ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೪೭

ಈ ಪುಟವನ್ನು ಪರಿಶೀಲಿಸಲಾಗಿದೆ
೨೭೬
ಅಕಬರ ಬೀರಬಲ ಚಾತುರ್ಯವಾದ ವಿನೋದಕಥೆಗಳು.


ನೇನು" ಎಂದು ಕೇಳಿದನು. ಯಾವತ್ತರೂ ಆಗಲಾರದೆಂದು ಹೇಳಿದರು ಆಗ ಬಾದಶಹನು " ಯಾವನಾದರೂ ಈ ಜಲಾಶಯದಲ್ಲಿ ಸಂಪೂರ್ಣರಾತ್ರಿಯ ನ್ನು ಕಳೆದರೆ ಅವನಿಗೆ ಐವತ್ತು ಸಾವಿರ ರೂಪಾಯಿಗಳನ್ನು ಪಾರಿತೋಷಕ ವಾಗಿ ಕೊಡುತ್ತೇನೆ ಯಾರಿಗಾದರೂ ಧೈರ್ಯವಿದ್ದರೆ ಮುಂದೆ ಬರ್ರಿ !ಎಂ ದನು. ಬಾದಶಹನ ಆಜ್ಞೆಯು ಸರ್ವರಿಗೂ ಕೇಳಬಂತು, ಆದರೆ ಬಬ್ಬನಾದ ರೂ ಮುಂದುವರಿಯಲಿಲ್ಲ; ಆ ಜನಸಮೂಹದಲ್ಲಿ ಒಬ್ಬ ದರಿದ್ರಿಯಾದ ಬ್ರಾ ಹ್ಮಣನಿದ್ದನು, ಅವನು ಹೊದ್ದು ಕೊಂಡ ಒಂದು ಬಟ್ಟೆಯಾದರೂ ಗಟ್ಟಿಯಾ ಗಿ ಇದ್ದಿಲ್ಲ; ಅವನು ಆಲೋಚಿಸಿದ್ದೇನಂದರೆ - ನಾನು ಕೇವಲದರಿದ್ರ ನಾದ ದಿಂದ ಉಪಜೀವನಕ್ಕೆ ಬಹಳೇ ತೊಂದರೆಯಾಗುತ್ತದೆ, ಒಂದು ನೀರಿನಲ್ಲಿ ಕುಳಿತುಕೊಂಡರೆ ಬಾಧೆಯೇನು, ಒಂದುವೇಳೆ ಇದರಲ್ಲಿಯೇ ಮರಣವುಬಂ ದೊದಗಿದರೆ ಈ ಕಷ್ಟ ದಿಂದಾದರೂ ಬಿಡುಗಡೆಯಾದೀತು, ಒಂದುವೇಳೆ ಬ ದುಕಿಕೊಂಡರೆ ಐವತ್ತು ಸಾವಿರ ರೂಪಾಯಿಗಳು ಸಿಕ್ಕುತ್ತವೆ ದರಿದ್ರತನವು ಹಿಂಗುವದು ” ಎಂದು ನಿಶ್ಚಯಿಸಿಕೊಂಡು ನಮ್ರತೆಯಿಂದ ಮುಂದೆ ಬಂದು "ಖುದಾನಂದ ! ತಮ್ಮ ಅಪ್ಪಣೆಯಾದರೆ ಒಂದು ಸಂಪೂರ್ಣರಾತ್ರಿಯನ್ನು ಈ ಜಲದಲ್ಲಿ ಕಳೆಯುವದಕ್ಕೆ ಸಿದ್ಧನಿರುವೆನು” ಎಂದು ಬಿನ್ನ ಹಮಾಡಿದನು ಆಗ ಬಾದಶಹನು ಒಂದು ಸಂಪೂರ್ಣರಾತ್ರಿಯನ್ನು ಈ ಜಲದಲ್ಲಿ ನಿಂತು ಕೊಂಡು ಕಳೆದರೆ ಐವತ್ತು ಸಾವಿರ ರೂಪಾಯಿಗಳನ್ನು ಕೊಡುವದಲ್ಲದೇ ಮತ್ತೆ ವಸ್ತ್ರಾಭರಣಗಳನ್ನು ಉಚಿತವಾಗಿ ಕೊಡುವೆನು ಎಂದುಹೇಳಿದನು. ಈ ಮಾತಿಗೆ ಬ್ರಾಹ್ಮಣನು ಒಪ್ಪಿಕೊಂಡನು ಬಾದಶಹನು ಆ ಜಲಾಶ ಯದ ಸುತ್ತುಮುತ್ತು ಕಾವಲಿಟ್ಟನು ದ್ರವ್ಯ ದಾಶೆಯಿಂದ ಬ್ರಾಹ್ಮಣನು ನೀರೊಳಗೆ ಆಕ೦ಠ ಪರಿಯಂತರ ತನ್ನ ದೇಹವನ್ನು ಮುಳುಗಿಸಿಕೊಂಡು ನಿಂತನು ಪ್ರಾತಃಕಾಲ ವಾಗುತ್ತಲೇ ಆ ಜಲಾಶಯದಿಂದ ಹೊರಬಿದ್ದು ಒ ದ್ದೆ ಬಟ್ಟೆ ಯಿಂದಲೇ ಅರಮನೆಗೆ ಬಂದನು ಅವನ ಸಂಗಡ ಕಾವಲುಗಾರ ರೂ ಬಂದರು ಬ್ರಾಹ್ಮಣನು ಬಾದಶಹನ ಬಳಿಗೆ ಹೋಗಿ, ದವ್ಯವನ್ನು ಬೇ ಡಿದನು ಕಾವಲುಗಾರರ ಮುಖದಿಂದ ವೃತ್ತಾಂತವನ್ನೆಲ್ಲ ಕೇಳಿಕೊಂಡು ಬಾದಶಹನು ರೂಪಾಯಿಗಳನ್ನು ಕೊಡುವದಕ್ಕೆ ಅಪ್ಪಣೆ ಮಾಡಿದನು ಆದ ರೆ ಹೊಟ್ಟೆ ಯುರಕರಾಗಿದ್ದ ಕೆಲವರು ಒಬ್ಬ ಕಾವಲುಗಾರನನ್ನು ತಮ್ಮ ಕ ಡೆಗೆ ಒಲಿಸಿಕೊಂಡು ಹಣವನ್ನು ಕೊಡುವದಕ್ಕೆ ಪ್ರತಿಬಂಧವನ್ನು ತಂದ ರು ಆಗ ಕಾವಲುಗಾರನು ಮುಂದೆಬಂದು, " ಪೃಥ್ವಿನಾಥ ! ಈ ಬಾಹ್ಮಣ ನು ಜಲದಲ್ಲಿ ನಿಂತುಕೊಂಡು ಸಂಪೂರ್ಣರಾತ್ರಿಯನ್ನು ಕಳೆದದ್ದೇನೋನಿಜ