ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೪೧

ಈ ಪುಟವನ್ನು ಪ್ರಕಟಿಸಲಾಗಿದೆ
೨೭೦
ಅಕಬರ ಬೀರಬಲ ಚಾತುರ್ಯವಾದ ವಿನೋದಕಥೆಗಳು.

ತುಕೊಂಡಿದ್ದನು ಹಿಂದೂ ಮುಸಲ್ಮಾನ ಸರದಾರರು ತಮ್ಮ ತಮ್ಮ ಯೋಗ್ಯ ತಾನುಸಾರವಾಗಿ ತಮ್ಮ ತಮ್ಮ ಆಸನಗಳಲ್ಲಿ ಮಂಡಿತರಾದರು. ಬಾದ ಶಹನು ಬಂದು ಸಿಹ್ಮಾಸನಾಧಿಷ್ಟನಾಗಿ, ಯಾವತ್ತೂ ಸರದಾರರನ್ನು ಅವಲೋಕಿಸುತ್ತಿರಲು ಈ ಬಡಸರದಾರನ ಮೇಲೆ ದೃಷ್ಟಿಯುಬಿತ್ತು ಆಗ ಅವನ ಸ್ಥಿತಿಯನ್ನು ವಿಚಾರಿಸಬೇಕೆಂದು ಮನಸ್ಸಿನಲ್ಲಿ ಬಂತು, ಆದರೆ ಎಲ್ಲರ ಮುಂದೆ ಪ್ರಶ್ನೆ ಮಾಡುವದು ಯೋಗ್ಯವಲ್ಲವೆಂದು ತಿಳಿದು ಬಾದಶಹನು ಅಂಗುಲಿಗಳನ್ನು ಮಡಿಚಿ ಹಿಡಿದುಕೊಂಡು ಬೀಸುವವನಂತೆ ಸಂಕೇತ ಮಾಡಿದನೆಂದು ನಿಶ್ಚಯಿಸಿ ಆ ಸಂಕೇತಕ್ಕೆ ಪ್ರತಿಯಾಗಿ ತನ್ನ ಹೊಟ್ಟೆಯ ಕಡೆಗೆ ಬೆರಳುಮಾಡಿ ತೋರಿಸಿದನು ಈ ಉಭಯತರ ಸಂಕೇತವನ್ನು ಎಲ್ಲರೂ ನೋಡಿದರು ಕಳ್ಳನ ಕನಸಿನಲ್ಲಿ ಬೆಳದಿಂಗಳೆಂಬ ಸಾಮತಿಗನುಸಾರವಾಗಿ ಅನೇಕ ಜನರು ಅನೇಕ ಪ್ರಕಾರದ ತರ್ಕಗಳನ್ನು ಮಾಡಹತ್ತಿದರು ಸಭಾವಿಸರ್ಜನೆಯಾದ ಕೂಡಲೆ ಒಬ್ಬನು ಆ ಸರದಾರನ ಮನೆಯನು ನೋಡಿಕೊಂಡು ಬಂದನು ಮರುದಿವಸ ಆ ಚಂಡಾಲ ಚೌಕಡಿಯು ಕೂಡಿಕೊಂಡು ಆ ಸರದಾರನ ಮನೆಗೆ ಬಂದರು ಅವನು ಅವರನ್ನು ಆದರ ಪೂರ್ವಕವಾಗಿ ಕುಳ್ಳಿರಿಸಿದನು ಆಗ ಅವರೊಳಗಿನವನೊಬ್ಬನು ಕೃಪಾಳುವೆ, ನಿನ್ನೆಯದಿವಸ ಬಾದಶಹನು ನಿಮಗೆ ಸಂಕೇತಮಾಡಿ ಏನನ್ನು ತಿಳಿಸಿದನು? ” ಎಂದು ಕೇಳಿದನು ಆಗ ಆ ಸರದಾರನು ತನ್ನ ಮನಸ್ಸಿನಲ್ಲಿ ಇದರಲ್ಲಿ ಏನೋ ಒಂದು ಗೂಢವದೆ ಬಾದಶಹನು ಸಂಕೇತ ಮಾಡಿದ್ದರಿಂದ ಇವರ ಮನಸ್ಸಿನಲ್ಲಿ ಯಾವದೋ ಸಂದೇಹವು ಉತ್ಪನ್ನವಾಗಿದೆ ಅದರಿಂದ ನಾನು ಇದರಲ್ಲಿ ಏನಾದರೂ ಹಣವನ್ನು ಸಂಪಾದಿಸಬೇಕು? ” ಎಂದು ಆಲೋಚಿಸಿ, "ಸದ್ಗೃ ಹಸ್ತರೇ, ಆ ವಿಷಯವು ಗೌರವಾದದ್ದು ! ಪ್ರಕಟಮಾಡಲಿಕ್ಕೆ ಬರುವಂತೆ ಇಲ್ಲ ” ಎಂದನು ಆಗ ಅವರು ಅತ್ಯಾಪ್ರಹ ಮಾಡಹತ್ತಿದರು ಅದರಿಂದ ಸರದಾರನು ನಿಮ್ಮ ಆಗ್ರಹವು ಬಹಳವಾದದ್ದರಿಂದ ಹೇಳುತ್ತೇನೆ ಈ ವಿಷಯದ ಚರ್ಚೆಯನ್ನು ಎರಡನೇಕಡೆಗೆ ಮಾಡಬೇಡಿರಿ ! "ಬಾದಶಹನು ನಿಮ್ಮೆಲ್ಲರಕಡೆಗೆ ಅಂಗುಲಿಯನ್ನು ತೋರಿಸಿ ಇವರ ಸಂಬಂಧಿಯಾದ ವಿಷಯವು! ” ಎಂದು ಸಂಕೇತಮಾಡುವದರೊಳಗಾಗಿ ನಾನು ನನ್ನ ಹೊಟ್ಟೆ ಯನ್ನು ತೋರಿಸಿ, " ಆ ವಿಷಯವು ನನ್ನ ಹೊಟ್ಟೆಯಲ್ಲಿಅದೆ” ಎಂಬದಾಗಿ ತೋರಿಸಿದೆನು ಎಂಬದಾಗಿ ಹೇಳಿದನು ಆಗ ಅವರೆಲ್ಲರೂ ಗಾಬರಿಯಾಗಿ ತಮ್ಮ ಮೋಸದಕೃತಿಗಳು ಈ ಸರದಾರನಿಗೂ ಮತ್ತು ಬಾದಶಹನಿಗೂ ತಿಳಿದು ಬಂದಂತೆ ಕಾಣುತ್ತವೆ ಇದಕ್ಕೆ ಅವನು ಏನು ದಂಡನೆಯನ್ನು ವಿಧಿಸು