ರಬಲನು ಇಂಥ ವಿಶ್ವಾಸ ಘಾತಕ ನಲ್ಲವೆಂಬ ನಂಬುಗೆಯಿದ್ದದರಿಂದ ತಮ ಗೆ ಸ್ವರ್ಗಿಯ ಬಟ್ಟೆಗಳನ್ನೇ ಕೊಟ್ಟಿದ್ದಾನೆ, ಎಂದು ತಿಳಿದುಕೊಂಡು ಸು ಮ್ಮನಾದರು. ಸಭಾಸ್ಥಾನದಲ್ಲಿ ಎಲ್ಲರೂ ತಮ್ಮ ತಮ್ಮ ಆಸನಗಳನ್ನು ಸ್ವೀ ಕರಿಸಿ ದ ಮೇಲೆ ಬೀರಬಲನು ಮುಂದೆ ಬಂದು, ಅಪರಾಧವನ್ನು ಕ್ಷಮಿ ಸುವೆ ನೆಂದು ಭಾಷೆ ಕೊಟ್ಟರೆ, ಎಲ್ಲ ವೃತ್ತಾಂತವನ್ನು ಕಥನ ಮಾಡು ವೆನು ಎಂದನು ಬಾದಶಹನು “ ಬೀರಬಲ್ಲ; ಹೇಳು ಹೇಳು !! ಏನುಕ ಥನ ಮಾಡತಕ್ಕದ್ದದೆ! ಎಂದು ಕೇಳಿದನು. ಬೀರಬಲನು ಪೃಥ್ವಿನಾಥ! ಈಗ ದಶಮಾನಗಳ ಪೂರ್ವದಲ್ಲಿ ತಾವು ನನಗೆ ಆಜ್ಞಾಪಿಸಿದ್ದನ್ನು ಸ್ಮರಣೆ ಗೆತಂದುಕೊಳ್ಳಬೇಕು. ಆ ಆಜ್ಞಾನು ಸಾರವಾಗಿ ಈ ಚಮತ್ಕಾರವನ್ನು ತೋರಿಸಿದ್ದೇನೆ ತಾವು ಇಂಥ ನನ್ನ ನಭೆಯನ್ನು ಎಂದಾದರೂ ಅವಲೋಕನ ಮಾಡಿದ್ದೀರಾ ! ಇಂಥ ನಗ್ನ ಸಭೆಯು ಹಿಂದೆ ಎಂದೂ ಆಗಿರಲಿಕ್ಕಿಲ್ಲ ಮುಂದೆ ಆಗುವ ಹಾಗೆ ಇಲ್ಲ ಪೃಥ್ವಿನಾಥ ! ಮರಣಹೊಂದಿದವನು ಎಂದಾದರೂ ಮರಳಿ ಬರುವದುಂಟೇ ಸ್ವರ್ಗದಪ್ಸರೆಯು ಭೂಲೋಕಕ್ಕೆ ಬರುವ ನಿಮಿತ್ಯ ವೇನು : ಭೂವರ ! ತಮ್ಮ ಹೊರತು ಇಂಥ ನ ಸಭೆಯನ್ನು ಯಾರೂ ಅವಲೋಕ ಮಾಡಿರುವದಿಲ್ಲ ; ಎಂದು ಪ್ರಾರ್ಥಿಸಿದನು. ಬೀರಬಲನು ಹೇಳಿ ದ ವಾಕ್ಯಗಳನ್ನು ಶ್ರವಣವಾಡಿ ಬಾದಶಹನು ಸಭಾಸದರನ್ನ ಕುರಿತು, ಈಗ ದಶಮಾನಗಳ ಹಿಂದೆ, ನಾನು ಬೀರಬಲನಿಗೆ ಒಂದು ಅತ್ಯದ್ಭುತ ಚ ಮತ್ಕಾರವನ್ನು ತೋರಿಸೆಂದು ಆಜ್ಞಾಪಿಸಿದ್ದು ನಿಜವು ! ನನ್ನ ಅಪ್ಪಣೆಯ ಮೇರೆಗೆ ಇವನು ಕಾರ್ಯವನ್ನು ಮಾಡಿ ತೋರಿಸಿದನು. ಆದ್ದರಿಂದ ಯಾ ರೂ ಬೀರಬಲನ ಮೇಲೆ ಕೋಪಿಸ ಬಾರದು ; ಆದರೆ ಇಷ್ಟು ದೀರ್ಘಪ್ರ ಸಂಗವನ್ನು ತರಬಾರದಾಗಿತ್ತು ! ಉಪಾಯವಿಲ್ಲ ; ಆದ್ದರಿಂದ ಯಾರೂ ಅವನಮೇಲೆ ದೋಷವನ್ನಿ ಡಬಾರದು ಮತ್ತು ಪೂರ್ವದಂತೆ ಸಲಿಗೆಯಿಂದ ವ ರ್ತನೆ ಮಾಡಬೇಕು” ಎಂದು ಆಜ್ಞೆಮಾಡಿದನು. ಬಾದಶಹನ ಅಪ್ಪಣೆಯಿಂ ದ ಹಿಂದೂ ಸಭಾಸದರೆಲ್ಲರೂ ಪ್ರಸನ್ನರಾದರು, ಆದರೆ ಮುಸಲ್ಮಾನರ ಮ ನಸ್ಸಿನಲ್ಲಿ ಸಮಾಧಾನವಾಗಲಿಲ್ಲ; ಅವರು ಮನಸ್ಸಿನಲ್ಲಿಯ ಬೀರಬಲನ ಮೇಲೆ ಹಲ್ಲುಕಡಿಯಹತ್ತಿದರು, ಬೀರಬಲನು ಆ ಸಭಾಸದರ ವಸ್ತ್ರಗಳೆಲ್ಲವನ್ನೂ ಪೂರದಲ್ಲಿಯೇ ತರಿಸಿ ಇಟ್ಟಿದ್ದನು ಅವರವರಿಗೆ ಅವರವರ ವಸ್ತ್ರಗಳನ್ನು ಪರಿಧಾನಮಾಡಿಕೊಳ್ಳುವದಕ್ಕೆ ಇತ್ತನು ಅವರು ತಮ್ಮ ತಮ್ಮ ಬಟ್ಟೆಗಳನ್ನು ಧಾರಣಮಾಡಿಕೊಂಡು ತಮ್ಮತಮ್ಮ ಗೃಹಗಳನ್ನು ಕುರಿತು ತೆರಳಿದರು.
ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೬೭
ಈ ಪುಟವನ್ನು ಪ್ರಕಟಿಸಲಾಗಿದೆ
೨೯೬
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.