ನು ಇದರಿಂದಲೂ ಅವನ ಮನಸ್ಸಿನ ಸಮಾಧಾನವಾಗದೆ ನಾಲ್ಕೈದು ದಿವಸ
ಕೊಮ್ಮೆ ಹೋಗಿ ನೋಡಿಬರುತ್ತಿದ್ದನು; ಇದರಂತೆ ಐದಾರು ವರುಷಗಳು
ಕಳೆದುಹೋದವು ಆಮೇಲೆ ಅವನು ತನ್ನ ನಿಯಮದಂತೆ ಹೋಗಿ ನೋಡಲು
ದ್ರವ್ಯವಿದ್ದಿಲ್ಲ; ಆಗ ಅವನು ಅಲ್ಲಿ ಎದೆಎದೆ ಬಡಕೊಂಡು ಆಕ್ರೋಶಮಾಡಹ
ತ್ತಿದನು . ಬಹಳ ಹೊತ್ತು ರೋದನವಂಗೈದು ಆಮೇಲೆ ಬಾದಶಹನ ಕಿವಿಯ
ಮೇಲೆ ಈ ಸಂಗತಿಯನ್ನು ಹಾಕಬೇಕೆಂದು ಯೋಚಿಸಿ ಒಲಗಕ್ಕೆ ಹೋಗಿ
ಎಲ್ಲ ಸಂಗತಿಯನ್ನು ಅರಿಕೆಮಾಡಿ ದೊಡ್ಡಧ್ವನಿಯಿಂದ ರೋದನಮಾಡಹ
ತ್ತಿದನು, ಅದರಿಂದ ನ್ಯಾಯಾಸನವೆಲ್ಲ ಪ್ರತಿಧ್ವನಿಗೊಂಡು ಹೋಯಿತು.
ಬಾದಶಹನು ಪ್ರಸ್ತನಾಗಿ ಕೈಯೊಳಗಿನಕೆಲಸವನ್ನು ಅರ್ಧಕ್ಕೇ ಬಿಟ್ಟು
ಅವನ ವೃತ್ತಾಂತವನ್ನು ಕೇಳಿಕೊಂಡನು. ಆಗ ಅವನು ತನ್ನ ಅಯ್ಯೋ
ಪಾಂತ ವೃತ್ತಾಂತವನ್ನೆಲ್ಲ ಕಥನಮಾಡಿ " ದಯಾಪರ ದೊರೆಗಳೇ ! ನನ್ನ
ಹತ್ತರ ಇದ್ದದ್ರವ್ಯವೆಲ್ಲ ಈಪರಿಯಾಗಿ ಅನ್ಯರವಾಲಾಗಿ ಹೋಯಿತು, ಈಗ
ನನ್ನ ಹತ್ತಿರ ಒಂದು ಒಡಕ ಕವಡಿಯೂ ಇಲ್ಲದೆ ಹೋಯಿತು ಏನುಮಾಡಲಿ??
ಎಂದು ಅಳಹತ್ತಿದನು. ಆ ವೃತ್ತಾಂತವನ್ನು ಕೇಳಿ ಬಾದಶಹನ ಮನಸ್ಸು
ಕಳವಳಗೊಂಡಿತು, ಆಗ ಅವನು ರಾಜಭಂಡಾರದಿಂದ ಅವನ ನಿರ್ವಾಹ ವಾ
ಗುವಂತೆ ಕಟ್ಟು ಮಾಡಿ ಉಳಿದಕೆಲಸವನ್ನು ಪೂರ್ಣಮಾಡಿ ಬೀರಬಲ ಅಭಿ
ಪ್ರಾಯವನ್ನು ಕೇಳಿದನು. ಬೀರಬಲನು ಅನ್ವೇಷಣಮಾಡುವೆನೆಂದು ವಚ
ನಕೊಟ್ಟನು. ಇಬ್ಬರೂ ಏಕಾಂತಗೃಹದಲ್ಲಿ ಕುಳಿತುಕೊಂಡು ಏನುಮಾಡ
ಬೇಕೆಂದು ಯೋಚಿಸಹತ್ತಿದರು, ಬೀರಬಲನು ಒಂದು ಹಂಚಿಕೆಯನ್ನು ಹೇ
ಳಿದನು ಅದು ಬಾದಶಹನ ಮನಸ್ಸಿಗೆ ಬಂತು.
ಮರುದಿವಸ ಪಟ್ಟಣದೊಳಗಿನ ಅನುಭವಿಕರಾದ ವೈದ್ಯರನ್ನು ಕರೆ
ಯಿಸಿಕೊಂಡು ಬಿಲ್ವವೃಕ್ಷದ ಪರ್ಣ, ಮತ್ತು ಬೇರುಗಳು, ಯಾವಯಾವ
ಔಷಧಕ್ಕೆ ಬರುತ್ತವೆ; ಎಂಬುದನ್ನು ಶೋಧಮಾಡಿಕೊಂಡು ಬಂದು ಎಂಟು
ದಿವಸಗಳೊಳಗಾಗಿ ನನಗೆ ತಿಳಿಸಿರಿ ? ” ಎಂದು ಆಜ್ಞಾಪಿಸಿದನು. ಬಾದಶ
ಹನ ಆಜ್ಞಾನುಸಾರವಾಗಿ ಎಂಟು ದಿವಸಗಳ ತನಕ ವೈದ್ಯಕೀಯ ಗ್ರಂಥಗ
ಳನ್ನೆಲ್ಲ ಶೋಧಮಾಡಿ ತಮಗೆ ತಿಳಿದುಬಂದ ಸಂಗತಿಗಳನ್ನು ವರ್ಣನಮಾಡಿ
ದರು ಅವರಲ್ಲಿ ಒಬ್ಬ ವೃದ್ಧನೂ ಅನುಭವಿಕನೂ ಆಗಿದ್ದ ಭಿಷಗ್ವರನು ಎದ್ದು
ನಿಂತು “ ಭೂವರ ? ತಮ್ಮ ಆಜ್ಞಾನುಸಾರವಾಗಿ ಗ್ರಂಥಗಳನ್ನು ಶೋಧ
ಮಾಡಿನೋಡಲು ಬಿಲ್ವವೃಕ್ಷದ ವರ್ಣದಿಂದ ಚೂರ್ಣಮಾಡಿಕೊಟ್ಟರೆ " ಅರಿಷಿ
ಣಮುಂಡಿಗೆ" ರೋಗವು ಕಡಿಮೆಯಾಗುವದೆಂದೂ ಅದರ ಮೂಲಿಕೆಯು
ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೩೭
ಈ ಪುಟವನ್ನು ಪ್ರಕಟಿಸಲಾಗಿದೆ
೨೬೬
ಅಕಬರ ಬೀರಬಲ ಚಾತುರ್ಯವಾದ ವಿನೋದಕಥೆಗಳು.