ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೦

ಈ ಪುಟವನ್ನು ಪ್ರಕಟಿಸಲಾಗಿದೆ
ಪೂರ್ವಜನ್ಮದ ವೃತ್ತಾಂತ,



ರೆತುಬಂದಿದ್ದೇನೆ ಅದನ್ನು ಕಳುಹಿಕೊಡು ” ಎಂದು ಹೇಳಿದನು. ಅದಕ್ಕೆ ಅವನತಾಯಿಯು " ಹಗ್ಗವು ಮನೆಯಲ್ಲಿಯೇ ಅದೆ, ಆದರೆ ಅದನ್ನು ಯಾರ ಸಂಗಡ ಕಳುಹಿಕೊಡಲಿ ” ಎಂದು ಪ್ರಶ್ನೆ ಮಾಡಿದಳು. ಅದಕ್ಕೆ ಬೀರಬಲನು “ ನಾಯಿಯ ಕೊರಳಿಗೆ ಕಟ್ಟಿ ಕಳುಹಿಕೊಡು ಎಂದು ಹೇಳಿದನು. ಅದ ರಂತೆ ನಾಯಿಯ ಕೊರಳಿಗೆ ಹಗ್ಗವನ್ನು ಕಟ್ಟಲು, ಆ ನಾಯಿಯನ್ನು ತನ್ನ ಹತ್ತಿರ ಬರುವಂತೆ ಕೂಗಲು ಅದು ಅವನ ಬಳಿಯಲ್ಲಿ ಹೋಯಿತು. ಕೂಡಲೆ ಆ ಹಗ್ಗದಿಂದ ಕಟ್ಟಿಗೆಗಳನ್ನು ಕಟ್ಟಿಕೊಂಡು ಕೆಳಗೆ ಇಳಿಯುತ್ತಿದ್ದನಂತೆ, ಆ ಸಮಯದಲ್ಲಿ ಬೇಟೆಯಾಡುತ್ತ ಬಂದಿದ್ದ ಅಕಬರನ ಕಿವಿಗೆ ಅವನಚಾತುರ್ಯ ಯುಕ್ತ ಭಾಷಣವು ಕೇಳಲು, ಅವನು ಹಾಗೇ ಅವನ ಕುಟೀರದೆಡೆಗೆ ಹೋದನು ಅಷ್ಟರಲ್ಲಿ ಮಾರ್ಗದಲ್ಲಿದ್ದ ಪ್ರವಾಹದ ಸಂಗಡ ವೇಗವಾಗಿ ಬರು ತ್ತಿದ್ದ ಬೀರಬಲ್ಲನನ್ನು ಕಂಡು ಅವನಿಗೆ ಅತ್ಯಾನಂದವಾಯಿತು. ಅವನು ಬಂದು ಕಟ್ಟಿಗೆಯ ಹೊರೆಯನ್ನು ಇಳಿಸಿ ನಿಂತುಕೊಳ್ಳಲು, ಬಾದಶಹನು ಅವನ ಸಮೀಪಕ್ಕೆ ಹೋಗಿ ಆನಂದದಿಂದ ಅವನ ಬೆನ್ನು ಚಪ್ಪರಿಸಿದನು. ಮತ್ತು ಇನ್ನೊಂದು ಸಾರೆ ಈ ಪ್ರವಾಹವನ್ನು ದಾಟಿ ಹೋಗು ಎಂದು ಆಪ್ಪಣೆಮಾಡಿದನು. ಆಗ ಬೀರಬಲನಿಗೆ ಮೊದಲಿನಕಿಂತಲೂ ಹೆಚ್ಚು ಹೊತ್ತು ಬೇಕಾಯಿತು ಅದಕ್ಕೆ ಬಾದಶಹನು ಪುನಃ ಪ್ರಶ್ನೆ ಮಾಡಿದನು. ಏನಂದರೆ- "ಎಲೈ ಬಾಲಕನೇ ! ನೀನು ಮೊದಲು ಬರುವಾಗ್ಗೆ ಶೀಘ್ರವಾಗಿ ಬಂದಿದ್ದಿ? ಈಗ ಪುನಃ ಪ್ರವಾಹವನ್ನು ದಾಟಲೆಕ್ಕ ಇಷ್ಟು ವೇಳೆಯು ಯಾಕ ಹತ್ತಿತು? ಎಂದು ಪ್ರಶ್ನೆ ಮಾಡಲು. ಬೀರಬಲನು ತಕ್ಷಣಕ್ಕೆ ಪ್ರಾರ್ಥಿಸಿದ್ದೇನಂದರೆ‍- "ಪೃಥ್ವೀನಾಥ ನಾನು ಮೊದಲುಬರುವಾಗ್ಗೆ ನನ್ನ ಶರೀರವು ಹಗುರಾಗಿತ್ತು ಆದರೆ ಹಿಂದಿರುಗಿ ಹೋಗುವ ಕಾಲದಲ್ಲಿ ತಮ್ಮ ಕೃಪಾಭಾರವು ನನ್ನ ಮೇಲೆ ಬಹಳವಾಯಿತು, ಅದರಿಂದ ನನಗೆ ಪ್ರವಾಹವನ್ನು ದಾಟುವದಕ್ಕೆ ಬಹಳ ಹೊತ್ತು ಹಿಡಿಯಿತು” ಎಂದು ಉತ್ತರಕೊಟ್ಟನು. ಆಗ ಬಾದಶಹನು ತನ್ನ ಮನಸ್ಸಿನಲ್ಲಿ ಅನ್ನುತ್ತಾನೆ;. " ಈ ಹುಡುಗನು ಕೇವಲ ಅಕೃತನಾಗಿದ್ದರೂ ಸಮಯೋಚಿತವಾದ ಉತ್ತರವನ್ನು ಹೇಳುವದರಲ್ಲಿ ಚತುರನಿದ್ದಾನೆ ” ಎಂ ದು ತಿಳಿದುಕೊಂಡು ಬೀರಬಲನ ಮಾತಾಪಿತೃಗಳ ಸಮ್ಮತಿಯನ್ನು ಪಡೆದು ತನ್ನ ಸಂಗಡಲೇ ಕರೆದುಕೊಂಡು ಹೋದನು.

ಮತ್ತೂ ಕೆಲವರು ಈ ಪ್ರಕಾರ ಹೇಳುತ್ತಾರೆ "ಇವನು ದಿಲ್ಲಿಯಲ್ಲಿ ಯಲ್ಲಿಯೇ ಇದ್ದ ಒಬ್ಬ ಬ್ರಾಹ್ಮಣ ಪುತ್ರನು, ಬೀರಬಲನು ಚಿಕ್ಕವನಿದ್ದ ಕಾ ಲದಲ್ಲಿ ಒಂದುದಿನ ಪಾಠಶಾಲೆಗೆ ಹೋಗಿ, ವಿದ್ಯೆಯನ್ನು ಕಲಿತು ಹಿಂದಿರುಗಿ