" ಜಲೋದರಕ್ಕೆ ” ಉಪಶಮನವೆಂದೂ ತಿಳಿಯಬಂದಿದೆ ಎಂದು ಹೇಳಿದನು
ಬಾದಶಹನು ಅವನ ವಚನಗಳನ್ನೆಲ್ಲ ಕೇಳಿಕೊಂಡು ಯಾವತ್ತು ಧನ್ವಂತರಿ
ಗಳನ್ನು ಕುರಿತು “ ಈಗ ಸದ್ಯಕ್ಕೆ ನಡೆಯುವ ತಿಂಗಳಲ್ಲಿ " ಜಲೋದರ ”
ರೋಗವು ಎಷ್ಟು ಮಂದಿಗೆ ಉಂಟಾಗಿತ್ತು ? ಮತ್ತು ಅದು ಯಾವ ಉಪಾ
ಯದಿಂದ ಕಡಿಮೆಯಾಯಿತು” ಎಂಬುದನ್ನು ಅರಿತುಕೊಂಡುಬಂದು ಒಂದು
ವಾರದೊಳಗಾಗಿ ನನಗೆ ತಿಳಿಸಿರಿ ? ಎಂದು ಆಜ್ಞೆ ಮಾಡಿದನು. ಧನ್ವಂತರಿ
ಗಳು ಆ ನಗರವನ್ನೆಲ್ಲ ಶೋಧಮಾಡಿ ಎಂಟು ದಿವಸಗಳಾದಮೇಲೆ ಬಾದಶ
ಹನ ಸನ್ನಿಧಿಗೆ ಬಂದು - ಈಮಾಸದಲ್ಲಿ ನಾಲ್ಕು ಜನರಿಗೆ ಆ ರೋಗಬಾಧೆಯಾ
ಗಿತ್ತು, ಅವರಲ್ಲಿ ಒಬ್ಬನಿಗೆ ಸ್ವಲ್ಪಗುಣವಾಗಿದೆ ! ” ಎಂದು ಹೇಳಿದರು, ಆಗ
ಬಾದಶಹನು ಆ ರೋಗಿಗೆ ಔಪಧ ಕೊಟ್ಟ ವೈದ್ಯನನ್ನು ಕುರಿತು. “ ನಿಜವಾ
ದದ್ದನ್ನು ಹೇಳು ? ಆ ವೃಕ್ಷದಮೂಲವನ್ನು ನೀನು ಎಲ್ಲಿಂದ ತೆಗೆದುಕೊಂ
ಡುಬಂದಿದ್ದಿ ! ಅಸತ್ಯವನ್ನು ಹೇಳಿದರೆ ಮರಣಕ್ಕೆ ಗುರಿಯಾಗಬೇಕಾದೀತು
ಎಂದು ಹೇಳಿದನು, ಬಾದಶಹನ ಆಜ್ಞೆಯನ್ನು ಶ್ರವಣಮಾಡಿ ಆ ವೈದ್ಯನು
ಕಂಪಿಸಹತ್ತಿದನು. ಅಗ ಅವನು ಉತ್ತರಕೊಟ್ಟದ್ದೇ ನಂದರೆ ಪೃಥ್ವಿನಾಥ !
ನನ್ನ ಸೇವಕನು ಎಲ್ಲಿಂದ ತಂದಿದ್ದನೆಂಬ ಸಂಗತಿಯನ್ನು ನಾನರಿಯೆ ? ಇದ
ರಲ್ಲಿ ನನ್ನಿಂದ ಏನಾದರೂ ಅಪರಾಧವು ಸಂಘಟಿಸಿದ್ದರೆ ಕ್ಷಮಿಸಬೇಕು! ”
ಎಂದು ಪ್ರಾರ್ಥನೆಮಾಡಿಕೊಂಡನು. ಬಾದಶಹನು ಆ ಸೇವಕನನ್ನು ಕರೆಯ
ಕಳುಹಿದನು, ಅವನು ಬಂದಮೇಲೆ.
ಬಾದಶಹ- ನಿನಗೆ ಬಿಲ್ವವೃಕ್ಷವು ಗೊತ್ತದೆಯೋ !
ಸೇವಕ-ಹುಜೂರ್ ! ಗೊತ್ತುಂಟು.
ಬಾದಶಹ- ನೀನು ನಿನ್ನ ಯಜಮಾನನ ಸಲುವಾಗಿ ಆ ವೃಕ್ಷದ ಬೇರುಗಳ
ನ್ನು ಎಂದಾದರೂ ತಂದುಕೊಟ್ಟಿದೆಯೋ ?
ಸೇವಕ- ಮಾನ್ಯವರ ? ಈಗ ಒಂದುತಿಂಗಳ ಹಿಂದೆ ತಂದುಕೊಟ್ಟಿದ್ದೆನು.
ಬಾದಕಹ- (ಬೆದರಿಕೆಯನ್ನು ಹಾಕಿ) ನೀನು ಆ ವೃಕ್ಷದಡಿಯಲ್ಲಿದ್ದ ದ್ರವ್ಯ
ವನ್ನು ತೆಗೆದುಕೊಂಡು ಹೋಗಿರುವಿ ! ಅದರಿಂದ ಅದನ್ನು ಒಳ್ಳೆ
ಮಾತಿನಿಂದ ತಂದುಕೊಡು; ಇಲ್ಲದಿದ್ದರೆ ನಿನ್ನ ಮೈದೊಗಲನ್ನು
ಸುಲಿಸಿಬಿಡುತ್ತೇನೆ.
ಸೇವಕ- ಗಾಬರಿಯಾಗಿ ನನಗೆ ಜೀವದಾನಕೊಡುವಂತೆ ಅಭಯವನ್ನು
ಕೊಟ್ಟರೆ ಎಲ್ಲ ದ್ರವ್ಯವನ್ನೂ ತಂದುಕೊಡುವೆನು,
ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೩೮
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದಕಥೆಗಳು.
೨೬೭