ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೧೬

ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು,
೧೦೧


೪೮. ಖುರಾನ ಎಂಬ ಗ್ರಂಥಕ್ಕೆ (೦) ಬಿಂದುವಿಲ್ಲದೆ ಇರುವ ಶಬ್ದಗಳಿಂದ ಮಾಡಿದ ಟೀಕೆಯು,,

ಮುಸಲ್ಮಾನ ಜಾತಿಯಲ್ಲಿ ಒಳ್ಳೇ ಪ್ರಸಿದ್ಧ ವಿದ್ವಾಂಸನಾಗಿಯೂ ಪ್ರತಿಷ್ಠಿತ ಮಂತ್ರಿಯಾಗಿಯೂ ಇದ್ದ ಶೇಖಫೈಜಿ ಎಂಬವನು ಖುರಾನಕ್ಕೆ "ಸವಾಹತ ಉಲ್ ಇಲಹಾಮ್ ” ಎಂಬ ಹೆಸರಿನ ಟೀಕಾಗ್ರಂಥವನ್ನು ಬರೆದನು. ಅದರಲ್ಲಿ ಬಿಂದುವಿಲ್ಲದ ಶಬ್ಬಗಳೇ ಬಂದಿದ್ದವು, ಇಂಥ ಅಮೌಲಿಕ ಗ್ರಂಥವನ್ನು ಹಿಂದಕ್ಕೆ ಯಾರೂ ರಚಿಸಿದ್ದಿಲ್ಲ; ಯಾಕಂದರೆ ಫಾರಸೀ, ಮತ್ತೂ ಅರಬ್ಬಿ ಅಕ್ಷರಗಳಲ್ಲಿ ಬಿಂದುವಿಲ್ಲದ ಅಕ್ಷರಗಳು ಹದಿನೈದು, ಬಿಂದುವಿನಿಂದ ಕೂಡಿದ ಅಕ್ಷರಗಳು ಹದಿನೆಂಟು ಇರುವವು ಈ ಕೆಲಸವು ಒಳ್ಳೆ ಪ್ರಶಂಸಾರ್ಹವಾಗಿತ್ತು, ಆದರೆ "ಬಿಸಮಿಲ್ಲಾ” ಎಂಬ ಶಬ್ದವನ್ನು ಬರೆಯುವದಕ್ಕೆ ಅವನಿಗೆ ಗ್ರಂಥಾರಂಭದಲ್ಲಿಯೇ ಸಂದೇಹವುಂಟಾಯಿತು. ಯಾಕಂದರೆ- ಈ ಶಬ್ಬವನ್ನು ಬರೆಯುವದು ಬಹುಕಾಲದಿಂದ ಮುಸಲ್ಮಾನರಲ್ಲಿ ಪ್ರಚಾರವಿತ್ತು ಆದರೆ ಆ ಶಬ್ಬವು ಬಿಂದುವಿಲ್ಲದೆ ಬರಿಯಲಿಕ್ಕೇ ಬರುವಂತೆಯಿದ್ದಿಲ್ಲ ಅದರಿಂದ ಅವನು ಬಹಳಚಿಂತೆಗೊಳಗಾದನು. ಕಡೆಗೆ ಅವನು ಬೀರಬಲನ ಬಳಿಗೆ ಬಂದು, "ಮಿತ್ರವರ್ಯ ? ನಾನು ಬಿಂದುವಿಲ್ಲದ ಶಬ್ದಗಳಿಂದ ಖುರಾನಕ್ಕೆ ಟೀಕೆಯನ್ನು ಬರೆದಿದ್ದೇನೆ. ಆದರೆ ಗ್ರಂಥಾರಂಭದಲ್ಲಿ "ಬಿಸಮಿಲ್ಲಾ", ಎಂಬ ಶಬ್ಬವನ್ನು ಹಾಕುವ ಪದ್ಧತಿಯು ನಮ್ಮ ಜನರಲ್ಲಿ ಉಂಟು; ಆದರೆ ಆ ಶಬ್ಬವು ಬಿಂದುವಿಲ್ಲದೆ ಬರೆಯಲಿಕ್ಕೆ ಬರುವದಿಲ್ಲ. ಆದರಿಂದ ಆ ಸ್ಥಳದಲ್ಲಿ ಯಾವ ಶಬ್ಧದ ಯೋಜನೆಮಾಡಲಿ, ಎಂದು ಕೇಳಿದನು, ಬೀರಬಲನು ಒಳ್ಳೇ ದೂರದರ್ಶಿಯಾಗಿದ್ದದರಿಂದ ಆ ಕೂಡಲೆ "ಕಲಮಾ, ಎಂದು ಬರೆ;" ಎಂದು ಹೇಳಿದನು. ಆಗ ಪೈಜಿಯು ಅವನ ಜಾಣತನಕ್ಕೆ ತಲೆದೂಗಿದನು. “ ಕಲಮಾ ಎಂಬ ಶಬ್ಬದಲ್ಲಿ ಬಿಂದುವೇ ಬರುವಂತೆ ಇದ್ದಿಲ್ಲ, ಕಡೆಗೆ ಪೈಜಿಯು "ಪಂಡಿತ ಮಹಾಶಯ ? ಈ ಒಂದೇ ಶಬ್ದವನ್ನು ನೀನು ನನಗೆ ಹೇಳಿದ್ದರಿಂದ ಈ ಗ್ರಂಥದಲ್ಲಿ ಗುರುವಿನ ಸ್ಥಾನದಲ್ಲಿ ನಿನ್ನ ಹೆಸರನ್ನು ಬರೆಯುತ್ತೇನೆ ಎಂದು ಹೇಳಿದನು.

-(೪೯ ಯಾತರದು ಒಳ್ಳೇದು.)-,

ಒಂದು ದಿವಸ ಬಾದಶಹನು ಓಲಗದಲ್ಲಿ ಕುಳಿತುಕೊಂಡಿದ್ದನು. ರಾಜಕಾರ್ಯಗಳ ವಿಚಾರಣೆಯ ನಡೆದಿತ್ತು ? ಆಷ್ಟರಲ್ಲಿ ಬೀರಬಲನು ಸಭಾಸ್ಥಾನಕ್ಕೆ ಬಂದನು ಅದನ್ನು ಕಂಡು ಬಾದಶಹನು; “ಕ್ಷೀರವು ಯಾವ