ಕೈಯನ್ನು ಮಾಡಿದ್ದಾನೆ ಇವನ ಮದವನ್ನು ಇಳಿಸಬೇಕು” ಎಂದು ನಿಶ್ಚಯಿಸಿ, "ಭೂವರ ! ಎಲ್ಲರಕಿಂತಲೂ ಚಿಕ್ಕಬಾಲಕನು ಹೆಚ್ಚಿನವನು ರಾಜನೇ ಆಗಲಿ ಬಲವಂತನೇ ಆಗಲಿ, ಧನವಂತನೇ ಆಗಲಿ, ಅವನು ಬಾಲಕನಕಿಂತಲೂ ಹೆಚ್ಚಿನವನು ಆಗಲಾರನೆಂದು ನಾನು ನಂಬಿದ್ದೇನೆ ” ಎಂದನು. ಈ ಮಾತುಗಳನ್ನು ಕೇಳಿ ಬಾದಶಹನು ನಗ ಹತ್ತಿದನು ಆಮೇಲೆ ಇದರಕಾರಣವನ್ನು ವಿವರಿಸಿ ಹೇಳೆಂದು ಅಪ್ಪಣೆ ಮಾಡಿದನು ಆಗ ಬೀರಬಲನು ಈ ಸಂಗತಿಯನ್ನು ಶಬ್ದಗಳಿಂದ ತಿಳಿಸಿ ಹೇಳಲಿಕ್ಕೆ ಬರುವದಿಲ್ಲ, ಅದನ್ನು ಪರೀಕ್ಷಿಸಿ ನೋಡಬೇಕು ” ಎಂದನು.
ಮುಂದೆ ಎಂಟು ದಿವಸಗಳಾದ ಮೇಲೆ ಬಾದಶಹನು ಒಂದೂವರೆ ಎರಡು ವರುಷಗಳಾಗಿದ್ದ ಒಬ್ಬ ಸುಂದರ ಬಾಲಕನನ್ನು ಕರೆದುಕೊಂಡು ಬಾದಶಹನ ಸನ್ನಿಧಿಗೆ ಬಂದನು ಆ ಬಾಲಕನು ಅತಿ ಚಪಲನಾಗಿದ್ದು ಸುಂದರನಾಗಿದ್ದನು ಬಾದಶಹನು ಆ ಬಾಲಕನನ್ನು ನೋಡಿ ಪ್ರಸನ್ನ ಮನನಾಗಿ ಆ ಬಾಲಕನನ್ನು ಎತ್ತಿಕೊಂಡು ಮುದ್ದಾಡ ಹತ್ತಿದನು ಆ ಬಾಲಕನು ತನ್ನಬಾಲ ಭಾವಕ್ಕನುಗುಣವಾಗಿ ಬಾದಶ ಹನ ವದನ ಕೇಶಗಳನ್ನು ಜಗ್ಗಿದನು
ಆಗ ಬಾದಶಹನು ಸ್ವಲ್ಪ ಕುಪಿನಾಗಿ “ ಬೀರಬಲ! ಇಂಥ ಬಾಲಕನು ನಿನಗೆ ಎಲ್ಲಿ ದೊರಕಿದನು ಒಳ್ಳೆ ನಿಭೀತನಾಗಿದ್ದಂತೆ ಕಂಡು ಬರುತ್ತದೆ” ಎಂದನು ಆಗ ಬೀರಬಲನು ದೃಷ್ಟಿ ! ತಾವು ಬಾದಶಹ ರಾಗಿದ್ದರೇನು? ನಿಮ್ಮಕ್ಕಿಂತಲೂ ಈ ಬಾಲಕನೇ ಹೆಚ್ಚಿನವನುಯಾಕಂದರೆ ಅವನು ಮನಸ್ಸಿಗೆ ಬಂದದ್ದನ್ನು ಮಾಡಿಬಿಡುತ್ತಾನೆ ತಮ್ಮ ಶರೀರವನ್ನು ಸ್ಪರ್ಶ ಮಾಡುವಷ್ಟು ಸಾಮರ್ಥ್ಯವು ಯಾವನಲ್ಲಿರುವದು? ಹೀಗಿದ್ದರೂ ಈ ಬಾಲಕನು ನಿಮ್ಮ ವದನದ ಕೇಳಗಳಿಗೆ ಕೈಹಾಕಿದನು ಆದ್ದರಿಂದ ಎಲ್ಲರ ಕ್ಕಿಂತಲೂ ಬಾಲಕನು ಹೆಚ್ಚಿನವನೆಂದು ಹೇಳಿದ್ದೆನು ” ಅಂದನು ಇದನ್ನು ಕೇಳಿ ಬಾದಶಹನು ತುಷ್ಟನಾಗಿ ಆ ಬಾಲಕನನ್ನು ಬೀರಬಲನ ವಶಕ್ಕೆ ಕೊಟ್ಟನು,
ಬೀರಬಲನು ಆ ಬಾಲಕನನ್ನು ತನ್ನ ಮನೆಗೆ ಕರೆದುಕೊಂಡುಹೋಗಿ ಉತ್ತಮವಾದ ವಸ್ತ್ರಾಭರಣಗಳನ್ನಿತ್ತು, ಆ ಬಾಲಕನ ಮಾತಾ ಪಿತೃಗಳಿಗೆ ಒಪ್ಪಿಸಿದನು.
-( ೧೫೬, ಬೀರಬಲ್ಲ ರಾಂಧತಗಾಯ ”)--
ಬಾದಶಹನು ಬೀರಬಲನೂ ಯಾವಾಗಲಾದರೂ ಒಮ್ಮೆಮ್ಮೆ ವಿನೋದದ ಮಾತುಗಳನ್ನಾಡುತ್ತ ಕುಳಿತು ಕೊಳ್ಳುತ್ತಿದ್ದರು ಬೀರಬಲನು ವ್ಯಗಾರ್ಥವುಳ್ಳ ಶಬ್ದಗಳನ್ನು ಪ್ರಯೋಗಿಸಿದ ಕೂಡಲೆ, ಅದರ ನಿಜವಾದ ಅರ್ಥವು
ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೩೨
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.
೨೬೧