ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೬೪

ಈ ಪುಟವನ್ನು ಪರಿಶೀಲಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೨೯೩


ವುಳ್ಳವರು ದೊರೆಯುವದಂತೂ ದುರ್ಲಭವೇ ಸರಿ, ಚನ್ನಾಗಿ ಪರಿಕ್ಷಿಸಬೇಕು ಎಂದನು. ಆಗ ಬಾದಶಹನು ಬೀರಬಲ್ಲ ? ಅವಳು ಎಲ್ಲಿದ್ದಾಳೆ ನನಗೆ ಕಾಣಿ ಸುವದೇ ಇಲ್ಲವಲ್ಲಾ ಎಂದನು. ಈ ಮಾತಿಗೆ ಬೀರಬಲನು ಖಾವಂದಾ ? ತ ಮಗೆ ಕಾಣಿಸಲೊಲ್ಲದೇ ? ಬೇಕಾದರೆ ಈ ನೂತನ ಮಂತ್ರಿಯನ್ನೂ ಅನ್ಯ ನಿಯೋಗಿಗಳನ್ನೂ ಈ ವಿಷಯದಲ್ಲಿ ವಿಚಾರಮಾಡಬೇಕು ಅವರು ಪ್ರತ್ಯಕ್ಷ ವಾಗಿ ಕಂಡಿದ್ದಾರೆ ಎಂದು ಹೇಳಿದನು. ಆ ಜನರಂತೂ ಮೊದಲೇ ಮೂ ರ್ಖರಾಗಿ ಹೋಗಿದ್ದರು ಆ ಕೂಡಲೇ ಅವರು ಮುಂದೆಬಂದು ಹುಜೂರ ? ಅವಳು ಮುಂದೆಕಾಣಿಸುವ ಗವಾಕ್ಷದಲ್ಲಿಯೇ ಕುಳಿತುಕೊಂಡಿದ್ದಾಳೆ ತಮ್ಮ ನಯನಗಳಿಗೆ ಇನ್ನೂ ಗೋಚರಿಸಲಿಲ್ಲವೇ ಎಂದರು. ಬಾದ ಶಹನು ಪುನಹ ಮೇಲೆಕೆಳಗೆ ನೋಡಿದನು ಕಾಣಿಸಲಿಲ್ಲ; ಬಾದಶಹನು ಕಿಂಚಿತ್ ವಿಚಾರ ಮಗ್ನನಾದನು. ಅಷ್ಟರಲ್ಲಿ ಬೀರಬಲನು ಪೃಥ್ವಿನಾಥ ? ನಾನು ಒಂದು ಸಂ ಗತಿಯನ್ನು ಹೇಳುವದಕ್ಕೆ ಮರೆತಿದ್ದೆನು. ಅದೇನಂದರೆ, ಸ್ವರ್ಗಲೋಕದ ವಸ್ತ್ರಾಭರಣಗಳು ಮೃತ್ಯುಲೋಕದಜನರಿಗೆ ಪೂರ್ವಜನ್ಮದ ಪುಣ್ಯದಿಂದಲೇ ದೃಗ್ಗೋಚರಿಸುವವು. ಯಾಕಂದರೆ ಈ ಮರ್ತ್ಯಲೋಕದಲ್ಲಿ ವರ್ಣಸಂಕಲಿ ತರಾಗಿ ಜನ್ಮತಾಳಿದವರೇ ಬಹುಜನರು, ಇಂಥಜನರಿಗೆ ಸೃರ್ಗಿಯ ಪದಾ ರ್ಥಗಳು ದೃಗ್ಗೋಚರಿಸಲಾರವು, ತಾವು ಚೆನ್ನಾಗಿಲಕ್ಷ್ಯನಿಟ್ಟು ಪರಿಶೀಲಿಸಿ ನೋಡಬೇಕು ಎಂದು ಪ್ರಾರ್ಥನೆಮಾಡಿದನು. ಆಗ ಬಾದ ಶಹನು ಮನಸ್ಸಿ ನಲ್ಲಿ ಎಲ್ಲ ಜನರಿಗೆ ಸುರಸುಂದರಿಯೂ, ಅವರ ಪರಿಚಾರಿಕೆಯೂ ಕಾಣಿಸು ತಿರಲು ನನಗೆ ಯಾಕೆ ಕಾಣಿಸಲೊಲ್ಲಳು; ನಾನೂ ವರ್ಣಸಾಂಕರ್ಯದಿಂದ ಜನಿಸಿರಬಹುದೇ ನನ್ನ ಜನ್ಮಕ್ಕೆ ಧಿಕ್ಕಾರವಿರಲಿ; ಇಷ್ಟು ಕಾಲ ಈ ಸಂಗತಿ ಯು ಗುಪ್ತವಾಗಿತ್ತು ಈ ಅಪ್ಸರೆಯನಿಮಿತ್ಯದಿಂದ ಅದು ಬಯಲಿಗೆ ಬರುವ ಹಾಗೆ ಕಾಣುತ್ತದೆ. ಈಗ ನಾನು ಈ ಸಂಗತಿಯನ್ನು ಪ್ರಕಟೀಕರಿಸಿದರೆ ನನಗೆ ಲಘುತ್ವವುಂಟಾಗುವದು ಆದ್ದರಿಂದ ನಾನೂ ಈ ಎಲ್ಲಜನರಂತೆ ಒಪ್ಪಿ ಕೊಳ್ಳುವದೇ ಮೇಲು ಎಂದು ಯೋಚಿಸಹತ್ತಿದನು. ಅದನ್ನು ಕಂಡು ಬೀರ ಬಲನು ನೋಡಬೇಕು ಆ ಗವಾಕ್ಷದಲ್ಲಿಯೇ ಮಂಡಿಸಿದ್ದಾಳೆ ಪರಿಶೀಲಿಸಬೇ ಕು ಎಂದು ಪುನಃ ನುಡಿದನು. ಆಗ ಬಾದಶಹನು ನಿರ್ವಾಹವಿಲ್ಲದೆ ಅಹುದಹು ದು; ಎಂದನು. ಆಗ ಬೀರಬಲನು ಬಾದಶಹನನ್ನೂ ಅವನ ಸಂಗಡಿಗರನ್ನೂ ಆ ಮಣಿಮಯ ಭುವನದೊಳಗೆ ನಾಲ್ಕನೇ ಅಂತಸ್ತಿನಲ್ಲಿ ಕರೆದುಕೊಂಡು ಹೋಗಿ ಯೋಗ್ಯತಾನುಸಾರವಾಗಿ ಕುಳ್ಳಿರಿಸಿ, ತ್ರಯೋದಶಗುಣ ತಾಂಬೂಲ ವನ್ನಿತ್ತು ಸತ್ಕರಿಸಿದನು. ಎಲ್ಲ ಜನರಿಗೆ ಪೂಮಾಲೆಯನ್ನು ಹಾಕಿದನು