ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೬೬

ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೨೯೫

ಲ್ಲಿ ಕರೆದುಕೊಂಡು ಹೋಗು ! ಎಂದು ಅಪ್ಪಣಿ ಮಾಡಿದನು ಆಗ ಬೀರಬಲ ನು "ಪೃಥ್ವಿನಾಥ! ಈ ಎಲ್ಲ ಜನರನ್ನು ಕರೆದುಕೊಂಡು ಹೋಗುವದಕ್ಕೆ ಅವಳಸಮ್ಮತಿಯನ್ನು ಪಡೆಯ ಬೇಕಾಗುತ್ತದೆ ತಾವು ಸ್ವಲ್ಪ ಹೊತ್ತು ವಿಕ್ರ ಮಿಸಿರಿ, ” ಎದು ಹೇಳಿ ಆ ಗೃಹದ ಮತ್ತೊಂದುಭಾಗದಲ್ಲಿ ಸ್ವಲ್ಪ ಹೊತ್ತು ವಿಕ್ರ ಮಿಸಿ, ಆಮೇಲೆ ಹೊರಗೆ ಬಂದು, “ ನರವರ ! ಈಗ ತಾವೆಲ್ಲರೂ ಹೋ ಗಿ, ರಾತ್ರಿಯಲ್ಲಿ ದರ್ಶನಕ್ಕೆ ಬರಬೇಕೆಂದು ಅಪ್ಪಣೆ ಮಾಡಿದ್ದಾಳೆ, ಈ ಭೂ ಪ್ರದೇಶವು ಅವಳಿಗೆ ರಮಣೀಯವಾಗಿ ಕಂಡು ಬಂದದ್ದರಿಂದ ಕಿಂಚಿತ್ಕಾಲ ಇಲ್ಲಿಯೇ ವಾಸಮಾಡಬೇಕೆಂಬ ಆಕಾಂಕ್ಷೆ ಯುಳ್ಳವಳಾಗಿದ್ದಾಳೆ, ಇದಲ್ಲದೆ ತಮ್ಮ ಆಶ್ರಯದಲ್ಲಿಯೇ ಇರಬೇಕೆಂಬ ಅಪೇಕ್ಷೆಯನ್ನೂ ತೋರಿಸಿದಳು ಇ ಷ್ಟು ಪರಿವಾರದವರೊಡನೆ ಅವಳ ದರುಶನ ತೆಗೆದುಕೊಳ್ಳುವದೂ ಅನುಚಿತ ವು ಅವಳ ಆಜ್ಞಾ ಭಂಗಮಾಡಿದರೆ ಅವಳಿಗೆ ಕೋಪವು ಬಂದರೂ ಬರಬಹು ದು ಆದ್ದರಿಂದ ಈಗ ಹೋಗುವದೇ ಯೋಗ್ಯವು! ” ಎಂದು ಹೇಳಿದನು ಕಲ್ಪಿ ತ ಅಪ್ಸರೆಯ ದರುಶನೋತ್ಸುಕನಾಗಿ ರಾತ್ರಿಯ ಆ ಮಂತ್ರಣವನ್ನು ಸ್ವೀ ಕರಿಸಿ, ಎಲ್ಲರೂ ಹೊರಡ ಲನುವಾದರು. ಆ ಪರಿವಾರದ ಮುಂದೆ ವಸ್ತ್ರವುಳ್ಳ ಬಾದಶಹನೂ ಬೀರಬಲನೂ ಸಾಗಲು, ಕೌಪೀನಧಾರಿಗಳಾಗಿದ್ದ ಉಳಿದವರೆ ಲ್ಲರೂ ಬೆನ್ನು ಹತ್ತಿದರು ಬೀರಬಲನು ಅವರೆಲ್ಲರನ್ನೂ ಪಟ್ಟಣದ ಯಾವತ್ತು ಭಾಗಗಳಲ್ಲಿ ತಿರುಗಿಸಿಕೊಂಡು ಸಭಾಸ್ಥಾನಕ್ಕೆ ಬಂದನು ಈ ಅತ್ಯದ್ಭುತ ಚಮತ್ಕಾರವನ್ನು ಕಂಡು ನಗರವಾಸಿಗಳೆಲ್ಲರೂ ನಗಹತ್ತಿದರು ಆಗ ಈವಸ್ತ್ರ ಹೀನರಾದ ಪರಿವಾರದವರು ನಗರವಾಸಿಗಳನ್ನು ಕುರಿತು. ನೀವು ನ ಮ್ಮನ್ನು ನೋಡಿ ಹಾಸ್ಯಮಾಡುವಿರಾ ನೀವು ಮೂರ್ಖರು ! ವರ್ಣಸಂಕಲಿತ ರಾಗಿರುವಿರಿ ! ಬೀರಬಲನು ನಮಗೆ ಸ್ವರ್ಗಿಯ ಬಟ್ಟೆ ಗಳನ್ನು ಧಾರಣಮಾ ಡಿಸಿದ್ದಾನೆ, ಈ ವಸ್ತ್ರಗಳು ನಿಮ್ಮಂಥ ವರ್ಣಸಂಕರರಿಗೆ ಕಾಣಿಸುವದಿಲ್ಲ, ಎಂದು ಹೇಳಹತ್ತಿದರು ಈ ಉತ್ಸವವನ್ನು ನೋಡಲಿಕ್ಕೆ ಬಂದವರಲ್ಲೊಬ್ಬ ನು; ನಾವು ಬೀರಬಲನು ಸ್ವರ್ಗಸ್ಥನಾಗಿರುವನೆಂದು ತಿಳಿದಿದ್ದೆವು ಆ ನಾ ರ್ತೆಯು ಅಸತ್ಯವು ಅವನು ಸತ್ಯವಾಗಿಯೂ ಜೀವದಿಂದಿರುವನು ಇದರಲ್ಲಿ ಏನೋ ಕವಡಗಂಟಕತನವದೆ, ಎಂದನು ಆಗ ಮತ್ತೊಬ್ಬನು ಹಾ, ಹಾ! ಸ್ಮರಣೆಗೆ ಬಂತು ಈಗದಶ ಮಾನಗಳ ಪೂರ್ವದಲ್ಲಿ ಬಾದಶಹನು ಒಂದು ಅತ್ಯ ದ್ಭುತ ಚಮತ್ಕಾರವನ್ನು ಮಾಡಿ ತೋರಿಸು ಎಂದು ಬೀರಬಲನಿಗೆ ಆಜ್ಞಾ ಪಿಸಿದ್ದನು. ಇದು ಅವನಕೃತಿಯೇ ಇರಬಹುದು ಎಂದನು ಈ ಎಲ್ಲಸಂಭಾ ಷಣೆಗಳು ಕೌಪೀನದಾರಿಗಳ ಕಿವಿಗಳಿಗೆ ಕೇಳಿಸಿದವು ಆದರೆ ಅವರಿಗೆ ಬೀ