ಆದರೆ ಗುಡ್ಡಕ್ಕೆ ಬೇಗೆಯು ಹತ್ತಿದ್ದರಿಂದ, ಇವನು ಜಲದಲ್ಲಿ ನಿಲ್ಲಲು ಸಮ
ರ್ಥನಾದನು; ಇಲ್ಲದಿದ್ದರೆ ಸತ್ತು ಹೋಗುತ್ತಿದ್ದನು ” ಎಂದು ಹೇಳಿದನು ಅ
ದನ್ನು ಕೇಳಿ ಬಾದಶಹನು- “ ನಿನ್ನ ದೃಷ್ಟಿಗೆ ಅಗ್ನಿಯು ಬಿದ್ದದರಿಂದ ನೀರಿನಲ್ಲಿ ನಿಂತುಕೊಳ್ಳಲು ಸಮರ್ಥನಾದಿ ! ಅದರಿಂದ ನಿನಗೆ ಪಾರಿತೋಷಕವು
ದೊರೆಯಲಾರದು ” ಎಂದು ಹೇಳಿದನು.
ಬ್ರಾಹ್ಮಣನು ದುಃಖಿತನಾಗಿ ಬೀರಬಲನಮನೆಗೆ ಹೋದನು ಬೀರಬ
ಲನು ಅವನಿಗೆ ಧೈರ್ಯ ಹೇಳಿ, ಕಳುಹಿಸಿ ಕೊಟ್ಟನು ಆಮೇಲೆ ಓಲಗಕ್ಕೆ ಹೋಗುವ ಸಮಯವು ಸಮೀಪಿಸಲು ಆ ದಿವಸ ಓಲಗಕ್ಕೆ ಹೋಗದೆ ನದಿಯದಂಡಗೆ
ಹೋಗಿ, ಒಂದು ಉದ್ದವಾಗಿದ್ದ ಗಳವನ್ನು ತೆಗೆದುಕೊಂಡು ಹೋಗಿ, ಆದನ್ನು ಭೂಮಿಯಲ್ಲಿ ನೆಡಿಸಿ ಅದರ ಮೇಲ್ಬಾಗಕ್ಕೆ, ಒಂದು ಗಡೆಗೆಯನ್ನು ಕಟ್ಟಿ
ಅದರಲ್ಲಿ ಅಕ್ಕಿಯನ್ನೂ ನೀರನ್ನೂ ಹಾಕಿ ಬುಡದಲ್ಲಿ ಹುಲ್ಲಿನಿಂದ ಉರಿಯನ್ನು ಮಾಡುತ್ತ ಕುಳಿತುಕೊಂಡನು.
ಬಾದಶಹನು ನ್ಯಾಯಸ್ಥಾನದಲ್ಲಿ ಬಂದು ಕುಳಿತುಕೊಂಡು ನಿಯತ
ಸಮಯವು ಮೀರಿಹೋದರೂ ಬೀರಬಲನು ಬಾರದಿರುವದನ್ನು ಕಂಡು ಒಬ್ಬ
ಸೇವಕನನ್ನು ಕರೆಯಲಿಕ್ಕೆ ಕಳುಹಿಕೊಟ್ಟನು ಅವನು ಬೀರಬಲನ ಗೃಹಕ್ಕೆ
ಹೋಗಿ ವಿಚಾರಿಸಲು ನದಿಯ ಕಡೆಗೆ ಹೋಗಿದ್ದಾರೆಂದು ತಿಳಿಯಬಂತು ಆ
ಕೂಡಲೆ ಅವನು ಶೀಘ್ರವಾಗಿ ಹೋಗಿ ಬೀರಬಲನಿಗೆ ಬೆಟ್ಟಿಯಾಗಿ - "ಬಾದ
ಶಹರವರು ತಮ್ಮನ್ನು ಕರೆದುಕೊಂಡು ಬರುವದಕ್ಕೆ ಕಳಿಸಿದ್ದಾರೆ; ನಡೆಯ
ಬೇಕು ” ಎಂದನು, ಬೀರಬಲ-ಬರುತ್ತೇನೆ.
ಸೇವಕ-ಮಹಾಶಯ ! ಇದನ್ನೇನು ಆರಂಭಿಸಿರುವಿರಿ ?
ಬೀರಬಲ -:ಅನ್ನವನ್ನು ಬೇಯಿಸಹತ್ತಿದ್ದೇನೆ.
ಈಮಾತು ಕಿವಿಗೆ ಬಿದ್ದ ಕೂಡಲೆ ಸೇವಕನು ನಗುತ್ತ ಬಾದಶಹನ ಬಳಿಗೆ ಬಂದು ಸಮಗ್ರ ವೃತ್ತಾಂತವನ್ನು ತಿಳಿಸಿದನು. ಆಮೇಲೆ ಕಿಂಚಿತ್ಕಾಲ
ಮಾರ್ಗ ಪ್ರತಿಕ್ಷೆ ಮಾಡಿ, ಬಾರದಾಗಲು ಪುನಃ ಮತ್ತೊಬ್ಬ ಸೇವಕನನ್ನು
ಕಳುಹಿಸಿದನು ಅವನಿಗೂ ಅದೇ ಉತ್ತರವು ಬಂತು ಪುನಃ ಮೂರನೆಯವನನ್ನು ಕಳಿಸಿದನು ಅವನು ಹೋಗಿಬಂದು ಅದೇಸಂಗತಿಯನ್ನು ತಿಳಿಸಿ”
ಹೀಗೆ ಬಾದಶಹನು ಎಷ್ಟೋ ಸಾರೆ ಕಳುಹಿಸಿದರೂ ಸಹ ಬೀರಬ
ದೆ ಕರೆಯಬಂದ ಬಂದವರಿಗೆಲ್ಲ, " ಅನ್ನವನ್ನು ಬೇಯಿಸಿ ಇಟ್ಟು
ನೆಂದು ಹೇಳಿ ಕಳುಹಿಸಿದನೇ ಹೊರತು ಓಲಗಕ್ಕೆ ಬರಲಿಲ್ಲ
ರ್ಜನವಾಯಿತು ಆಮೇಲೆ ಬಾದಶಹನು ಅತಿಸಂಪ