ಬಂದು ಕುಳಿತುಕೊಂಡು ಎಲ್ಲ ಸಭಾಸದರು ಬಂದಮೇಲೆ ಅನವರತಾ ಎಂಬವನನ್ನು ಕುರಿತು ಮೇಲೆಬರೆದ ಪ್ರಶ್ನೆಗಳನ್ನು ಮಾಡಿದನು. ಆಗ ಅನವರಖಾನನು, ಜಹಾಪನಾ ? ನಾನು ಹೇಳಿದ ಉತ್ತರವು ತಮಗೆ ಸರಿ ಬಾರದಿದ್ದರೆ ನನಗೆ ಅವಮಾನವಾದೀತು ! ಅದರಿಂದ ಎಲ್ಲರ ಅಭಿಪ್ರಾಯವನ್ನು
ಕೇಳಿಕೊಂಡು ಉತ್ತರ ಕೊಡುತ್ತೇನೆ ಎಂದು ಹೇಳಿದನು. ಈಮಾತಿಗೆ ಬಾದಶಹನು ಸಮ್ಮತಿಸಿದ್ದರಿಂದ ಅನವರಖಾನನು ಯಾವತ್ತು ಸಭಾಸದರ ಅಭಿಪ್ರಾಯವನ್ನು ಕೇಳಿಕೊಂಡು ಭೂವರ ? ಪುಷ್ಪಗಳಲ್ಲಿ ಮಲ್ಲಿಕಾಪುಷ್ಪವು
ಶ್ರೇಷ್ಠವಾದದ್ದು, ದಂತಗಳಲ್ಲಿ ಗಜದಂತವು ಶ್ರೇಷ್ಠವಾದದ್ದು, ರಾಜಪುತ್ರ
ನು ಎಲ್ಲರಿಗಿಂತಲೂ ಶ್ರೇಷ್ಠನು, ರಾಜರಲ್ಲಿ ಚಕ್ರವರ್ತಿಯಾದವನು ಮಿಗಿಲಾದವನು, ಗುಣಗಳಲ್ಲಿ ವಿದ್ಯೆಯು ಶ್ರೇಷ್ಠವಾದದ್ದು; ” ಎಂದು ನಿವೇದಿಸಿದನು. ಈ ಉತ್ತರಗಳಿಂದ ಬಾದಶಹನ ಮನಸ್ಸು ತೃಪ್ತವಾಗಲಿಲ್ಲ, ಕಿಂಚಿತ್ಕಾಲದ ಮೇಲೆ ಬೀರಬಲನು ಬರಲು ಅವನಿಗೆ ಅದೇ ಪ್ರಶ್ನೆಗಳನ್ನು ಮಾಡಿದನು, ಆಕೂಡಲೇ ಬೀರಬಲನು ಸ್ವಾಲ್ಪಾದರೂ ಯೋಚಿಸದೆ - “ ಸರಕಾರ
ಹೂವುಗಳಲ್ಲಿ ಹತ್ತಿಯ ಹೂವು ಮೇಲಾದದ್ದು, ಯಾಕಂದರೆ ಅದರಿಂದ ವಸ್ತ್ರಗಳು ಉತ್ಪನ್ನವಾಗುತ್ತವೆ ಅದರಿಂದ ಯಾವತ್ತು ಮನುಷ್ಯರ ಶರೀರಸಂರ
ಕ್ಷಣೆಯಾಗುತ್ತದೆ. ದಂತದಲ್ಲಿ ನೇಗಿಲದ ದಂತವು ಶ್ರೇಷ್ಠವಾದದ್ದು ; ಯಾಕಂದರೆ ಅದರಿಂದಲೇ ಭೂಮಿಯನ್ನು ಹಸನುಮಾಡಲಿಕ್ಕೆ ಬರುತ್ತದೆ. ಗೋಪುತ್ರನು ಎಲ್ಲರಕಿಂತಲೂ ಶ್ರೇಷ್ಠನು, ಯಾಕಂದರೆ ಅವನಿಂದ ಹಲವು
ಪ್ರಕಾರದ ಪ್ರಯೋಜನಗಳುಂಟಾಗುತ್ತವೆ. ರಾಜರಲ್ಲಿ ಇಂದ್ರನು ಮಿಗಿಲಾದವನು, ಯಾಕಂದರೆ ಅವನು ವೃಷ್ಟಿಯನ್ನುಂಟುಮಾಡಿ ಭೂಲೋಕದೊಳಗಿನ
ಪ್ರಾಣಿಗಳನ್ನು ಸಂರಕ್ಷಿಸುತ್ತಾನೆ; ಸರ್ವಗುಣಗಳಲ್ಲಿ ಧೈಯ್ಯವು ಮಿಗಿಲಾದದ್ದು , ಯಾಕಂದರೆ ಧೈರ್ಯವಿಲ್ಲದಿದ್ದರೆ ಉಳಿದಗುಣಗಳಿಂದ ಯಾವ ಪ್ರಯೋಜನವೂ ಆಗುವಂತೆ ಇಲ್ಲ; ಈ ಉತ್ತರಗಳಿಂದ ಬಾದಶಹನ ಮನಸ್ಸು ಪ್ರಸ
ನ್ನವಾಯಿತು.
- ( ೧೫೫, ಎಲ್ಲರ ಕ್ಕಿಂತಲೂ ಹೆಚ್ಚಿನವನು ಯಾರು ? ) * -
ಒಂದು ದಿವಸ ಬಾದಶಹ ಬೀರಬಲನೂ ಉಪವನದಲ್ಲಿ ಕುಳಿತು
ಕೊಂಡು ವಾಯು ಸೇವನೆಯನ್ನು ಮಾಡುತ್ತಿದ್ದರು ಆಗ ಬಾದಶಹನು ಬೀರಬಲ್ಲ ! ಈ ಪ್ರಪಂಚದಲ್ಲಿ ಎಲ್ಲರಕ್ಕಿಂತಲೂ ಹೆಚ್ಚಿನವನು ಯಾರು? ” ಎಂದು ಕೇಳಿದನು ಆಗ ಬೀರಬಲನು ಆಲೋಚಿಸಿದ್ದೇನಂದರೆ, “ ಇವನಿಗೆ ರಾಜ್ಯ
ಮದವು ತಲೆಗೇರಿದೆ ತಾನೇ ಹೆಚ್ಚಿನವನೆಂದು ತಿಳಿದುಕೊಂಡು, ಈ ಪ್ರ
ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೩೧
ಈ ಪುಟವನ್ನು ಪ್ರಕಟಿಸಲಾಗಿದೆ
೨೬೦
ಅಕಬರ ಬೀರಬಲರ ಚಾತುರ್ಯವಾದ ಕಥೆಗಳು.