ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೫೪

ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದಕಥೆಗಳು.
೨೮೩

ನಾವು ಪುನಃ ತೂಕಮಾಡಿ ನೋಡುತ್ತೇವೆ ಆಗ ಇದರ ತುಲನೆಯಲ್ಲಿ ಕಿಂಚಿ ತ್ ನ್ಯೂನಾಧಿಕ್ಯವು ಕಂಡುಬಂದಲ್ಲಿ ಸಂರಕ್ಷಣೆಯ ಕೆಲಸವನ್ನು ಕೈಕೊಂ ಡವನಿಗೆ ಮರಣದ ತೀಕ್ಷೆಯನ್ನು ವಿಧಿಸಲಾದೀತು ” ಎಂಬ ಆಶಯಗರ್ಭಿತ ವಾದ ಪತ್ರಿಕೆಯನ್ನು ಬರೆದು ಕಳುಹಿಸಿದನು. ಯಾವತ್ತು ಗ್ರಾಮಗಳಿಗೆ ಸ ತಿಕೆಯೂ ಕುರಿಯೂ ಹೋದಂತೆ ಬೀರಬಲನಿದ್ದ ಗ್ರಾಮಕ್ಕಾದರೂ ಬಂದಿ ತು, ಈ ಸಂಗತಿಯು ಬೀರಬಲನಿಗೆ ತಿಳಿದಕೂಡಲೆ ನನ್ನನ್ನು ಶೋಧಮಾ ಡುವದಕ್ಕಾಗಿಯೇ ಬಾದಶಹನು ಈ ಹಂಚಿಕೆಯನ್ನು ತೆಗೆದಿದ್ದಾನೆ ಇನ್ನು ಮೇಲೆ ನಾನು ಪ್ರಕಟನಾಗುವದಕ್ಕೆ ಯಾವ ಆತಂಕವೂ ಇಲ್ಲ ಎಂದುಯೋ ಚಿಸಿ, ಅವನು ಗ್ರಾಮಾಧಿಕಾರಿಯ ಬಳಿಗೆ ಹೋದನು. ಆ ಸಮಯದಲ್ಲಿ ಗ್ರಾಮಾಧಿಕಾರಿಯು ತನ್ನ ಗ್ರಾಮದೊಳಗಿನ ಬುದ್ಧಿವಂತರೂ ಅನುಭವಿಕರೂ ಆದ ವೃದ್ಧರೊಡನೆ ಈ ವಿಷಯವನ್ನೆ ಪ್ರಸ್ತಾಪಿಸುತ್ತ ಕುಳಿತಿದ್ದನು ಬೀರಬಲನು ಹೋಗಿ ನಮಸ್ಕಾರಮಾಡಿ “ ಗ್ರಾಮಾಧಿಕಾರಿಗಳೇ! ನಿಮ್ಮ ಆಶ್ರಯದಿಂದ ನಾನು ಇಲ್ಲಿಯವರೆಗೆ ಸುಖದಿಂದ ಕಾಲಹರಣ ಮಾಡಿದೆನು, ನಿಮ್ಮ ಉಪಕಾರವು ನನ್ನ ಮೇಲೆಬಹಳವಾಗಿದೆ ಈಗ ಸದ್ಯಕ್ಕೆ ನಿಮ್ಮ ಮೇಲೆ ಸಂಕಟವು ಬಂದಿರುವದ ? ಆದರೊಳಗಿಂದ ಪಾರಾಗುವ ಹಂಚಿಕೆಯ ನ್ನು ನಾನು ಹೇಳುತ್ತೇನೆ, ನನ್ನ ಹೇಳಿಕೆಯಂತೆ ವರ್ತಿಸಿದರೆ ನಿಮ್ಮ ಸಂಕ ಟವು ನಿಶ್ಚಯವಾಗಿ ದೂರಾಗುತ್ತದೆ” ಎಂದನು ಆಗ ಗ್ರಾಮಾಧಿಕಾರಿಯು ನೀವು ಅಂಥ ಉಪಾಯವನ್ನು ತೋರಿಸಿಕೊಟ್ಟದ್ದಾದರೆ ಆಜನ್ಮ ಪರಿಯಂ ತರ ನಿಮ್ಮ ಗುಣಗಾನವನ್ನು ಮಾಡುವೆನು ಎಂದನು. ಈ ಮಾತಿಗೆ ಬೀರ ಬಲನು “ ನಿಮ್ಮ ಪಶು ಸಂಗ್ರಹಾಲಯದಲ್ಲಿ ಒಂದು ಸಿಂಹನಿರುವದಷ್ಟೆ ಅದರ ಪಂಜರದಮುಂದೆ ಈ ಕುರಿಯನ್ನು ಕಟ್ಟಸಿಬಿಡಿರಿ; ಅಂದರೆ ಇದು ಎಷ್ಟು ತಿಂದರೂ ಪುಷ್ಟ ವಾಗದೆ ಮೊದಲಿನಂತೆಯೇ ಇರುವದು, ಆದರೆ ಈ ಹಂಚಿಕೆಯನ್ನು ನಾನು ಹೇಳಿದೆನೆಂದು ಬಾದಶಹನಿಗೆ ತಿಳಿಸಬೇಡಿರಿ ಎಂದು ಹೇಳಿದನು. ಗ್ರಾಮಾಧಿಕಾರಿಯು ಬೀರಬಲನ ಹೇಳಿಕೆಯಂತೆ ವ್ಯವಸ್ಥೆಮಾ ಡಿದನು ಅವಧಿಯು ಪೂರ್ಣವಾಗಲು, ತುಲನೆಯನ್ನು ಮಾಡಿ ನೋಡಿದನು ಮೊದಲಿನಷ್ಟೇ ಇತ್ತು ಅದನ್ನು ಆಕೂಡಲೆ ದಿಲ್ಲಿಗೆ ಕಳುಹಿಸಿಬಿಟ್ಟನು ಇದ ರಂತೆಯೇ ಪ್ರತಿಯೊಂದು ಗ್ರಾಮದಿಂದ ಕುರಿಗಳುಬಂದು ತಬ್ಬಿದವು ಅವುಗ ಳಲ್ಲಿ ಕೆಲವು ಆನಂದತಿಂದ ಇದ್ದ ಕುರಿಗಳ ತೂಕವು ಹೆಚ್ಚಾಯಿತು ಪರಿಶ್ರಮ ಮಾಡಿದ ಕುರಿಗಳತೂಕವು ಕಡಿಮೆಯಾಯಿತು. ಆದರೆ ಬೀರಬಲನಿದ್ದ ಗ್ರಾ ಮದಕುರಿಯತೂಕವು ಮೊದಲಿನಷ್ಟ ಆಯಿತು ಅದನ್ನು ಕಂಡು ಬಾದಶಹನು