ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೧೭

ಈ ಪುಟವನ್ನು ಪ್ರಕಟಿಸಲಾಗಿದೆ
೧೦೨
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು,


ಪ್ರಾಣಿಯದು ಒಳ್ಳೇದು; ಯಾವ ವೃಕ್ಷದ ಪರ್ಣಗಳು ಶ್ರೇಷ್ಟವು ಯಾವ ಪುಷ್ಪವು ಶ್ರೇಷ್ಠವಾದದ್ದು; ಯಾವ ಫಲವು ಉತ್ತಮ? ಯಾವ ರಾಜನು ಶ್ರೇಷ್ಠನು ಯಾವ ಮಾಧುರ್ಯವು ಶ್ರೇಷ್ಠವಾದದ್ದು?" ಎಂದು ಪ್ರಶ್ನೆ ಮಾಡಿದನು. ಬೀರಬಲನ ಹೊರತು ಉಳಿದ ಸಭಾಸದರೆಲ್ಲರು ಸುಮ್ಮನೆ ಕುಳಿತುಕೊಂಡರು ಬೀರಬಲನು ಕೈಮುಗಿದು "ಜೀಯಾ! ಕ್ಷೀರವು ಮಾತೆಯದು ಶ್ರೇಷ್ಠವಾದದ್ದು ಯಾಕೆಂದರೆ, ಸ್ತನ್ಯಪಾನದಿಂದಲೇ ಯಾವತ್ತು ಪ್ರಾಣಿಗಳ ಪಾಲನೆ ಪೋಷಣೆಯಾಗುವದು ವೀಳ್ಯದ ಎಲೆಯು ಶ್ರೇಷ್ಠವಾದದು: ಯಾಕಂದರೆ ಯಾವದಾದರೊಂದು ಕಾರ್ಯಕ್ಕೆ ಕೈಹಾಕಿದ ಮನುಷ್ಯನಿಗೆ, ಅವನ ಯಜಮಾನನು ನೆರೆದ ಸಭೆಯಲ್ಲಿ ವೀಳ್ಯವನ್ನು ಕೊಡುತ್ತಾನೆ. ಅದರಿಂದ ವೀಳ್ಯವನ್ನು ಸ್ವೀಕರಿಸಿದ ಮನುಷ್ಯನು ತನ್ನ ಪ್ರಾಣಾಂತ್ಯದವರೆಗೂ ಕಾರ್ಯವನ್ನು ಮಾಡಿಯೇ ತೋರಿಸುತ್ತಾನೆ. ಪುಷ್ಪಗಳಲ್ಲಿ ಹತ್ತಿಯ ಹೂವು ಶ್ರೇಷ್ಠವಾದದ್ದು ಯಾಕಂದರೆ ಆ ಪುಷ್ಪದಿಂದಲೇ ಯಾವತ್ತು ಮನುಷ್ಯ ಪ್ರಾಣಿಗಳ ಮಾನವು ಉಳಿಯುತ್ತದೆ. ಇನ್ನು ಫಲಗಳಲ್ಲಿ ಪುತ್ರಫಲವು ಅಧಿಕವಾದದ್ದು; ಯಾಕಂದರೆ ಆ ಪುತ್ರನಿಂದ ಕುಲಕೋಟಿಗಳೆಲ್ಲ ಉದ್ಧೃತವಾಗುತ್ತವೆ ರಾಜರಲ್ಲಿ ಇಂದ್ರನು ಶ್ರೇಷ್ಠನಾದವನು ಯಾಕಂದರೆ ಇಂದ್ರನು ವೃಷ್ಢಿಯನ್ನುಂಟು ಮಾಡಿ ಯಾವತ್ತೂ ಚರಾಚರಗಳನ್ನು ರಕ್ಷಿಸುತ್ತಾನೆ. ಮಾಧುರ್ಯದಲ್ಲಿ ವಾಂಘ್ಮಾಧುರ್ಯವು ಶ್ರೇಷ್ಠವಾದದ್ದು ಯಾಕಂದರೆ ವಾಂಘ್ಮಾಧುರ್ಯದಿಂದ ಯಾವತ್ತೂ ಜನರ ಮನಸ್ಸನ್ನು ಒಲಿಸಿಕೊಳ್ಳುವದಕ್ಕೆ ಬರುತ್ತದೆ.

-( ೫೦. ದಂಡನೆಗೆ ಪ್ರತಿಯಾಗಿ ಪಾರಿತೋಷಕವು.)-

ದಿಲ್ಲಿಯಲ್ಲಿ ಒಬ್ಬ ಮನುಷ್ಯನಿದ್ದನು ಅವನ ಮುಖವನ್ನು ಪ್ರಾತಃಕಾಲದಲ್ಲಿ ಎದ್ದ ಕೂಡಲೆ ಅವಲೋಕನ ಮಾಡಿದರೆ, ಸಂಜೆಯವರೆಗೆ ನೋಡಿದವನಿಗೆ ಅನ್ನವು ಸಿಗುವದಿಲ್ಲ" ಎಂದು ಜನರಲ್ಲಿ ದೃಢನಂಬಿಗೆಯು ಉತ್ಪನ್ನವಾಗಿತ್ತು ಅದರಿಂದ ಮಧ್ಯಾಹ್ನದವರೆಗೆ ಆ ಮನುಷ್ಯನ ಮುಖವನ್ನು ನೋಡಲಿಕ್ಕೆ ಯಾರೂ ಇಷ್ಠಪಡುತ್ತಿದ್ದಿಲ್ಲ ಈ ವಾರ್ತೆಯು ಕರ್ಣೋಪಕರ್ಣವಾಗಿ ಬಾದಶಹನಿಗೆ ತಲುಪಿತು. ಆಗ ಅವನು ಆ ಮಾತನ್ನು ಪರೀಕ್ಷಿಸಿ ನೋಡಬೇಕೆಂದು ನಿಶ್ಚಯಿಸಿ, ಆ ಮನುಷ್ಯನನ್ನು ಕರೆಯಿಸಿಕೊಂಡು ತನ್ನ ಅಂತಃಪುರದಲ್ಲಿ ಒಂದು ದಿವಸ ಇಟ್ಟುಕೊಂಡನು. ಮರುದಿವಸ ಪ್ರಾತಃಕಾಲದಲ್ಲಿ ಎದ್ದ ಕೂಡಲೆ ಮೊಟ್ಟಮೊದಲು ಬಾದಶಹನು ಅವನ ಮುಖವನ್ನವಲೋಕಿಸಿದನು,