ಬಾದಶಹನ ಮನಸ್ಸಿನಲ್ಲಿ ಉತ್ಪನ್ನವಾಯಿತು ಆದರೆ ಆಪ್ರಶ್ನೆಗೆ ಉತ್ತರವನ್ನು ಕೊಡುವವರು ಯಾರು? ಬೀರಬಲನಾಗಲೀ, ಅನ್ಯಮುತ್ಸದ್ಧಿಗಳಾಗಲಿ ಯಾರೂ ಇದ್ದಿಲ್ಲ ಯಾರಿಗೆ ಕೇಳಬೇಕು! ಆಕಾಂಕ್ಷೆಯು ಬಲವತ್ತರವಾಗಹತ್ತಿತು ಆಗ ಒಬ್ಬ ಗೃಹರಕ್ಷಕನನ್ನು ಕರೆದು ಅಯ್ಯಾ ! ನಾಸಿರುದ್ದೀನ ನದಿಯು ಯಾಕೆ ರೋದನೆ ಮಾಡುತ್ತಿರುವದು ! ಎಂದು ಕೇಳಿದನು ಅಪ್ರಗಲ್ಭನಾದ ನಾಸಿರುದ್ದೀನನು ಏನೆಂದು ಉತ್ತರವನ್ನು ಕೊಡಬೇಕು ? ಸುಮ್ಮನೆ ನಿಂತುಕೊಂಡುಬಿಟ್ಟನು ಆಗ ಬಾದಶಹನು ಅನೇಕ ಜನಗಳಿಗೆ ಇದೇ ಪ್ರಶ್ನೆಯನ್ನು ಮಾಡಿದನು ಒಬ್ಬನಾದರೂ ಒಂದು ತುಟಿಯನ್ನು ಎರಡು ಮಾಡಲಿಲ್ಲ ಕಡೆಗೆ ಬಾದಶಹನು ಬೀರಬಲನನ್ನು ಕರೆದುಕೊಂಡು ಬರ್ರಿ! ಎಂದು ಆಜ್ಞಾಪಿಸಿದನು. ಆ ಸಮಯದಲ್ಲಿ ಬೀರಬಲನು ನಿದ್ರಾವಶನಾಗಿದ್ದನು, ಸೇವಕನು ಹೋಗಿ ದ್ವಾರದಲ್ಲಿ ನಿಂತುಕೊಂಡು ಕೂಗ ಹತ್ತಿದ್ದನು ಅದನ್ನು ಕೇಳಿ ಬೀರಬಲನ ಪತ್ನಿಯು ಎಚ್ಚತ್ತು ಪತಿಯನ್ನು ಎಬ್ಬಿಸಿದಳು. ಆ ಸಮಯದಲ್ಲಿ ಪರ್ಜನ್ಯವು ಮುಸಲಧಾರೆಯಾಗಿ ಸುರಿಯುತ್ತಿತ್ತು. ಹೊರಗೆ ಕಾಲಿಡಲು ಸಾಧ್ಯವಿಲ್ಲ; ಸ್ವಾಮಿಯ ಆಜ್ಞಾನುವರ್ತಿಯಾಗಿ ಉಪಾಯವಿಲ್ಲದೆ ಹೊರಬಿದ್ದನು. ಮೈಮೇಲಿನ ಬಟ್ಟೆಗಳೆಲ್ಲ ನೆನೆದು ಹೋದವು ಮಾರ್ಗಪ್ರತೀಕ್ಷಿಸುತ್ತ ಕುಳಿತಿದ್ದ ಬಾದಶಹನ ಸಮ್ಮುಖದಲ್ಲಿ ಹೋಗಿ ನಿಂತುಕೊಂಡನು. ಆ ಕೂಡಲೆ ಬಾದಶಹನು. "ಬೀರಬಲ್ಲ ; ಈ ದಿವಸ ನಾನು ಗಾಢವಾದ ನಿದ್ರಾಸಕ್ತನಾಗಿರಲು, ಒಮ್ಮಿಂದೊಮ್ಮೆ ಎಚ್ಚರವಾಯಿತು, ನದಿಯು ರೋಧಿಸುತ್ತಿರುವ ಶಬ್ದವು ಕಿವಿಗೆ ಬಿತ್ತು ಇನ್ನೂ ಆ ಶಬ್ದವು ಕೇಳಿಸುತ್ತಿರುವದು ನೋಡು ! ಈ ವಿಷಯವಾಗಿ ನಾನು ಅನೇಕರನ್ನು ಪ್ರಶ್ನೆ ಮಾಡಿದೆನು. ಒಬ್ಬನಿಂದಲೂ ಸಮಾಧಾನಕರವಾದ ಉತ್ತರವು ದೊರೆಯಲಿಲ್ಲ ; ನಿರುವಾಯವಾಗಿ ನಿನ್ನನ್ನು ಕರೆಯಿಸುವ ಪ್ರಸಂಗವು ಬಂತು ಒಳ್ಳೆದು: "ನದಿಯು ಈ ಪರಿ ಶೋಕಿಸುವದಕ್ಕೆ ಕಾರಣವೇನು ಎಂದು ಕೇಳಿದನು, ಆಗ ಬೀರಬಲನು ಮನಸ್ಸಿನಲ್ಲಿ "ನದಿಯ ಪ್ರವಾಹದ ರಭಸವು ಕೇಳಿಬಂದದ್ದರಿಂದ ಒಮ್ಮಿಂದೊಮ್ಮೆ ಎಚ್ಚತ್ತು ಈ ಪ್ರಶ್ನೆಯನ್ನು ಹುಡುಕಿತೆಗೆದಿರಬಹುದು ! ಇದಕ್ಕೆ ಸರಿಯಾಗಿ ಪ್ರತ್ಯುತ್ತರವನಿತ್ತರೇ ಮನಸ್ಸು ಶಾಂತ ವಾಗುತ್ತದೆ ;” ಎಂದು ಯೋಚಿಸಿ, ಆ ಮೇಲೆ ಮಾನ್ಯವರ ? ಯಮುನೆಯು ತನ್ನ ಪಿತನಾದ ಹಿಮಾಚಲವನ್ನು ತ್ಯಾಗಮಾಡಿ, ಪತಿಯಾದ ಸಮುದ್ರ ರಾಜನೆಡೆಗೆ ಹೋಗಹತ್ತಿದ್ದಾಳೆ. ಅದರಿಂದ ಪಿತನ ವಿಯೋಗ ದುಃಖವನ್ನು ಸಹಿಸಲಾರದೆ ರೋದನ ಮಾಡಹತ್ತಿದ್ದಾಳೆ ಎಂದು ಉತ್ತರ
ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೭೪
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೩೦೩