ಸ ಪ್ರಾತಃಕಾಲದಲ್ಲಿ ಅಕಸ್ಮಾತ್ತಾಗಿ ಬಂದುಬಿಟ್ಟಿದ್ದಾರೆ ನನಗೆ ಅವರ ದ
ರುಶನವಾಯಿತು ನಾನು ನಿಮ್ಮ ಸಂಗತಿಯನ್ನು ಅರುಹಲು, ಅವರು ಸಂ
ತೋಷದಿಂದ ಒಪ್ಪಿಕೊಂಡಿದ್ದಾರೆ ಬೇಕಾದಾಗ ತಾವು ದರುಶನಕ್ಕೆ ಹೋಗ
ಬಹುದು ಆದರೆ ನಿಮ್ಮ ಸಂಗಡ ನನಗೆ ಮಾತ್ರ ಬರಬೇಡವೆಂದು ಅಪ್ಪಣೆಮಾ ಆಜ್ನೋಲ್ಲಂಘನ
ಡಿದ್ದಾರೆ ನಾನು ಅವರ ಆಜ್ನೋಲ್ಲಂಘನ ಮಾಡಿ ಒಂದುವೇಳೆ ನಿಮ್ಮೊಡನೆ ಬಂ
ದರೆ ಶಾಪವನ್ನು ಕೊಟ್ಟಾರು ಎಂದು ನಿವೇದನ ಮಾಡಿದನು, ಅದಕ್ಕೆ
ಬಾದಶಹನು - ಒಳ್ಳೇದು; ಹಾಗೇ ಆಗಲಿ ! ಅವರು ಎಲ್ಲಿ ವಾಸಮಾಡಿದ್ದಾ
ರೆ ? ಎಂದು ಕೇಳಿದನು ಆಕೂಡಲೆ ಬೀರಬಲನು ಪ್ರತ್ಯುತ್ತರವಾಗಿ - ಗುರು
ಗಳು ನನ್ನ ಗೃಹದಿಂದ ಕಿಂಚಿತ್ ಅಂತರದಮೇಲೆ ಇರುವ ಮಾರುತಿಯ ದೇ
ವಾಲಯದಲ್ಲಿ ಇಳಿದು ಕೊಂಡಿದ್ದಾರೆ ಬೇಕಾದರೆ ತಾವು ಹೋಗಿ ದರುಶನ ತೆ
ಗೆದುಕೊಂಡು ಬರಬೇಕು. ಎಂದು ವಿಜ್ಞಾಪನೆ ಮಾಡಿಕೊಂಡನು.
ಆ ಮೇಲೆ ಬಾದಶಹನು ತನ್ನ ಸಂಗಡ ಅನೇಕಜನ ಪತ್ರಿತ ಸರ
ದಾರರನ್ನು ಕರೆದುಕೊಂಡು, ಮಾರುತಿಯ ದೇವಾಲಯಕ್ಕೆ ಹೋದನು.
ಅಲ್ಲಿ ಭಸ್ಮೋದ್ದೂಳಿತ ಗಾತ್ರನಾದ ಒಬ್ಬ ಬೈರಾಗಿಯು ಕಣ್ಣು ಮುಚ್ಚಿ
ಕೊಂಡು ಜಪಮಾತಿಯನ್ನು ತಿರುಗಿಸುತ್ತ ಧ್ಯಾನಸ್ಥನಾಗಿ ಕುಳಿತು ಕೊಂ
ಡಿದ್ದನು. ಬಾದಶಹನು ತನ್ನ ಅನುಯಾಯಿಗಳೊಡನೆ ಪ್ರಣಾಮ ಮಾಡಿದ
ನು. ಕಣ್ದೆರೆದು ನೋಡಲಿಲ್ಲ ಬಾದಶಹನು ಅವನ ಮುಂದೆ ಕುಳಿತುಕೊಂಡು
ಸ್ತುತಿಸ ಹತ್ತಿದನು. ಆದರೂ ಮಾತನಾಡಲಿಲ್ಲ ಕಡೆಗೆ ಬಾದಶಹನು ಮ
ಹಾರಾಜ ! ಗುರುವರ್ಯರೇ ತಾವು ವಾಸಮಾಡುತ್ತಿರುವ ಸ್ಥಳವ್ಯಾವದು ?
ತಮ್ಮ ನಾಮಧೇಯವೇನು ! ಕೃಪೆಮಾಡಿ ತಿಳಿಸಿದರೆ ದಾಸನಮೇಲೆ ಕರು
ಣಿಸಿದಂತಾಗುತ್ತದೆ. ಎಂದು ಬಿನ್ನಹ ಮಾಡಿಕೊಂಡನು. ಆದರೆ ಸ್ವಾಮಿ
ಯು ತನ್ನ ಜಪಮಾಲೆಯನ್ನು ತಿರುಗಿಸುವದನ್ನು ಬಿಡಲಿಲ್ಲ, ಮುಂದೆ ಕಿಂಚಿ
ತ್ ಹೊತ್ತಾದಮೇಲೆ ಬಾದಶಹನು ಪುನಃ “ ಮಹಾರಾಜ ! ನಾನು ಈಸ
ಮಗ್ರ ಭರತ ಖಂಡದ ರಾಜಾಧಿರಾಜನಿದ್ದೇನೆ. ನನ್ನೊಡನೆ ಎರಡು ಶಬ್ದಗಳ
ನಾದರೂ ಮಾತಾಡಿರಿ, ನಿಮ್ಮ ಮನೋಬಯಕೆಯನ್ನು ಪೂರ್ಣಮಾಡಲು
ಸಮರ್ಥನಿದ್ದೇನೆ. ಎಂದು ಹೇಳಿದನು. ಸ್ವಾಮಿಯ ಮೌನವನ್ನು ಬಿಡಲಿಲ್ಲ
ಆಮೇಲೆ ಬಾದಶಹನು ಒಂದು ಲಕ್ಷರೂಪಾಯಿಗಳ ರಾಸಿಯನ್ನು ಅವನ
ಮುಂದೆ ಹಾಕಿಸಿ ಮಹಾರಾಜ ! ತಾವು ಮಾತಾಡದಿದ್ದರೂ ಚಿಂತೆ ಇಲ್ಲ ಈ
ಒಂದು ಲಕ್ಷರೂಪಾಯಿಗಳನ್ನು ತಮ್ಮ ಪಾದಕ್ಕೆ ಸಮರ್ಪಿಸಿದ್ದೇನೆ. ಸ್ವೀಕ
ರಿಸಿ ನನಗೆ ಶುಭಾಶೀರ್ವಾದವನ್ನು ಮಾಡಬೇಕು, ಎಂದನು. ಗುರುವು ಕಥೆ
ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೯೦
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೩೧೯