ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೯

ಈ ಪುಟವನ್ನು ಪ್ರಕಟಿಸಲಾಗಿದೆ
ಪೂರ್ವಜನ್ಮದ ವೃತ್ತಾಂತ


ಕುಲದವರು ಕೇವಲ ಹಾಸ್ಯಗಾರರೂ, ಪರರ ಮನಸ್ಸನ್ನು ಒಲಿಸಿಕೊಳ್ಳುವ ದರಲ್ಲಿ ಕುಶಲರೂ ಇರುವರು, ಅದರಂತೆಯೇ ಈ ಬೀರಬಲನಲ್ಲಿ ಮೇಲೆಹೇ ಳಿದ ಗುಣಗಳು ಇದ್ದದರಿಂದ ಅವರು ತಮ್ಮ ಕುಲದವನೆಂದು ಹೇಳುತ್ತಿರಬ ಹುದು. ಈ ವಿಷಯದಲ್ಲಿ ಇನ್ನೊಂದು ಅಖ್ಯಾಯಿಕೆಯುಂಟು ಅದೇನಂದರೆ- ( ಬೀರಬಲನು ( ಈ ಜಗತ್ತಿನಲ್ಲಿ ಪ್ರಸಿದ್ಧನಾಗುವ ಪೂರ್ವದಲ್ಲಿ ತನ್ನ ಕವಿ ತದಿಂದಲೂ, ಗಾಯನದಿಂದಲೂ ದುರ್ಗಾದೇವಿಯನ್ನು ಒಲಿಸಿಕೊಂಡು, “ ನೀನು ಆರಂಭದಲ್ಲಿ ಯಾವ ವ್ಯಾವಾರವನ್ನು ಮಾಡುವಿಯೋ ಅದರಲ್ಲಿ ನಿನಗೆ ಅಧಿಕಲಾಭವಾಗುವದು ” ಎಂಬ ವಾಗ್ದಾನವನ್ನು ಹೊಂದಿದ್ದನಂತೆ ಅದರಂತೆ ಅವನು ಉಪ್ಪನ್ನು ತುಂಬಿಕೊಂಡು ಬಂದು ಹೊಲೆಯನಿಗೆ ಮಾರ ಲಿಕ್ಕೆ ಕೊಟ್ಟನು, ಅದನ್ನು ಕಂಡು ದೇವಿಯು ಪುನಃ ವರವನ್ನು ಕೊಟ್ಟಳು ಏನಂದರೆ, “ ನಿನಗೆ ಇನ್ನು ಮುಂದೆ ಹಾಸ್ಯದಿಂದಲೇ ವಿಶೇವಲಾಭವುಂಟಾ ಗುವದು? ಆಕಾಲದಿಂದ ಇವನಲ್ಲಿ ಚಾತುರವು ಹೆಚ್ಚಾಯಿತು ಎಂಬದಂಥ ಕಥೆಯೂ ಉಂಟು.

ಮಾರವಾಡ ದೇಶದಲ್ಲಿ ಬೀರಬಲನು "ಮಕರ ”ವೆಂಬ ಗ್ರಾಮದಲ್ಲಿ ಜನ್ಮತಾಳಿದವನೆಂದು ಹೇಳುತ್ತಾರೆ, ಆ ಗ್ರಾಮದಲ್ಲಿ ಇದ್ದ ಸಂಗಮರವರೀ ಕಲ್ಲಿನ ಖಣಿಯನ್ನು ಸಾಂಬರವೆಂಬ ಊರಿನಲ್ಲಿದ್ದ ಒಬ್ಬ ವೈದ್ಯನಿಗೆ ಗೊತ್ತು ಹಚ್ಚಿಕೊಟ್ಟನೆಂತಲೂ ಆ ಖಣಿಯೊಳಗಿನ ಕಲ್ಲಿನಿಂದಲೇ ಬಾದಶಹನ ಅರ ಮನೆಯು ಕಟ್ಟಲ್ಪಟ್ಟಿತೆಂತಲೂ, ಈ ಕಾರಣದಿಂದಲೇ ಬಾದಶಹನವರೆಗೆ ಇವನ ಹೆಸರು ಹೋಯಿತೆಂತಲೂ ಒಂದು ಆಖ್ಯಾಯಿಕೆಯುಂಟು.

ಜಯಪುರ ಪ್ರಾಂತದವರು ಬೀರಬಲನ ಜನ್ಮವು ಅಜಮೀರದ ಹತ್ತಿರ ಒಂದು ಸಂಣ ಜನವಸತಿಯಲ್ಲಿ ಹುಟ್ಟಿದನೆಂತಲೂ ಹೇಳುತ್ತಾರೆ; ಇವನು ಬಾದಕಹನ ಆಶ್ರಯವನ್ನು ಹೊಂದಲಿಕ್ಕೆ ಈ ಕಳಗೆ ಹೇಳಿದ ಕಾರಣವೇ ಉಂಟಾಯಿತೆಂತಲೂ ವರ್ಣನೆಮಾಡಿದ್ದಾರೆ. ಆ ಕಾರಣವು ಯಾವದೆಂದರೆ- ( ಬೀರಬಲನ ಮಾತಾಪಿತೃಗಳು ಕೇವಲ ದರಿದ್ರರಾಗಿದ್ದು, ಒಂದು ಗುಡ್ಡದ ಓರೆಯಲ್ಲಿ ಕುಟೀರವನ್ನು ಕಟ್ಟಿಕೊಂಡು ಇದ್ದರಂತೆ, ಬೀರಬಲನು ಚಿಕ್ಕವ ನಿದ್ದಾಗ್ಗೆ ಗುಡ್ಡದಮೇಲೆ ಹೋಗಿ ಉರುವಲಗಳನ್ನು ತರುತ್ತಿದ್ದನಂತೆ, ಒಂ ದಾನೊಂದು ದಿನ ಅವನು ಉರುವಲಗಳನ್ನು ತರುವದಕ್ಕೆ ತನ್ನ ಗೃಹದ ಹಿಂ ಭಾಗದಲ್ಲಿದ್ದ ಗುಡ್ಡದಮೇಲೆ ಹೋಗಿ ಕಟ್ಟಿಗೆಗಳನ್ನು ಕೂಡ ಹಾಕಿದನು. ಅವುಗಳನ್ನು ಕಟ್ಟಲಿಕ್ಕೆ ಹಗ್ಗವನ್ನು ತೆಗೆದುಕೊಂಡು ಹೋಗಿದ್ದಿಲ್ಲ, ಆಗ ಅವನು ತನ್ನ ತಾಯಿಯನ್ನು ಕೂಗಿ “ ನಾನು ಹಗ್ಗವನ್ನು ಮನೆಯಲ್ಲಿ ಮ