ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೫೩

ಈ ಪುಟವನ್ನು ಪ್ರಕಟಿಸಲಾಗಿದೆ
೨೮೨
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು


ಬೀರಬಲನು ಅಕಬರಶಹನ ದರ್ಬಾರದಿಂದ ಹೊರಟು ಹೋಗಿರುವನೆಂಬ ವಾರ್ತೆಯು ದೇಶವಿದೇಶಗಳಲ್ಲಿ ಪಸರಿಸಿತು. ಆಗ ಬಾದಶಹನ ವೈರಿಗಳು ಒಳಸಂಚನ್ನು ನಡೆಯಿಸಿದರು. ಏನಂದರೆ- "ಅಕಬರಶಹನ ಓಲಗದಲ್ಲಿ ಚತುರನಾದ ಮಂತ್ರಿಯು ಇಷ್ಟು ದಿವಸಗಳವರೆಗೆ ಇದ್ದದರಿಂದ ಅವನ ರಾಜ್ಯಸೂತ್ರದಲ್ಲಿ ಕೈಹಾಕಲಿಕ್ಕೆ ಸಾಮರ್ಥ್ಯವಿದ್ದಿಲ್ಲ; ಇನ್ನು ರಾಜ್ಯಹರಣ ಮಾಡಲಿಕ್ಕೆ ವಿಲಂಬವು ಹತ್ತುವಂತೆ ಇಲ್ಲ."

ಈ ಸಂಗತಿಯು ಗುಪ್ತಚರರ ಮುಖದಿಂದ ಬಾದಶಹನಿಗೆ ತಿಳಿಯಬಂತು. ಬೀರಬಲನನ್ನು ಕಾರ್ಯನಿವೃತ್ತ ಮಾಡಿದ್ದಕ್ಕೆ ಹಳಹಳಿಸಹತ್ತಿದನು. ಬೀರಬಲನ ಶೋಧಕ್ಕಾಗಿ ಅನುಚರರನ್ನು ಗ್ರಾಮ ಗ್ರಾಮಕ್ಕೆ ಕಳಿಸಿದನು. ಶೋಧಮಾಡಿಕೊಂಡು ಬಂದವರಿಗೆ ವಾರಿತೋಷಕವನ್ನು ಕೊಡುವೆನೆಂದು ಡಂಗುರವನ್ನು ಸಾರಿಸಿದನು. ಯಾವ ಉಪಾಯದಿಂದಲೂ ಬೀರಬಲನ ಶೋಧವು ಹತ್ತದೆ ಹೋಯಿತು. ಈ ವಾರ್ತೆಯು "ಬಲ್ಕ" ಪಟ್ಟಣದ ಬಾದಶಹನಿಗೆ ವಿದಿತವಾಗಲು, ಅವನು ಹಿಂದುಸ್ತಾನದ ಮೇಲೆ ದಂಡೆತ್ತಿಬರುವ ಸಿದ್ಧತೆಯನ್ನು ನಡೆಸಿದನು. ಮತ್ತು ತತ್ಪೂರ್ವದಲ್ಲಿ ಅಕಬರನ ಓಲಗದಲ್ಲಿದ್ದ ಉಳಿದ ಮುತ್ಸದ್ಧಿಗಳ ಚಾತುರ್ಯವನ್ನು ಪರೀಕ್ಷಿಸಿ ನೋಡಬೇಕೆಂಬ ಉದ್ದೇಶದಿಂದ "ಇನ್ನು ಮೂರುಮಾಸಗಳೊಳಗಾಗಿ ಒಂದು ಕೊಡದತುಂಬ ಬುದ್ಧಿಯನ್ನು ಕೊಟ್ಟು ಕಳುಹಿಸಬೇಕು, ಇಲ್ಲದೆಹೋದರೆ ಯುದ್ಧಕ್ಕೆ ಸಿದ್ಧರಾಗಬೇಕು" ಎಂಬ ಅಭಿಪ್ರಾಯಗರ್ಭಿತವಾದ ಒಂದು ಪತ್ರಿಕೆಯನ್ನು ಬರೆದು ಕಳುಹಿಸಿದನು. ಆ ಪತ್ರವನ್ನು ಓದಿಕೊಂಡು ಅಕಬರಬಾದಶಹನು ಚಿಂತೆಗೊಳಗಾದನು. ಈ ಪ್ರಸಂಗವು ಬೀರಬಲನ ಚಾತುರ್ಯದಿಂದ ದೂರಾಗಬೇಕಲ್ಲದೆ ಅನ್ಯರಿಂದ ಸಾಧ್ಯವಲ್ಲ; ಏನಾದರೂ ಹಂಚಿಕೆ ಮಾಡಿ ಬೀರಬಲನನ್ನು ಗೊತ್ತು ಹಚ್ಚಲಿಕ್ಕೇಬೇಕೆಂದು ನಿರ್ಣಯಿಸಿದನು. "ಪರುಷಮಣಿಯ ಸ್ಪರ್ಶದಿಂದ ಲೋಹವು ಸಹಾ ಭಂಗಾರವಾಗುವದೆಂಬ" ನಾಣ್ಣುಡಿಯಂತೆ ಬೀರಬಲನ ಸಂಗತಿಯಿಂದ ಬಾದಶಹನು ಸಹಾ ಚತುರನಾಗಿದ್ದನು. ಬೀರಬಲನನ್ನು ಶೋಧಮಾಡಲಿಕ್ಕೆ ಒಂದು ಹಂಚಿಕೆಯನ್ನು ಹುಡುಕಿದನು. ಅವನು ಪ್ರತಿಯೊಂದು ಗ್ರಾಮಕ್ಕೆ ಒಂದೊಂದು ಕುರಿಯನ್ನು ಕೊಟ್ಟು ಕಳುಹಿಸಿದನು, ಮತ್ತು ಅದರಸಂಗಡ "ಈ ಕುರಿಯನ್ನು ತೂಕಮಾಡಿ ಕಳಿಸಿದೆ ಇದರ ಪಾಲನ ಪೋಷಣೆಯ ಸಲುವಾಗಿ ಸರಕಾರದಿಂದ ಖರ್ಚುಕೊಡಲ್ಪಡುತ್ತದೆ. ಒಂದು ಮಾಸಪರಿಯಂತರ ಇದನ್ನು ಚನ್ನಾಗಿ ಆರೈಕೆಮಾಡಿ, ಅವಧಿಯು ಪೂರ್ಣವಾದ ಮರುದಿವಸವೇ ನಮ್ಮ ಕಡೆಗೆ ಕಳುಹಿಸಿಕೊಡಬೇಕು. ಆಗ