ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೪೬

ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದಕಥೆಗಳು.
೨೭೫


ದ್ದನು. ಮೊದಲಿನಂತೆಯೇ ಅವನ ದ್ವಾರದಸಮೀಪಕ್ಕೆ ಹೋಗಿ ತಾನು ಬಹಳೇ ದಣಿದು ಬಂದಿರುವೆನೆಂದು ಹೇಳಿದನು. ಆಗ ಆ ಧನಾಡ್ಯನು “ ನಿನಗೆಲ್ಲಿ ಎಷ್ಟು ದಿವಸ ನಿಂತುಕೊಳ್ಳಬೇಕೆಂಬ ಅಪೇಕ್ಷೆಯಿರುವದೋ ಅಷ್ಟು ದಿವಸಗಳ ತನಕ ನಿಶ್ಚಿಂತೆಯಿಂದ ನನ್ನ ಮನೆಯಲ್ಲಿ ವಾಸಮಾಡು, ಈ ಗೃಹವು ನಿನ್ನ ದಂತಲೇ ಭಾವಿಸಿಕೋ, ನಿನಗೆ ಯಾವಪ್ರಕಾರದ ತೊಂದರೆಯೂ ಉಂಟಾ ಗಲಾರದು ” ಎಂದು ಮಾತನಾಡಿದನು. ಆಗ ಬಾದಶಹನು ಸ್ವಾಮೀ ನನಗೆ ಸ್ವಲ್ಪ ಹೊತ್ತು ವಿಶ್ರಾಂತಿಗೆ ಸ್ಥಳದೊರೆತರೆ ಸಾಕು ಎಂದನು. ಆಮೇಲೆ ಉ ಳಿದ ಮಾತುಕಥೆಗಳು ಸಾಗಿದವು, ಆಗ ಬಾದಶಹನು ಆ ಡಂಗುರದ ವಿಷಯ ವನ್ನೇ ತೆಗೆದನು ಆಗ ಧನಾಡ್ಯನು “ ಸ್ವಾಮಿ ! ಈ ಜಗತ್ತಿನಲ್ಲಿರುವ ಪ್ರತಿ ಯೊಬ್ಬ ಪ್ರಾಣಿಯು ತನ್ನ ಉಳಿತಾಯವಾಗಬೇಕೆಂದು ಅಪೇಕ್ಷಿಸುತ್ತಿರು ವನೇ ಹೊರತು ಹಾನಿಯನ್ನು ಅಪೇಕ್ಷಿಸುವದಿಲ್ಲ ಉಳಿದವರು ಹ್ಯಾಗೆ ಮಾ ಡಿರಲಿ, ಅದರಗೊಡವೆಯು ನನಗೆಬೇಡ ! ನಾನಂತೂ ಹಾಲುಹಾಕುವದಕ್ಕೆ ಪ್ರತಿಯಾಗಿ ನೀರನ್ನೇ ಹಾಕಿ ಬಂದೆನು' ಎಂದು ಹೇಳಿದನು. ಆಗ ಬಾದಶ ಹನು “ ಈ ನಿಮ್ಮ ಕಪಟಕೃತ್ಯವು ಬಾದಶಹನಿಗೆ ವಿದಿತವಾದರೆ ನಿಮ್ಮ ಗತಿ ಏನಾಗುವದೆಂಬದನ್ನು ವಿಚಾರಮಾಡಿಕೊಂಡು ತಿಳಿದಿದ್ದೀರಾ” ಎಂದು ಪ್ರಶ್ನೆ ಮಾಡಿದನು. ಈಮಾತಿಗೆ ಪ್ರತ್ಯುತ್ತರವಾಗಿ ಧನಾಡ್ಯನು ಈ ವಿಷಯವು ನಿನ್ನ ದ್ವಾರದಿಂದ ಬಾದಶಹನಿಗೆ ತಿಳಿಯಬೇಕೇ ಹೊರತು ಅನ್ಯರಿಂದ ತಿಳಿ ಯುವಂತಿಲ್ಲ ಎಂದನು. ಆ ಕೂಡಲೇ ಬಾದಶಹನು ತನ್ನ ನಿಜಸ್ವರೂಪವಂ ನು ವ್ಯಕ್ತಪಡಿಸಲು ಧನಾಡ್ಯನು ಬೆದರಿದನು. ಬಾದಶಹನು ಅವನಿಗೆ ಅಭ ಯವನ್ನಿತ್ತು ಭಯಪಡಬೇಡ, ನಿನ್ನಂತೆಯೇ ಯಾವತ್ತರೂ ಮಾಡಿದ್ದಾರೆ ಈ ಸಂಗತಿಯನ್ನು ಪರೀಕ್ಷಿಸಿ ನೋಡಬೇಕೆಂತಲೇ ಪ್ರಚ್ಛನ್ನ ವೇಷದಿಂದ ಸಂಚಾರಮಾಡಹತ್ತಿದ್ದೇನೆ ಎಂದು ಹೇಳ ಹೊರಟುಬಂದನು ಮತ್ತು ಬೀರ ಬಲನ ವಿಚಾರಶಕ್ತಿಯ ವಿಷಯದಲ್ಲಿ ಆನಂದಪಟ್ಟನು.
-(೧೬೨. ಜಲಾಶಯದಲ್ಲಿ ಬ್ರಾಹ್ಮಣನು.)- ಹೇಮಂತಕಾಲದಲ್ಲಿ ಬಾದಶಹನು ಒಂದುದಿವಸ ತನ್ನ ಅನುಯಾಯಿ ಗಳೊಡನೆ ಉಪವನದಲ್ಲಿ ಸಂಚಾರಾರ್ಥವಾಗಿ ಬಂದಿದ್ದನು ಜಲಾಶಯಗಳಲ್ಲಿ ಯ ಜಲವು ಅತಿಸೀತಕರವಾಗಿದ್ದವು, ಬಾದಶಹನು ಜಲದಲ್ಲಿ ತನ್ನ ಬೆರಳನ್ನು ಎದ್ದಿ ಆ ಕೂಡಲೆ ಹೊರಗೆ ತೆಗೆದುಕೊಂಡು ತನ್ನ ಅನುಯಾಯಿಗಳನ್ನು ಕುರಿತು “ ಜಲವು ಬಹುಶೀತಲವಾಗಿದೆ; ಇದರಲ್ಲಿ ಕುಳಿತುಕೊಂಡು ಯಾವ ನಾದರೂ ಒಂದು ಸಂಪೂರ್ಣರಾತ್ರಿಯನ್ನು ಕಳೆಯಲು ಸಮರ್ಥನಾಗುವ