ರೂಪಾಯಿಗಳನ್ನು ಬೀರಬಲನ ಸ್ವಾಧೀನಕ್ಕೆ ಕೊಡಬೇಕೆಂದು ಅಪ್ಪಣೆ ಮಾಡಿದನು ಆ ದ್ರವ್ಯದಿಂದ ಜಲಾಭವವಿದ್ದ ಸ್ಥಳಗಳಲ್ಲಿ ನಾಟೀಕೂಪತಟಾ ಕಾದಿಗಳನ್ನು ನಿರ್ಮಿಸಿದನು, ಅನ್ನಸತ್ರವನ್ನಿಡಿಸಿದನು ಅಕಬರಭಾರತ ಗ್ರಂ ಥವು ಮೂಲಿಗೆ ಬಿತ್ತು ಅವಧಿಯು ಪೂರ್ಣವಾಗಲಿಕ್ಕೆ ಸ್ವಲ್ಪೇ ದಿವಸಗಳು ಇರಲು, ಬೀರಬಲನು ಬಾದಶಹನ ಬಳಿಗೆ ಬಂದು ಭಾರಥ ಗ್ರಂಥವು, ಸಮಾ ಪ್ರಿಯಾಗುತ್ತ ಬಂದದೆ ಎಂದು ಹೇಳಿ, ಕಿಂಚಿತ್ಕಾಲ ಮಾತನಾಡುತ್ತ ಕುಳಿ ತುಕೊಂಡು ಆಮೇಲೆ ಮನೆಗೆ ಹೊರಟುಬಂದನು. ಆಮೇಲೆ ಕೆಲವುಬರಿಯದೆ ಇದ್ದ ಕಾಗದಗಳನ್ನು ಗ್ರಂಥಗಳಂತೆ ಆಕಾರಮಾಡಿ ಮೇಲೊಂದು ಕೆಳಗೊಂ ದು ಸಣ್ಣಸಣ್ಣ ಹಲಿಗೆಗಳನ್ನಿಟ್ಟು, ಅದರಮೇಲೆ ರೇಶಿಮೆಯ ವಸ್ತ್ರವನ್ನು ಸುತ್ತಿ ರೇಶಿಮೆಯದಾರದಿಂದ ಬಿಗಿದು ಬಾದಶಹನ ಬಳಿಗೆ ತೆಗೆದುಕೊಂಡು ಬಂದನು. ಅವನ ಕಂಕುಳಲ್ಲಿದ್ದ ಪುಸ್ತಕವನ್ನು ಕಂಡು ಬಾದಶಹನು " ಬೀರ ಬಲ್ಲ ಗ್ರಂಥವು ಪರಿಸಮಾಪ್ತಿಯಾಯಿತೋ ” ಎಂದನು ಬೀರಬಲನು ಪೃಥ್ವಿ ನಾಥ ? ಸಮಾಪ್ತಿಯಾಗಿದೆ ಎಂದು ಉತ್ತರಕೊಟ್ಟು ಗಂಟನ್ನು ಬಿಚ್ಚುತ್ತ ಮತ್ತೆ ನರವರ ? ಗ್ರಂಥವೇನೋ ಸಮಾಪ್ತವಾಗುತ್ತ ಬಂದದೆ ಆದರೆ ಅದ ರಲ್ಲಿ ಒಂದುಮಾತಿನ ವಿಷಯವಾಗಿ ಸ್ವಲ್ಪ ಅಂದೇಶ ವುಂಟಾಗಿದೆ; ಆ ಅಂದೇ ಶವು ಬೇಗಮ್ಮ ಸಾಹೇಬರಿಂದ ದೂರವಾಗುವದು, ಅಪ್ಪಣೆಯಾದರೆ ಅಂತಃ ಪುರಕ್ಕೆ ಹೋಗಿ ವಿಚಾರಮಾಡಿಕೊಂಡು ಬರುತ್ತೇನೆ” ಎಂದನು. ಬೀರಬಲ ನು ದಾರವನ್ನು ಬಿಚ್ಚಹತ್ತಿರಲು, ಬಾದಕಹನ ಮನಸ್ಸಿನಲ್ಲಿ ಸಿದ್ಧವಾಗಿದೆ ಯೋ ಇಲ್ಲವೋ ನೋಡಬೇಕೆಂಬ ಅಂದೇಶವೇ ಉಂಟಾಗಲಿಲ್ಲ; ಕೂಡಲೇ ಅವನು ಬೀರಬಲನನ್ನು ಕುರಿತು " ಪ್ರಥಮದಲ್ಲಿ ಹೋಗಿ ನಿನ್ನ ಅಂದೇಶನಿ ವೃತ್ತಿಯನ್ನು ಮಾಡಿಕೊಂಡೇ ಬಂದು ಆಮೇಲೆ ನನಗೆ ಗ್ರಂಥವನ್ನು ತೋ ರಿಸು ” ಎಂದು ಅಪ್ಪಣೆಮಾಡಲು, ಪುನಃ ಆ ದಾರವನ್ನು ಸುತ್ತಿ ಇಟ್ಟು ಅಂ ತಃಪುರಕ್ಕೆ ಹೋಗಿ “ ಅಕಬರಭಾರತ ” ಗ್ರಂಥದ ಆದ್ಯೋವಾಂತ ವೃತ್ತಾಂತ ತವನ್ನೆಲ್ಲ ಕಥನಮಾಡಿ, “ ಈ ಗ್ರಂಥವು ಪೂರ್ಣವಾಗಲಿಕ್ಕೆ ಬಂದದೆ ಇನ್ನು ಕಿಂಚಿತ್ ಶೇಷವಿರುವದು ಅದು ನಿಮ್ಮ ಉತ್ತರದಿಂದ ಪೂರ್ಣವಾಗತಕ್ಕದ್ದ ದೆ, ಬಾದಶಹನ ಅಪ್ಪಣೆಯಪ್ರಕಾರವಾಗಿ ತಮ್ಮ ಸನ್ನಿಧಿಗೆ ಬಂದಿದ್ದೇನೆ ತಾ ವು ಕೃದ್ಧರಾಗುವದಿಲ್ಲವೆಂದು ಅಭಯವನ್ನಿತ್ತರೆ ಕಥನಮಾಡುವೆನು, ” ಎಂ ದನು. ಆ ಮಾತನ್ನು ಕೇಳಿ ಬೇಗಮ್ಮಳು. “ ನೀನು ಕೇಳತಕ್ಕದ್ದನ್ನು ಸಂ ತೋಷದಿಂದ ಕೇಳು ನಾನು ಕೋಪಗೊಳ್ಳುವದಿಲ್ಲ ” ಎಂದಳು. ಅದಕ್ಕೆ ಬೀ ರಬಲನು" ಪಾಂಡವರ ಭಾರತದಲ್ಲಿ ಪಾಂಚಾಲಿಗೆ ಐದುಜನ ಪತಿಗಳಿದ್ದಂತೆ
ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೬೯
ಈ ಪುಟವನ್ನು ಪ್ರಕಟಿಸಲಾಗಿದೆ
೨೯೮
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.