ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೬೩

ಈ ಪುಟವನ್ನು ಪರಿಶೀಲಿಸಲಾಗಿದೆ
೨೯೨
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.

ಎಂದು ಉತ್ತರಕೊಟ್ಟರು. ಬೀರಬಲನು ಅವರೆಲ್ಲರನ್ನೂ ಕರಕೊಂಡು ಮರ ಳಿ ರಾಜಸಭೆಗೆ ಬಂದನು ಇಷ್ಟು ಸಮಯದ ತನಕ ಒಂಟಿಗನಾಗಿ ಕುಳಿತಿದ್ದ ಬಾದಶಹನು ಆ ಜನರೆಲ್ಲರೂ ಮರಳಿಬಂದದ್ದನ್ನು ಕಂಡು ನೀವೆಲ್ಲರೂ ಅಪ್ಸ ರೆಯನ್ನೂ ಆ ದಿವ್ಯಗೃಹವನ್ನೂ ಅವಲೋಕಿಸಿ ಬಂದಿರಷ್ಟೇ ಎಂದು ಕೇಳಿ ದನು ಆಗ ನೂತನಮಂತ್ರಿಯು ಖುದಾವಂದ ! ಬೀರಬಲನು ಹೇಳಿದ್ದರಕಿಂ ತಲೂ ಕಿಂಚಿತ್ ಅಧಿಕವೇ ಹೊರತು ನ್ಯೂನತೆಯಿಲ್ಲ ಅಹಹಾ ! ಅವಳಂಥ ಸುಂದರವದನವು ಈಭೂಲೋಕದಲ್ಲಿ ಕಾಣುವದುದುಸ್ತರವು ಎಂದು ಉತ್ತ ರಕೊಟ್ಟನು. ಮಂತ್ರಿಯು ಮಾಡಿದ ಪ್ರಶಂಸೆಯನ್ನು ಕೇಳಿದಮೇಲಂತೂ ಬಾದಶಹನ ಆನಂದಕ್ಕೆ ಪಾರಾವಾರವೇ ಇಲ್ಲದೆಹೋಗಿ ಬೀರಬಲ್ಲ ! ಅವಳಂ ನು ಇಲ್ಲಿಗೆ ಕರೆದುಕೊಂಡು ಬಾ ' ಎಂದು ಹೇಳಿದನು. ಅದಕ್ಕೆ ಬೀರಬಲನು ಅವಳು ಸ್ವರ್ಗಲೋಕದ ಸುರ ಸುಂದರಿಯು ನನ್ನ೦ಥ ಪಾಮರನ ಆಜ್ಞೆಗೆ ಅವಳು ಎಂದೂ ಬರಲಾರಳು ಆದ್ದರಿಂದ ಪ್ರಭುಗಳು ತಾವೇ ಬಂದು ಕರೆದರೆ ಒಂದುವೇಳೆ ಬಂದರೂ ಬರಬಹುದು; ಎಂದನು. ಬಾದಶ ಹನು ಮಾಂಧನಾದ್ದರಿಂದ ಯಾವದನ್ನೂ ವಿಚಾರಿಸಲಿಲ್ಲ, ಅಮೌ ಲ್ಯಗಳಾದವಸ್ತ್ರಾ ಭರಣಗಳಿಂದ ಭೂಷಿತನಾದನು, ಮತ್ತು ತನ್ನ ವೈಭವವನ್ನು ತೋರಿಸಬೇ ಕೆಂದು ತನ್ನ ಅನುಯಾಯಿಗಳಿಗೂ ಸಿದ್ಧರಾಗಿ ಬರಬೇಕೆಂದು ಅಪ್ಪಣೆಮಾ ಡಿದನು, ಅರ್ಧತಾಸಿನಲ್ಲಿ ಯಾವತ್ತರೂ ಸಿದ್ಧರಾಗಿಬಂದರು ಎಲ್ಲರೂ ಆನಂ ದದಿಂದ ಅಪ್ಸರೆಯನ್ನು ಕರೆತರುವದಕ್ಕೆ ಹೊರಟರು. ಆ ಸಮಯದಲ್ಲಿ ದಿನ ಮಣಿಯು ತನ್ನ ಪ್ರಖರ ಕಿರಣಗಳಿಂದ ಯಾವತ್ತೂ ಧರಣಿಯನ್ನು ತಪ್ಪಿಸಹ ತಿದ್ದನು ಅವನ ಕಿರಣಗಳು ಆ ಕನ್ನಡಿಯಮೇಲೆ ಬಿದ್ದದ್ದರಿಂದ ಅದನ್ನು ಕ ಣ್ಣೆತ್ತಿ ನೋಡಲಿಕ್ಕೆ ಸಹ ಸಾಧ್ಯವಾಗಲಿಲ್ಲ, ಬಾದಶಹನು ಅತ್ಯಾಶ್ಚರ್ಯ ವುಳ್ಳವನಾದನು ಈ ಚಮತ್ಕಾರವನ್ನು ನೋಡಲಿಕ್ಕೆ ನಗರವಾಸಿಗಳೆಲ್ಲರೂ ಏಕತ್ರರಾಗಿ ಕೂಡಿ ಅಲ್ಲಿಗೆ ಬಂದಿದ್ದರು ಯಾವತ್ತೂ ಜನಸಮುದಾಯದೊ ಡನೆ ಗಿರ್ಯಾರೋಹಣಮಾಡಿ ಆ ಸ್ವರ್ಗಭುವನದ ನಿಕಟವನ್ನು ಹೊಂದಲು ಬೀರಬಲನು ಪೃಥ್ವಿನಾಥ ! ಮೇಲೆನೋಡಿರಿ ಈ ಭುವನದ ಏಳನೇ ಭಾಗದ ಮೇಲೆ 7 ವಾಕ್ಷದಲ್ಲಿ ಆಸುರ ರಮಣಿಯು ಮಂಡಿತಳಾಗಿದ್ದಾಳೆ ಅವಳ ಹಿಂದೆ ತಾಂಬೂಲವನ್ನು ಸಿದ್ಧಪಡಿಸಿಕೊಂಡು ಒಡತಿಯ ಮುಖವನ್ನೀಕ್ಷಿಸುತ್ತಾ ನಿಂತುಕೊಂಡವಳೇ ದಾಸಿಯು, ಅಹಹಾ ! ಆ ದಾನಿಯ ಸೌಂದರವನ್ನೆ ಬಣ್ಣಿಸಲಸಾಧ್ಯವು. ತಮ್ಮ ಅಂತಃಪುರದಲ್ಲಿ ಆ ದಾಸಿಯನ್ನು ಸುಂದರರಾಗಿ ದ್ದ ಒಬ್ಬ ಬೇಗಮ್ಮಳಾದರೂ ಇಲ್ಲ ಅಂದಮೇಲೆ ಆ ಅಪ್ಸರೆಯ ರೂಪಸಾದೃ