ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೪೦

ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದಕಥೆಗಳು.
೨೬೯

ವಾದಮೇಲೆ ಜನಸಮ್ಮರ್ದವು ಕಡಿಮೆಯಾಯಿತು ಆಮೇಲೆ ಯೋಗಿಯಾದ ಬೀರಬಲನು “ ನಿನ್ನಂಥ ವಾಮಾತ್ಮನ ನಾಮಧೇಯವನ್ನು ನಾನು ಉಚ್ಚ ರಿಸಲಾರೆನು ” ಎಂದನು. ಆಗ ಬಾದಶಹನು ಆಶ್ಚರ್ಯಾತನಾಗಿ ಅವನ ಮೋರೆಯ ಕಡೆಗೆ ದಿಟ್ಟಿಸಿ ನೋಡಹತ್ತಿದನು ಬೀರಬಲನು ಜಪಮಾಲೆಯ ನ್ನು ತಿರುವುತ್ತ ಕಣ್ಣು ಮುಚ್ಚಿ ಧ್ಯಾನಸ್ಥನಂತೆ ಕುಳಿತು ಕೊಂಡನು ಕಿಂ ಚಿತ್ರಕಾಲದ ಮೇಲೆ ಬಾದಶಹನು ಯೋಗಿಯನ್ನು ಗುರುತಿಸಿ ಈ ಯೋ ಗಿರನು ಬೀರಬಲನಲ್ಲವೇ ! ಎಂದನು ಅದಕ್ಕೆ ಬೀರಬಲನು ಎದ್ದು ನಿಂತು ಹಾ, ಪೃಥ್ವಿನಾಥ ! ತಮ್ಮ ಬೀರಬಲನು ” ಎಂದು ಉತ್ತರ ಕೊಟ್ಟನು ಸಾಯಂಕಾಲವಾಗಿ ಕತ್ತಲೆಯಾಗಿತ್ತು ಉಭಯತರೂ ತಮ್ಮ ತಮ್ಮ ಗೃಹ ಗಳನ್ನು ಕುರಿತು ತೆರಳಿದರು.
ಪ್ರಾತಃಕಾಲದಲ್ಲಿ ನಿತ್ಯ ನಿಯಮಾನುಸಾರವಾಗಿ ನಗರ ನಿವಾಸಿಗಳು ಯೋಗಿರಾಜನ ದರುಶನಾರ್ಥವಾಗಿ ಬರಲು ಯೋಗಿ ರಾಜನೂ ಇದ್ದಿಲ್ಲ ಅ ವನ ಕುರುಹೂ ಇದ್ದಿಲ್ಲ; ಜನರು ಆಧ್ಯಾತ್ಮರಾಗಿ ಮಾತನಾಡುತ್ತ ನಿಂ ತುಕೊಂಡರು ಅಷ್ಟರಲ್ಲಿ ಬೀರಬಲನು ತುರುಗಾರೂಢನಾಗಿ ಒಲಗಕ್ಕೆ ಹೋಗುತ್ತಿರುವದನ್ನು ನೋಡಿ ಹರ್ಷ ನಿರ್ಭರರಾದರು.
-( ೧೬೦, ಅಂಗುಲಿ ಸಂಕೇತ. )-
ಬಾದಶ ಹನ ಓಲಗದಲ್ಲಿ ಒಬ್ಬ ಉಚ್ಚ ಕುಲದ ಸರದಾರನಿದ್ದನು ಆದರೆ ಅವನು ದೈವ ದುರ್ವಿಲಾಸದಿಂದ ಅತಿಶಯ ಹೀನಾವಸ್ಥೆ ಯುಳ್ಳವನಾಗಿದ್ದ ನು ಆದರೂ ಓಲಗದಲ್ಲಿ ಒಂದು ಕುಳಿತುಕೊಳ್ಳುವ ಮರ್ಯಾದೆಯಿತ್ತು ಅವ ನು ಮಹಾಸಭೆಗೆ ಬರಬೇಕಾದರೆ ಉತ್ತಮವಾದ ವಸ್ತ್ರಗಳನ್ನು ಧಾರಣ ಮಾಡಿಕೊಂಡು ಬರುತ್ತಿದ್ದನು ಇಷ್ಟು ವಸ್ತ್ರಗಳ ಹೊರತು ಬೇರೆ ವಸ್ತ್ರಗಳೇ ಇದ್ದಿಲ್ಲ ಇದರೆ ಹೊಟ್ಟೆಯಸಲುವಾಗಿ ಒಂದು ಬೀಸುವಕಲ್ಲನ್ನು ಇಟ್ಟು ಕೊಂಡು, ಕೂಲಿಯಿಂದ ಕಾಳುಗಳನ್ನು ಬೀಸುತ್ತಿದ್ದನು.
ಒಂದುದಿವಸ ಕಾಲುಗಳು ಬಹಳ ಬಂದಿದ್ದವು ಸಭೆಗೆ ಹೋಗಲಿಕ್ಕೆ ಅನುವು ದೊರೆಯಕಿಲ್ಲ; ಆ ದಿವಸ ಅಕಸ್ಮಾತ್ತಾಗಿ ಬಾದಶಹನ ಸವಾರಿಯು ಆ ಸರದಾರನ ಮನೆಯಮುಂದೆಯೇ ಬಂತು ಆ ಸರದಾರನ ಮನೆಯು ಚಿ ಕ್ಕದಿತ್ತು ಅವನು ಒಳಗೆ ಕುಳಿತುಕೊಂಡೇ ಸವಾರಿಯನ್ನು ನೋಡಹತ್ತಿದ ನು ಬಾದಶಹನ ದೃಷ್ಟಿಯೂ ಅವನ ಮೇಲೆ ಬಿತ್ತು,
ಮುಂದೆ ಕೆಲವುದಿವಸಗಳಾದಮೇಲೆ ಒಂದು ಸಮಾರಂಭದಲ್ಲಿ ಅನ್ಯಸರ ದಾರ ಉಮರಾವರೊಡನೆ ಆ ಉಚ್ಚಪ್ರತಿಯ ಸರದಾರನೂ ಬಂದು ಕುಳಿ