ಕೊಟ್ಟನು ಅದನ್ನು ಕೇಳಿ ಬಾದಶಹನು ಹಾ, ಹಾ! ತಿಳಿಯಿತು, ತಿಳಿಯಿತು, ಎಂದು ತಲೆದೂಗಿದನು,
-( ೧೬೯, ಏನು ನಡೆಯುತ್ತಿರುವದು !) -
ಒಂದು ದಿವಸ ಬಾದಶಹನು ರಾಜಕಾರ್ಯಗಳಿಂದ ನಿವೃತ್ತನಾಗಿ, ಆ ಮೇಲೆ "ಬೀರಬಲ್ಲ ' ಈ ಸಮಯದಲ್ಲಿ ಏನು ನಡೆಯುತ್ತಿರುವದು ! ಎಂದು ಕೇಳಿದನು. ಆ ಕೂಡಲೆ ಬೀರಬಲನು, ಮಹಾರಾಜ ಸಾವುಕಾರರ ಚುಂಗಡಿಯು ನಡೆಯುತ್ತಿರುವದು. ಯಾಕಂದರೆ ಅದಕ್ಕೆ ಅಹರ್ನಿಕ ನಿದ್ರೆಯೇ ಇಲ್ಲ, ಎಂದು ಉತ್ತರಕೊಟ್ಟನು. ಈ ಉತ್ತರದಿಂದ ಬಾದಶಹನ ಮನಸ್ಸು ಪ್ರಸನ್ನವಾಯಿತು.
- (೧೭೦. ಕಲ್ಲು ಸಕ್ಕರೆಯ ಹರಳಿನ ರತ್ನ,)-
ಒಂದು ದಿವಸ ರಾತ್ರಿಯಲ್ಲಿ ಬೀರಬಲನು ನಗರ ಸಂಚಾರಾರ್ಥವಾಗಿ ಹೊರಟಿದ್ದನು. ಮಾರ್ಗದಲ್ಲಿ ಅವನಿಗೆ ರೋಧನ ಧ್ವನಿಯು ಕೇಳಿಬಂತು ಬೀರಬಲನು ಆ ಗೃಹದದ್ವಾರದಲ್ಲಿ ಹೋಗಿ ನಿಂತುಕೊಂಡನು. ಶಬ್ಬವು ನಿಂತು ಹೋಯಿತು ಬೀರಬಲನು ದ್ವಾರವನ್ನು ಹಸ್ತಾಂಗುಲಿಯಿಂದ ಬಾರಿಸಿದನು. ಆಗ ಅರವತ್ತು ವರುಷದ ಒಬ್ಬ ವೃದ್ಧನು ಬಂದು ಬಾಗಿಲವನ್ನು ತೆರೆದನು. ಗೃಹವೆಲ್ಲ ಅಂಧಕಾರಮಯವಾಗಿತ್ತು ಆ ವೃದ್ಧನಿಗೆ ಬೀರಬಲನ ಪರಿಚಯವು ಹತ್ತಲಿಲ್ಲ ಆಗ ಬೀರಬಲನು " ಇಲ್ಲಿ ಇದೇ ಈಗ ಯಾರು ರೋಧಿಸುತ್ತಿದ್ದರು ! ” ” ಎಂದು ಕೇಳಿದನು. ಈ ಮಾತಿಗೆ ವೃದ್ಧನು- ಅಯ್ಯಾ ! ಶೋಕಿಸುತ್ತಿದ್ದವನು ನಾನೇ ಆ ಸಂಗತಿಯನ್ನು ನಿನ್ನ ಮುಂದೆ ಪ್ರಕಟೀಕರಿಸುವದರಿಂದ ಪ್ರಯೋಜನವೇನು ದಯಮಾಡಿ ಆ ವಿಷಯದಲ್ಲಿ ನನಗೆ ಪ್ರಶ್ನೆ ಮಾಡಬೇಡ, ನನ್ನ ದುಃಖವೇ ನನಗೆ ಅಧಿಕವಾಗಿದೆ ? ” ಎಂದನು. ಆಗ ಪುನಃ ಬೀರಬಲನು ವೃದ್ಧನೇ ! ನನ್ನ ಮುಂದೆ ತಿಳಿಸು ! ತಕ್ಕ ಸಹಾಯವನ್ನು ಮಾಡುತ್ತೇನೆ ಎಂದು ಹೇಳಿದನು. ಆಗ ಆ ವೃದ್ಧನು, ಅಯ್ಯಾ ? ರಾತ್ರಿ ಯು ಅಂಧಕಾರವಾಗಿದೆ ಇದರಿಂದ ನಿನ್ನ ಪರಿಚಯವು ನನಗೆ ಹತ್ತಲೊಲ್ಲದು ಮನೆಯಲ್ಲಿ ತೈಲಾಭಾವವಾದ್ದರಿಂದ ದೀಪವನ್ನು ಸಹ ಹಚ್ಚಲಿಕ್ಕೆ ಬರುವ ಹಾಗಿಲ್ಲ ಆದ್ದರಿಂದ ನಿನ್ನ ನಾಮಧೇಯವನ್ನಾದರೂ ಹೇಳಿದರೆ, ನೆಟ್ಟಗಾಗುವದು ಎಂದನು ಆಗ ಬೀರಬಲನು ರಾತ್ರಿಯು ಅರ್ಧ ಕಳೆದು ಹೋಗಿದೆ ನಿದ್ರೆಯು ನನ್ನನ್ನು ಬಹಳವಾಗಿ ಪೀಡಿಸಹತ್ತಿದೆ ಆದ್ದರಿಂದ ಪ್ರಾತಃಕಾಲದಲ್ಲಿ ಈ ವೃದ್ಧನನ್ನು ಕರೆಯಿಸಿಕೊಂಡು ವಿಚಾರಮಾಡಿದರಾಯಿತು ! ಎಂದು ಯೋಚಿಸಿ "ವೃದ್ಧನೇ ! ಈಗ ರಾತ್ರಿಯು ಬಹಳವಾಗಿದೆ ನೀನುಶೋ