಸುವದೂ, ಅಥವಾ ಕೊಲ್ಲಿಸುವದೂ ನಿಮ್ಮ ಕೈಯಲ್ಲಿಯೇ ಅದೆ,
ಒಂದುದಿವಸ ಬೀರಬಲನಿಗೂ ಮತ್ತು ತಾನಸೇನನಿಗೂ ತಮ್ಮ ತಮ್ಮ ಲಿದ್ದ ಗುಣಗಳು ಶ್ರೇಷ್ಟವಾದದ್ದೆಂಬದರ ಬಗ್ಗೆ ವಾದವಿವಾದವು ನಡೆಯಿತು, ಆಗ ಬಾದಶಹನು " ಈ ಪ್ರಕಾರ ನೀವಿಬ್ಬರೂ ವಾದವಿವಾದಮಾಡುತ್ತ ಕುಳಿತುಕೊಳ್ಳುವದು ಸರಿಯಾದದ್ದಲ್ಲ. ಆದ್ದರಿಂದ ನೀವಿಬ್ಬರೂ ಕೂಡಿ ಯಾವನಾದರೊಬ್ಬ ಮೂರನೆಯವನ ಹತ್ತಿರ ಹೋಗಿ ನ್ಯಾಯದ ನಿರ್ಣಯವನ್ನು ಮಾಡಿಕೊಂಡು ಬರ್ರಿ ” ಎಂದು ಹೇಳಿದನು. ಆಗ ಅವರಿಬ್ಬರು ತಾವು ಯಾರ ಬಳಿಯಲ್ಲಿ ಹೋಗೆಂದು ಹೇಳುವಿರೋ ಅಲ್ಲಿಗೆ ಹೋಗುತ್ತೇವೆ ಎಂದು ಉತ್ತರಕೊಡಲು, ಬಾದಶಹನು- ಮಹಾರಾಣಾ ಪ್ರತಾಪಸಿಂಹನ ಬಳಿಯಲ್ಲಿ ಹೋಗಿರಿ; ಎಂದು ಆಜ್ಞಾಪಿಸಿದನು. ಆ ಕೂಡಲೇ ಅವರಿಬ್ಬರು ಉದಯಪುರಕ್ಕೆ ಬಂದರು, ತಾನಸೇನನು ಗಾನನಿಪುಣನಿದ್ದನು ಅವನು ಮಹಾರಾಣಾಜಿಯ ಬಳಿಯಲ್ಲಿ ಹೋಗಿ ಗಾಯನವಾದನವನ್ನಾರಂಭಿಸಿದನು ಬೀರಬಲನು ಸಮಯ ನಿರೀಕ್ಷಣೆ ಮಾಡುತ್ತ ಕುಳಿತುಕೊಂಡನು. ಆಗ ಬೀರಬಲನ ಮನಸ್ಸಿನಲ್ಲಿ ತಾನಸೇನನು ತನ್ನ ಗಾನ ನೈಪುಣ್ಯದಿಂದ ಮಹಾರಾಣಾಜಿಯ ಮನಸ್ಸನ್ನು ಒಲಿಸಿಕೊಂಡು ಜಯಪತ್ರವನ್ನು ಹೊಂದಿ ಹೋಗಬಹುದು, ಎಂದು ಯೋಚಿಸಿ ಸ್ವಲ್ಪ ಮುಂದೆ ಬಂದು ನಮಸ್ಕಾರ ಮಾಡಿ, ಮಹಾರಾಣಾಜಿಯವರೇ ? ನಾವಿಬ್ಬರೂ ಬಾದಶಹನಿಂದ ಆಜ್ಞಪ್ತರಾಗಿ ತಮ್ಮ ಸನ್ನಿಧಿಗೆ ಬರುವ ಸಮಯದಲ್ಲಿ ನಾನುತಮ್ಮ ಪುಷ್ಕರಕ್ಷೇತ್ರದಲ್ಲಿ ಹೋಗಿ “ ನಾನು ಮಹಾರಾಣಾ ಜಿಯವರಿಂದ ಜಯಪತ್ರವನ್ನು ಹೊಂದಿದರೆ ಒಂದುನೂರು ಗೋವುಗಳನ್ನು ದಾನಮಾಡುತ್ತೇನೆಂದು ” ಸಂಕಲ್ಪ ಮಾಡಿಕೊಂಡು ಬಂದಿದ್ದೇನೆ, ತಾನಸೇನನು ಖಾಜೇಸಾಹೇಬನ ದರಗಾಕ್ಕೆ ಹೋಗಿ ನನಗೆ ಈ ಪ್ರಸಂಗದಲ್ಲಿ ರಾಣಾಜಿಯವರು ಮಾನಪತ್ರವನ್ನು ಕೊಟ್ಟರೆ ನಿನ್ನ ದರಗಾದ ಎದುರಿಗೆ ಒಂದು ನೂರು ಆಕಳುಗಳನ್ನು ಕೊಲ್ಲುತ್ತೇನೆ; - ಎಂಬದಾಗಿ ನಿಶ್ಚಯಮಾಡಿಕೊಂಡು ಬಂದಿದ್ದಾನೆ, ಆದ್ದರಿಂದ ನೂರು ಆಕಳುಗಳನ್ನು ಕೊಲ್ಲಿಸುವ ಅಥವ ಉಳಿಸುವದೂ ನಿಮ್ಮ ಕೈಯೊಳಗೇ ಆದೆ ಎಂದನು. ಆಗ ರಾಣಾಜಿಯು ಬೀರಬಲನು ಒಳ್ಳೆ ಗುಣವಂತನಿದ್ದಾನೆ ಎಂದು ಬರೆದು ಕಳುಹಿಸಿದನು. ತಾನ ಸೇನನು ಬಾಯಿಮುಚ್ಚಿಕೊಂಡು ಸುಮ್ಮನೇ ಬಂದುಬಿಟ್ಟನು,