ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೭೦

ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೨೯೨


ತಮ್ಮ ಐದುಜನ ಪತಿಗಳು ಯಾರು ! ಎಂಬ ಸಂಗತಿಯನ್ನು ಅರುಹಿದರೆ, ಗ್ರಂಥವು ಪೂರ್ಣವಾಗುತ್ತದೆ” ಎಂದನು. ಆ ಕೂಡಲೇ ಬೇಗಮ್ಮಳ ನೇತ್ರ ಗಳು ಆರಕ್ತವರ್ಣವನ್ನು ಧರಿಸಿದವು, ನಖಶಿಖಾಂತವಾಗಿ ಉರಿದದ್ದು ಇಂಥ ನಿಕೃಷ್ಟ ಗ್ರಂಥವನ್ನು ರಚಿಸೆಂದು ಹೇಳಲಿಕ್ಕೆ ಬಾದಶಹನಿಗೂ ಬುದ್ಧಿ ಇಲ್ಲ ರಚಿಸುವದಕ್ಕೆ ನಿನಗೂ ಬುದ್ಧಿಯಿಲ್ಲ, ಈ ಗ್ರಂಥವನ್ನು ಅಗ್ನಿ ಗಾಹುತಿಕೊ ಟ್ಟುಬಿಡು ಎಂದು ಗರ್ಜಿಸಿ, ಒಬ್ಬ ಪರಿಚಾರಿಕೆಯನ್ನು ಕರೆದು ಈ ಗ್ರಂಥವ ನ್ನು ಸುಟ್ಟು ಬೂದಿಮೂಡಿಬಿಡು ಎಂದು ಹೇಳಲು, ಅವಳು ಅಪ್ಪಣೆಯಂತೆ ದಹನ ಮಾಡಿ ಬಿಟ್ಟಳು. ಅದನ್ನು ಕಂಡು ಬೀರಬಲನು ಮನಸ್ಸಿನಲ್ಲಿ ಹರುಷಿತ ನಾಗಿ ಮೇಲೆಮೇಲೆ ದುಃಖಿತನೂ ನಿರಾಶೆಯುಳ್ಳವನೂ ಆದವನಂತೆ ನಟಿಸಿ, ಬಾದಶಹನ ಬಳಿಯಲ್ಲಿ ಬಂದನು. ಬೀರಬಲನ ನಿರುತ್ಸಾಹಯುಕ್ತವಾದ ಮು ಖವನ್ನು ಅವಲೋಕಿಸಿ, ಬೀರಬಲ್ಲ ವಿನಾಯಿತು ? ಎಂದು ಕೇಳಿದನು. ಆಗ ಬೀರಬಲನು. ಪೃಥ್ವಿನಾಥ ; ಬೇಗಮ್ಮ ಸಾಹೇಬಿಯವರು ಒಳ್ಳೇಪತಿವೃತೆ ಯರಿರುವದರಿಂದ ನಾನು ಕೇಳಿದ ಪ್ರಶ್ನೆಗೆ ಕೋಪವುಳ್ಳವರಾಗಿ ಆ ಗ್ರಂಥವ ನ್ನು ಅಗ್ನಿ ಪಾಲು ಮಾಡಿಬಿಟ್ಟರು. ಒಂದು ಕಾಲು ಲಕ್ಷರೂಪಾಯಿಗಳು ನೀರಿನಲ್ಲಿ ಹೋದಂತಾದವು ಏನುಮಾಡಲಿ, ನನ್ನ ಕಡೆಗೆ ಯಾವದೋಷವೂ ಇಲ್ಲ; ದ್ರೌಪದಿಗೆ ಐದುಜನ ಪತಿಗಳಿದಂತೆ, ತಮ್ಮ ಬೇಗಮ್ಮ ಸಾಹೇಬಿಯ ವರಿಗಾದರೂ ಐದುಜನ ಪತಿಗಳನ್ನು ತೋರಿಸಿಕೊಟ್ಟು ಪುನಃ ಒಂದೂಕಾ ಲು ಲಕ್ಷರೂಪಾಯಿಗಳನ್ನು ಕೊಟ್ಟರೆ ಪುನರಸಿ ರಚನೆಮಾಡಲುದ್ಯುಕ್ತನಾ ಗುತ್ತೇನೆ ಎಂದನು. ಆಗ ಬಾದಶಹನು ಸ್ವಲ್ಪ ಹೊತ್ತು ಯೋಚಿಸಿ, “ ಬೀರ ಬಲ್ಲ ಗ್ರಂಥಸಮಾಪ್ತಿಯ ಕಾಲಕ್ಕೆ ಈಪ್ರಕಾರ ವಿಘ್ನವು ಬಂದೊದಗಿದರಿಂದ ನನ್ನ ಉತ್ಸಾಹವಲ್ಲ ಕುಗ್ಗಿ ಹೋಯಿತು, ಇನ್ನು ಎರಡನೇ ಸಾರೆ ಬರೆಯುವ ಅವಶ್ಯಕತೆಯು ಇಲ್ಲ ” ಎಂದನು.

- (೧೬೬. ಬೀರಬಲನು ಸ್ವಧರ್ಮವನ್ನು ರಕ್ಷಿಸಿಕೊಂಡದ್ದು.)-


ಮಸಲ್ಮಾನ ಬಾದಶಹನ ಆಳಿಕೆಯಲ್ಲಿ, ಶ್ರೇಷ್ಟವಾದ ಅಮಾತ್ಯಪದ ವಿಯಲ್ಲಿ ಹಿಂದೂ ಮನುಷ್ಯನಿರುವದು, ತಮಗೆ ಅವಮಾನಕರ ವಾದದ್ದೆಂದು ಬಗೆದು, ಬೀರಬಲನ ಪ್ರತಿಯನ್ನು ಕಡಿಮೆಮಾಡಿ ಬಿಡಬೇಕೆಂದು ಮು ಸಲ್ಮಾನ ಮುತ್ಸದ್ದಿಗಳೆಲ್ಲರೂ, ಅನೇಕಸಾರೆ ಪ್ರಯತ್ನಗಳನ್ನು ಮಾಡಿದ್ದರು ಮತ್ತು ಮಾಡುತ್ತಿದ್ದರು ಈ ಸಂಗತಿಯು ಬಾದಶಹನಿಗೂ ವಿದಿತವಾಗಿತ್ತು ಅದರಿಂದ ಅವನು ಯಾವಾಗಲೂ, ಬೀರಬಲನು ಹಿಂದು ವಾದ್ದರಿಂದ. ಮು ಸಲ್ಮಾನರು ಅವನನ್ನು ಪರಿಪರಿಯಿಂದ ಪೀಡಿಸುವರು. ಅದರಿಂದ ಅವನಿಗೆ