"ವನ್ನು ಸಾಗಿಸಿರುತ್ತೇನೆ ನಾನು ಬಂಗಾಲ ಪ್ರಾಂತದಲ್ಲಿಯ ಡಾಕಾ"
"ಗಾಮಕ ಪಟ್ಟಣಕ್ಕೆ ಹೋದಾಗ ಒಬ್ಬ ವರ್ತಕನ ಬಳಿಯಲ್ಲಿದ್ದ ಒಂದು
ರಾಜ ” " ಹಂಸವನ್ನು ಕಂಡೆನು. ಆ ಪಕ್ಷಿಯು ಅತಿ ಸುಂದರವಾದದ್ದಿತು,
ಅದರ ಪುಕ್ಕಗಳು ” "ಸುವರ್ಣದ ವರ್ಣವನ್ನು ಹೀಯಾಳಿಸುತ್ತಿದ್ದವು ಅದರ ಶರೀರವು ಒಳ್ಳೆಕಾಂತಿ ಯುಕ್ತವಾಗಿ ಪುಷ್ಟವಾಗಿತ್ತು ಅಹಹಾ !
ಅದನ್ನು ಬಣ್ಣಿಸುವದು ನನ್ನಿಂದ ಸಾಧ್ಯವಲ್ಲ ಆ ಪಕ್ಷಿಯು ನಿಮ್ಮಂಥ
ಚಕ್ರವರ್ತಿಗಳ ಬಳಿಯಲ್ಲಿ ಇರುವದಕ್ಕೆ ” ' ಯೋಗ್ಯವಾದದ್ದು ಅದನ್ನು
ಕ್ರಯಕ್ಕೆ ತೆಗೆದುಕೊಂಡು, ಖಾವಂದರವರಿಗೆ ಕಾಣಿಕೆಯಾಗಿ ಸಮರ್ಪಿಸ
ಬೇಕೆಂಬ ಸದಿಚ್ಛೆಯಿಂದ, ಆ ವರ್ತಕನು ಕೇಳಿದಷ್ಟು ಬೆಲೆಯನ್ನು ಕೊಟ್ಟು, ತೆಗೆದುಕೊಂಡು ಇಲ್ಲಿಗೆ ಬಂದೆನು, ಮತ್ತು ಆ ಪಕ್ಷಿಯ
"ಪಂಜರವನ್ನು ನಾನು ಮಲಗಿಕೊಳ್ಳುವ ಅಂತರ್ಗಹದಲ್ಲಿ ತೂಗಹಾಕಿದೆ
ನು” ಆ ಮೇಲೆ ಪಟ್ಟಣದಲ್ಲಿ ಸಂಚಾರಮಾಡಿ, ತಿರುಗಿ ಬಂದು ನೋಡಲು,
ಪಕ್ಷಿಯು ” " ಮಾಯವಾಗಿತ್ತು ನನ್ನ ಸೇವಕರಲ್ಲಿಯೇ ಯಾವನೋ ಒಬ್ಬನು ಆ ಪಕ್ಷಿಯನ್ನು ಭಕ್ಷಿಸಿರಬೇಕೆಂಬ ಆಕ್ಷೇಪಣೆಯು ನನಗುಂಟಾಗಿದೆ;
ಅದರಿಂದ ಕೃಪಾಳು ” ಗಳು, ಆ ಅಪರಾಧಿಯನ್ನು ಶೋಧಮಾಡಿ; ಅವನಿಗೆ ಯೋಗ್ಯದಂಡನೆಯನ್ನು"ವಿಧಿಸುವಿರೆಂದು ನಂಬಿದ್ದೇನೆ. ”
ಎಂದು ಬರೆದಿದ್ದ ಲೇಖನಾಭಿಪ್ರಾಯವನ್ನು ಕೇಳಿ ಬಾದಶಹನು ಆ
ವರ್ತಕನ ಮನೆಯ ಯಾವತ್ತು ಸೇವಕರನ್ನು ಕರೆದು ಕೊಂಡು ಬರ್ರಿ !
ಎಂದು ಆಜ್ಞಾಸಿದನು. ಕಿಂಚಿತ್ಕಾಲದೊಳಗಾಗಿ ಯಾವತ್ತು ಸೇವಕರು ಓಲಗದಲ್ಲಿ ತಂದು ನಿಲ್ಲಿಸಲ್ಪಟ್ಟರು ಬಾದಶಹನು ಎಲ್ಲರಿಗೂ ವಿಚಾರಮಾಡಿದನು ಅಪರಾಧಿಯು ಸಿಕ್ಕಲಿಲ್ಲ ಆಗ ಬಾದಶಹನು ಆವರ್ತಕನನ್ನು ಕುರಿತು " ನಾನು ಯಾವತ್ತು ಸೇವಕರನ್ನು ಕರೆಯಿಸಿ ವಿಚಾರಮಾಡಿದೆನು
ಅದರಿಂದೇನೂ ಪ್ರಯೋಜನವಾಗಲಿಲ್ಲ ನಿಮ್ಮ ಸಂಶಯವು ಮತ್ತೆ ಯಾರ
ಮೇಲಾದರೂ ಇದ್ದರೆ ತಿಳಿಸು ” ಎಂದು ಹೇಳಿ ಆ ವರ್ತಕನ ಸೇವಕರಿಗೆ
ಹೋಗಲಪ್ಪಣೆಕೊಟ್ಟನು ವರ್ತಕನು ಬಾಡಿದ ಮುಖವುಳ್ಳವನಾಗಿ ಬೀರಬಲನ ಕಡೆಗೆ ನೋಡುತ್ತ " ಈ ದಿವಸ ನನ್ನ ನ್ಯಾಯ ನಿರ್ಣಯವು ಆದಂತೆ
ಅನ್ಯರದಾದರೂ ಆಗುತ್ತಿರಬಹುದು, ಇನ್ನು ಈ ಜಗತ್ತಿನಲ್ಲಿ ನ್ಯಾಯವಿಮರ್ಶೆಯನ್ನು ಮಾಡುವವರೇ ಇಲ್ಲದಂತಾಯಿತು ಇಂಥ ಪ್ರಸಿದ್ಧವಾದ ಅಕ
ಬರ ಬಾದಶಹನ ಓಲಗದ ಸ್ಥಿತಿಯೇ ಹೀಗಿದ್ದ ಮೇಲೆ ಅನ್ಯರ ಪಾಡೇನು ?
ಆಶ್ಚರ್ಯ ? ಮಹದಾಶ್ಚರ್ಯ !! ” ಎಂದನು. ಆಗ ಬೀರಬಲನು ಆ ವರ್ತ
ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೫೦
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.
೨೭೯