ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೨೧

ಈ ಪುಟವನ್ನು ಪ್ರಕಟಿಸಲಾಗಿದೆ
೨೫೦
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು,


ರಾಮದಾಸ-ನೀನು ನನ್ನ ಬಳಿಯಲ್ಲಿ ಯಾವ ಆಸ್ತಿಯನ್ನೂ ಇಟ್ಟಿರುವದಿಲ್ಲ ಅದರಿಂದ ನೀನು ಇಲ್ಲಿಂದ ಸುಮ್ಮನೇ ಹೊರಟು ಹೋಗು! ಇಲ್ಲವಾದರೆ ಸೇವಕರಿಂದ ತಳ್ಳಿಸಿಬಿಡುತ್ತೇನೆ, ನಾನು ನಿನ್ನೊಡನೆ ವಿನೋದವನ್ನು ಮಾಡುವೆನೋ!

ಈ ಮಾತುಗಳನ್ನು ಕೇಳಿ ಮೋತೀಚಂದನಿಗೆ ಬಹಳ ಆಶ್ಚರವಾಯಿತು ಅವನು ಸದ್ಗದಿತವಂತನಾಗಿ, "ನಾನು ನಿನ್ನನು ಜೀವದ ಗೆಳೆಯನೆಂದು ತಿಳಿದು ಎಲ್ಲ ಆಸ್ತಿಯನ್ನು ಒಪ್ಪಿಸಿದ್ದಕ್ಕೆ ನನಗೆ ಈ ದುರವಸ್ಥೆಯನ್ನುಂಟು ಮಾಡಿದಿ! ನಿನಗೆ ಇಂಥ ದುರ್ಬುದ್ಧಿಯು ಯಾಕೆ ಹುಟ್ಟಿತು, ಪ್ರಾಜ್ಞನಾಗಿದ್ದು ವಿಶ್ವಾಸಘಾತಕದ ಪಾಪವನ್ನು ಯಾಕೆ ತಲೆಯ ಮೇಲೆ ಹೊತ್ತುಕೊಳ್ಳುತ್ತೀ? ಈ ಲೋಕದಲ್ಲಿ ಈ ಪಾಪದ ವರಿಣಾಮವು ನಿನಗೆ ತಟ್ಟದಿದ್ದರೂ ಪರಲೋಕದಲ್ಲಿ ಇದರ ದುಷ್ಪರಿಣಾಮವು ಸೋಂಕದೆ ಬಿಡಲಾರದು ಪರಮೇಶ್ವರನ ಕಠಿಣ ಶಿಕ್ಷೆಗೆ ಭೀತನಾಗಿ ನನ್ನ ಸ್ವತ್ತನ್ನು ನನಗೊಪ್ಪಿಸು; ಇದರಿಂದ ನಿನಗೆ ಕಲ್ಯಾಣವಾಗುವದು " ಎಂದನು.
ಈ ಮಾತಿನಿಂದ ರಾಮದಾಸನಿಗೆ ಅತಿಕೋಪವು ಬಂತು ಕಣ್ಣುಗಳು ಕೆಂಪಗಾದವು ಅದನ್ನು ಕಂಡು ಮೋತೀಚಂದನು "ಇನ್ನು ಇಲ್ಲಿ ನಿಂತುಕೊಳ್ಳುವುದು ಸರಿಯಲ್ಲ " ಎಂದು ಯೋಚಿಸಿ ಸುಮ್ಮನೆ ಮರಳಿಬಂದನು. ರಾಮದಾಸನು ಬರಕೊಟ್ಟ ಹಸ್ತಪತ್ರಿಕೆಯೂ ಇದ್ದಿಲ್ಲ, ಮತ್ತು ಸ್ವತ್ತನ್ನು ಒಪ್ಪಿಸುವ ಕಾಲಕ್ಕೆ ಅನ್ಯರಾರೂ ಇದ್ದಿಲ್ಲ; ಅದರಿಂದ ಸರಕಾರದಲ್ಲಿ ಅಭಿಯೋಗವನ್ನು ಸಹ ನಡೆಯಿಸಲಿಕ್ಕೆ ಬರುವಂತೆ ಇದ್ದಿಲ್ಲ. ಈ ವಿಷಯವನ್ನು ಬೀರಬಲನ ಕಿವಿಯ ಮೇಲೆ ಹಾಕಿ ನೋಡೋಣ? ಮುಂದೆ ನನ್ನ ದೈವದಲ್ಲಿ ಇದ್ದಂತೆ ಆಗಲಿ ಎಂದು ನಿಶ್ಚಯಿಸಿಕೊಂಡು ಮನೆಗೆಬಂದು, ಮರುದಿವಸ ಬೀರಬಲನ ಬಳಿಗೆ ಹೋಗಿ ಆದ್ಯೋಪಾಂತ ವೃತ್ತಾಂತವನ್ನೆಲ್ಲ ಹೇಳಿ ಈ ಕಾರ್ಯದಲ್ಲಿ ತಾವು ಪೂರ್ಣ ಸಹಾಯವನ್ನು ಮಾಡಬೇಕೆಂದು ಪ್ರಾರ್ಥನೆಮಾಡಿ ಕೊಂಡನು. ಅದಕ್ಕೆ ಬೀರಬಲನು ಇನ್ನು ನಾಲ್ಕು ದಿವಸಗಳನ್ನು ಬಿಟ್ಟು ನನ್ನ ಬಳಿಗೆ ಬಾ? ನಿನಗೆ ಯಾವದಾದರೊಂದು ಹಂಚಿಕೆಯನ್ನು ತೋರಿಸುತ್ತೇನೆ? ಎಂದು ಹೇಳಿದನು.
ಮೂರನೇ ದಿವಸ ಬೀರಬಲನು ರಾಮದಾಸನನ್ನು ಕರೆಯ ಕಳುಹಿದನು. ಆಗ ರಾಮದಾಸನು ಸ್ವಲ್ಪ ಗಾಬರಿಯಾದನು, ಆಗ ಅವನು ಮನಸ್ಸಿನಲ್ಲಿ "ಮೋತೀಚಂದನ ಹೇಳಿಕೆಯಿಂದಂತೂ ನನ್ನ೦ದು ಕರೆಯಿಸಿರುವದಿಲ್ಲ ಒಂದುವೇಳೆ ಕರೆಯಿಸಿದ್ದರೆ ನಾನೇನು ಮೋತೀಚಂದನಿಗೆ ನಿನ್ನ ಈ ಈ ಪ್ರ