ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೨೨

ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು,
೨೫೧


ಕಾರದ ಸ್ವತ್ತು ನನ್ನ ಬಳಿಯಲ್ಲಿದೆ ಎಂದು ಲೇಖನವನ್ನು ಬರೆದುಕೊಟ್ಟಲ್ಲ ಮತ್ತೆ ಬೇರೆ ಯಾವದಾದರೊಂದು ಕಾರ್ಯವಿದ್ದೀತು,” ಎಂದು ಯೋಚಿಸುತ್ತಾ ಬೀರಬಲನ ಸನ್ನಿಧಿಗೆ ಬಂದನು, ಬೀರಬಲನು ಆದರ ಸತ್ಕಾರಮಾಡಿ ತನ್ನ ಬಳಿಯಲ್ಲಿ ಕುಳ್ಳಿರಿಸಿಕೊಂಡನು. ಆಮೇಲೆ ಮೋತೀಚಂದನ ವಿಷಯವೇ ತನಗೆ ಗೊತ್ತುಯಿಲ್ಲವೆಂಬಂತೆ ನಟಿಸಿ, ಅನೇಕ ವಾರ್ತಾಲಾಪಗಳನ್ನು ಆಡುತ್ತ ಆಡುತ್ತ "ರಾಮದಾಸ ? ನನ್ನ ನಿನ್ನ ನಡುವೆ ಎಷ್ಟೋ ಕಾಲದಿಂದ ಮೈತ್ರಿಯಿದ್ದರೂ ಕೂಡ ಇಷ್ಟು ದಿವಸಗಳವರೆಗೆ ಆ ಮೈತ್ರಿಯನ್ನು ಪ್ರಕಟ ಮಾಡಲಿಕ್ಕೆ ಸಂಧಿಯೇ ದೊರಕಿದ್ದಿಲ್ಲ; ಈಗ ಪರಮೇಶ್ವರನ ದಯೆಯಿಂದ ಅಂಥ ಒಂದು ಪ್ರಸಂಗವು ಬಂದದೆ ಏನಂದರೆ- ಚಿಕ್ಕಚಿಕ್ಕ ಅಭಿಯೋಗಗಳ ನಿರ್ಣಯವನ್ನು ಮಾಡುವದರಸಲುವಾಗಿ ಒಂದು ನ್ಯಾಯಾಲಯವನ್ನು ಸ್ಥಾವಿಸೆಂದು ಬಾದಶಹನು ಅಪ್ಪಣೆಮಾಡಿದ್ದಾನೆ ಆ ಕಾರ್ಯಕ್ಕೆ ನಿನ್ನನು ನಿಯಮಿಸಬೇಕೆಂದು ಯೋಚಿಸಿ, ನಿನ್ನ ಇಚ್ಛೆಯನ್ನು ಅರಿತುಕೊಳ್ಳಬೇಕೆಂದು ನಿನ್ನನು ಇಲ್ಲಿಗೆ ಕರೆಯಿಸಿಕೊಂಡೆನು ನಿನ್ನಿಂದ ಈ ಕಾರ್ಯ ನಿರ್ವಾಹವಾಗುವಂತಿದ್ದರೆ ವಿಚಾರಮಾಡಿಕೊಂಡು ನನಗೆ ತಿಳಿಸು ! ?” ಎಂದನು. ಈ ಮಾತನ್ನು ಕೇಳಿದಕೂಡಲೆ ರಾಮದಾಸನ ಹರುಷಕ್ಕೆ ಪಾರವೇ ಇಲ್ಲದಾಯಿತು ಮನಸ್ಸಿನಲ್ಲಿ ಆನಂದದ ಲಹರಿಗಳು ಬರಹತ್ತಿದವು, ಪ್ರಫುಲ್ಲವದನನಾಗಿ;- "ಮಂತ್ರಿವರ್ಯನೇ ! ನಾನು ಈ ಕಾರ್ಯವನ್ನು ಆನಂದದಿಂದ ಸ್ವೀಕರಿಸುತ್ತೇನೆ” ಎಂದನು. ಅದಕ್ಕೆ ಬೀರಬಲನು "ಒಳ್ಳೇದು, ನಾನು ಸಮಯವನ್ನು ಸಾಧಿಸಿಕೊಂಡು ಈ ಸಂಗತಿಯನ್ನು ಬಾದಶಹನ ಕಿವಿಯಮೇಲೆ ಹಾಕುತ್ತೇನೆ ” ಎಂದು ಹೇಳಲು, ರಾಮದಾಸನು ಹರುಷಿತನಾಗಿ ಅಪ್ಪಣೆಯ ನ್ನು ತೆಗೆದುಕೊಂಡು ಹೊರಟು ಬಂದನು, ಮಾರ್ಗದಲ್ಲಿ ಅವನ ಮನಸ್ಸಿನಲ್ಲಿ ಅನೇಕ ಪ್ರಕಾರದ ತರಂಗಗಳು ಉದ್ಭವಿಸಹತ್ತಿದವು. ಮನಸ್ಸಿನಲ್ಲಿ ಮಂಡಿಗೆಯನ್ನು ತಿನ್ನುತ್ತ ಮನೆಗೆ ಬಂದು ಮುಟ್ಟಿದನು.
ಇತ್ತ ರಾಮದಾಸನು ಹೊರಟು ಹೋದಮೇಲೆ, ಬೀರಬಲನು ಮೋತೀಚಂದನನ್ನು ಕರೆಯಿಸಿ- "ನಾಳೆ ನೀನು ರಾಮದಾಸನ ಬಳಿಗೆ ಹೋಗಿ ನನ್ನ ಸ್ವತ್ತನ್ನೆಲ್ಲಿ ಕೊಡು ! ” ಎಂದು ಕೇಳು ಅವನು ಈ ಮಾತಿಗೆ ಒಪ್ಪಿಕೊಳ್ಳದಿದ್ದರೆ "ಬೀರಬಲನಿಗೆ ಈ ಸಂಗತಿಯನ್ನು ತಿಳಿಸುತ್ತೇನೆಂದು ಬೆದರಿಕೆಹಾಕು ! ” ಎಂದು ಹೇಳಿದನು.
ಈ ಪ್ರಕಾರದ ಮಾತಿನಿಂದ ಮೋತೀಚಂದನ ದುಃಖಿತ ಮನಸ್ಸಿಗೆ ಸ್ವಲ್ಪ ಶಾಂತಿಯುಂಟಾಯಿತು ಮರುದಿವಸ ಮೋತೀಚಂದನು ರಾಮದಾಸ