ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೫೧

ಈ ಪುಟವನ್ನು ಪ್ರಕಟಿಸಲಾಗಿದೆ
೨೮೦
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.



ಕನನ್ನು ಕುರಿತು- ( ಸಮಾಧಾನವನ್ನು ತಾಳು ! ನಾನು ನಿನ್ನ ನ್ಯಾಯನಿರ್ಣಯವನ್ನು ಮಾಡುತ್ತೇನೆ. ” ಎಂದುಹೇಳಿ ಪುನಃ ಆ ಸೇವಕರನ್ನು ಮಾರ್ಗದಲ್ಲಿಯೇ ಇದ್ದಕ್ಕಿದ್ದ ಹಾಗೆ ಬಂಧನಮಾಡಿಕೊಂಡು ಬರ್ರಿ ! ಎಂದು ಅಪ್ಪಣೆ ಮಾಡಿ ನಿಯೋಗಿಗಳನ್ನು ಅಟ್ಟಿದನು ಅವರು ಓಡುತ್ತ ಹೋಗಿ, ಮುಂದೆ ಮಾರ್ಗದಲ್ಲಿ ಹೋಗುತ್ತಿದ್ದ ಆ ಸೇವಕರನ್ನು ಚತುರ್ಭುಜರನ್ನಾಗಿ ಮಾಡಿ ಓಲಗದಲ್ಲಿ ತಂದು ನಿಲ್ಲಿಸಿದರು ಆಗ ಬೀರಬಲನು ಕೆಲವು ಪ್ರಶ್ನೆಗಳನ್ನು ಮಾಡಿ ಆ ಮೇಲೆ ಎಲೈ ಭೋರಾಗ್ರಣಿಯೇ! ನಿನ್ನ ಮನಸ್ಸಿನಲ್ಲಾದರೂ ಇದ್ದದೇನು ! ಪತ್ನಿಯನ್ನು ಹೊಡೆದು ತಿಂದು ಬಿಟ್ಟ ಸಂಗತಿಯು ಹೋಗಲಿ ! ಆದರೆ ಅದರ ಗರಿಯನ್ನು ಮುಂಡಾಸದಲ್ಲಿ ಇಟ್ಟುಕೊಂಡು ಬರಬೇಕೇ! ಶಹ ಬಾಸ ! ನಿನ್ನ ಧೈರ್ಯಕ್ಕೆ ಬಣಿಯೇ ಇಲ್ಲ; ಇಷ್ಟು ಹೊತ್ತಿನ ವರೆಗೆ ನೀನು ಒಪ್ಪಿಕೊಂಡಿದ್ದಿಲ್ಲ; ಈಗ ಏನು ಹೇಳು ! ಎಂದು ನುಡಿದನು ಈ ಮಾತುಗಳು ಪ್ರತಿಯೊಬ್ಬನಿಗೂ ಕೇಳಬಂದವು ಆ ಸೇವಕರಲ್ಲಿಯೇ ಒಬ್ಬನು ಪಕ್ಷಿಯನ್ನು ಕೊಂದು ತಿಂದು ಬಿಟ್ಟದ್ದನು. ಆಗ ಅವನು ತನ್ನ ಮನಸ್ಸಿನಲ್ಲಿ ನಾನೇನಾದರೂ ವಿಸ್ಮರಣೆಯಿಂದ ಗರಿಯನ್ನು ಮುಂಡಾಸದಲ್ಲಿ ಇಟ್ಟುಕೊಂಡಿರ ಬಹುದೇನೋ! ಎಂಬ ಸಂದೇಹವು ಉತ್ಪನ್ನವಾಗಿ ಅವನು ಯಾರಿಗೂ ತಿಳಿಯದಂತೆ ಸಾವಕಾಶವಾಗಿ ಮುಂಡಾಸದ ಮೇಲೆ ಕೈಯಾಡಿಸಿ ಕೊಂಡನು ಸಭಾಸದರೆಲ್ಲರೂ ಆ ಸೇವಕರನ್ನೇ ನೋಡುತ್ತ ಕುಳಿತುಕೊಂಡಿದ್ದರು ಆದರೆ ಮುಂಡಾಸದ ಮೇಲೆ ಕೈಯಾಡಿಸಿಕೊಂಡವನ ಮೇಲೆ ಯಾರ ದೃಷ್ಟಿಯೂ ಬೀಳಲಿಲ್ಲ ಬೀರಬಲನು ಮಾತ್ರ ಕಂಡನು. ಆಗ ಅವನನ್ನು ಹಿಡಿದುನಿಲ್ಲಿಸಿ ಉಳಿದವರಿಗೆ ಹೋಗಲಪ್ಪಣೆ ಕೊಟ್ಟನು ಆಮೇಲೆ ಅವನನ್ನು ನಯಯಭಗಳಿಂದ ವಿಚಾರಿಸಿದನು ಆದರೂ ಅವನು ತನ್ನ ಅಪರಾಧವನ್ನು ಒಪ್ಪಿಕೊಳ್ಳಲಿಲ್ಲ ಕಡೆಗೆ ಕರ್ಮಚಾರಿಗಳನ್ನು ಕರೆದು -" ಇವನನ್ನು ಬಳಿ ತಾಗಿ ದಂಡಿಸಿರಿ, ” ಎಂದು ಅಪ್ಪಣೆ ಮಾಡಿದನು ಆ ಕೂಡಲೆ ತಾಡನದ ಭಯ ದಿಂದ ಅವನು ಅಪರಾಧವನ್ನು ಒಪ್ಪಿಕೊಂಡು ಮುಂಡಾಸದಲ್ಲಿ ಬಚ್ಚಿಟ್ಟು ಕೊಂಡಿದ್ದ ಹಂಸಪಕ್ಷಿಯ ಗರಿಯನ್ನು ತೋರಿಸಿದನು. ಈ ಹಂಚಿಕೆಯಿಂದ ತುಡುಗನನ್ನು ಬಯಲಿಗೆ ತಂದು ಅವನಿಗೆ ಉಚಿತವಾದ ದಂಡನೆಯನ್ನು ವಿಧಿ ಸಿದನು ಸಭಾ ವಿಸರ್ಜನೆಯ ಸಮಯವು ಸಮೀಪಿಸಲು ಎಲ್ಲರೂ ತಾಂಬೂಲ ಸುಗಂಧಾದಿದ್ರವ್ಯಗಳನ್ನು ಕೊಡಲಪ್ಪಣೆ ಮಾಡಿದನು ಆಗ ಬಾದಶಹನ ಕೈ ಯೊಳಗಿದ್ದ ಸುವರ್ಣದ ತೈಲವಾತ್ರೆಯೊಳಗಿಂದ ಒಂದು ತೈಲಬಿಂದುವು ಕೆಳಗೆ ಹಾಸಿದ ರತ್ನಗಂಬಳಿಯ ಮೇಲೆ ಬಿತ್ತು ಅದನ್ನು ಪುನರಸಿ ಪಾತ್ರೆ