ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೨೩

ಈ ಪುಟವನ್ನು ಪ್ರಕಟಿಸಲಾಗಿದೆ
೨೫೨
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.


ನ ಬಳಿಗೆ ಹೋಗಿ, “ ತನ್ನ ಧನ ಕನಕ ವಸ್ತುಗಳನ್ನು ಕೊಡು” ಎಂದು ಕೇಳಲಾಗಿ, ಅವನು ಮೊಟ್ಟಮೊದಲು ಹೇಳಿದಂತೆ ನಿರಾಕರಿಸಿ ಬಿಟ್ಟನು ಆಗ ಮೋತಿಚಂದನು-" ಮಿತ್ರಾ! ನೀನು ಒಳ್ಳೆಮಾತಿನಿಂದ ಆಸ್ತಿಯನ್ನು ಕೊಡಲಿಕ್ಕೆ ಸಮ್ಮತಿಸುವದಿಲ್ಲ; ಅದರಿಂದ ನಾನು ನಿರ್ವಾಹವಿಲ್ಲದೆ ಈ ಸಂಗತಿಯನ್ನು ಬೀರಬಲನ ಕಿವಿಯಮೇಲೆ ಹಾಕಬೇಕಾಗಿ ಬಂತು. "ಎಂದನು.
ಬೀರಬಲನಿಗೆ ತಿಳಿಸುತ್ತೇನೆಂದು ಹೇಳಿದ ಮಾತನ್ನು ಕೇಳಿದ ಕೂಡಲೆ ಮನಸ್ಸಿನಲ್ಲಿ ಗಾಬರಿಯಾದನು ಆಗ ಅವನು ಆಲೋಚಿಸಿ ದೇನಂದರೆ-“ ನನಗೆ ನ್ಯಾಯಾಧೀಶನ ಕೆಲಸವನ್ನು ಕೊಡಿಸುತ್ತೇನೆಂದು ಬೀರಬಲನು ವಚನಕೊಟ್ಟಿದ್ದಾನೆ ಇಂಥ ಸಂಧಿಯಲ್ಲಿ ನನ್ನ ಮೋಸದ ಕೃತ್ಯವು ಅವನಿಗೆ ತಿಳಿಯಬಂದರೆ ನನ್ನ ಅವಮಾನವಾಗುವದಲ್ಲದೆ, ದೊರೆಯತಕ್ಕ ಕೆಲಸವನ್ನು ಸಹ ನಾನೇ ಅಪ್ರಗಲ್ಪತೆಯಿಂದ ಕಳಕೊಂಡಂತೆ ಆಗುತ್ತದೆ ನ್ಯಾಯಾ ಧೀಶನ ಸ್ಥಾನವು ದೊರೆತರೆ ಬೇಕಾದಷ್ಟು ಸಂಪಾದಿಸಬಹುದು. ” ಎಂದು ಯೋಚಿಸಿ ಮೋತಿಚಂದನನ್ನು ಕುರಿತು ಪ್ರಿಯಮಿತ್ರನೇ ! ನಾನು ಇಂದಿನ ತನಕ ನಿನಗೆ ಚೇಷ್ಟೆಯನ್ನು ಮಾಡಿದೆನು ಕೇವಲ ನಿನ್ನಲ್ಲಿ ಎಷ್ಟರಮಟ್ಟಿಗೆ ಧೈರ್ಯ ವಿರುವದೆಂಬದನ್ನು ಪರೀಕ್ಷಿಸಬೇಕೆಂದು ಯೋಚಿಸಿ ಈ ಪ್ರಕಾರವಾಗಿ ಮಾಡಿದೆನೇ ಹೊರತು ಅನ್ಯಥಾ ಇಲ್ಲ ನಿನ್ನ ಯಾವತ್ತು ಸ್ಪತ್ತನ್ನು ನೀನು ತೆಗೆದುಕೊಂಡು ಹೋಗು ! ಈ ದಿವಸ ನೀನು ಬಾರದಿಹೋಗಿದ್ದರೆ ನಾನೇ ನಿನ್ನ ಮನೆತನಕ ಬಂದು ಕೊಟ್ಟು ಬರಬೇಕೆಂದುಮಾಡಿದ್ದೇ ನು ಎಂದು ಹೇಳಿ ಅವನ ಯಾವತ್ತು ಸ್ವತ್ತನ್ನು ಅವನ ಸ್ವಾಧೀನ ಪಡಿಸಿದನು ಮೋತಿಚಂದನು ಅದನ್ನು ತಕ್ಕೊಂಡು ಸಂತೋಷದಿಂದ ಮನೆಗೆ ಹೋದನು ಸಾಯಂಕಾಲದಲ್ಲಿ ಬೀರಬಲನು ರಾಜಕಾರ್ಯಗಳಿಂದ ನಿವೃತ್ತನಾಗಿ ಮನೆಗೆ ಬಂದಮೇಲೆ, ಮೊತೀಚಂದನು ಬೆಟ್ಟಿಯಾಗಿ ಯಾವತ್ತು ಸಂಗತಿಯನ್ನು ವಿಶದಪಡಿಸಿದನು.
ಇತ್ತ ರಾಮದಾಸನು ಬೀರಬಲನು ಯಾವಾಗ ಕರೆಯಿಸುವನೋ ಎಂದು ಮಾರ್ಗಪ್ರತೀಕ್ಷೆ ಮಾಡುತ್ತ ಕುಳಿತುಕೊಂಡನು ಮೋತಿಚಂದನು ರಾಮದಾಸನ ಮೈತ್ರಿಯನ್ನು ತ್ಯಜಿಸಿ ಬಿಟ್ಟನು ಕೆಲವು ದಿವಸಗಳಾದಮೇಲೆ ರಾಮದಾಸನು ಬೀರಬಲನ ದರುಶನಕ್ಕೆ ಹೋಗಲು, ಅವನು ನಿಷೇಧಿಸಿದನು ಆಗ ಅವನು ತಾನುಮಾಡಿದ ಮೋಸವು ತನಗೇಬಾಧಕವಾಯಿತೆಂದು ತಿಳಿದುಕೊಂಡು ಸ್ಪಷ್ಟವಾಗಿ ಕುಳಿತುಕೊಂಡು ಬಿಟ್ಟನು.