ರೆದು ಸಹನೋಡಲಿಲ್ಲ ಇಷ್ಟೆಲ್ಲ ಆದಮೇಲೆ ಬಾದಶಹನಿಗೆ ಕೋಪವು ಉಂಟಾಯಿತು ಕೂಡಲೆ ಅಲ್ಲಿಂದ ಎದ್ದು, “ ಇವನು ಕೇವಲ ಮೂರ್ಖನಿದ್ದಂತೆ.
ಕಂಡು ಬರುತ್ತದೆ ಇವನೊಡನೆ ತಲೆಯೊಡಕೊಂಡರೆ ಏನೂ ಪ್ರಯೋಜನವಿಲ್ಲ ” ಎಂದು ತಿಳಿದುಕೊಂಡು ಆ ರೂಪಾಯಿಗಳನ್ನು ಬೀರಬಲನ ಮನೆಗೆ
ಕಳುಹಿಸಿ, ತನ್ನರಮನೆಗೆ ಹೊರಟು ಬಂದನು ಮರುದಿವಸ ರಾಜಕಾರ್ಯಗಳೆಲ್ಲ ನಿವೃತ್ತಿಯಾದಮೇಲೆ ಬೀರಬಲನೊಡನೆ ಏಕಾಂತದಲ್ಲಿ ಕುಳಿತುಕೊಂಡು ಮಾತು ಕಥೆಗಳನ್ನಾಡುತ್ತ ಬಾದಶಹನು ಬೀರಬಲ್ಲನನ್ನು ಕುರಿತು-
ಬೀರಬಲ್ಲ ! ಪ್ರಸಂಗವಶಾತ್ ಮೂರ್ಖನೊಡನೆ ಕೆಲಸವು ಉಂಟಾದರೆ ಯೇನು ಮಾಡಬೇಕು ? ಎಂದು ಪ್ರಶ್ನೆ ಮಾಡಿದನು. ಆಕ್ಷಣದಲ್ಲಿಯೇ ಬೀರಬಲನು ಸುಮ್ಮನಿರ ಬೇಕು, ಎಂದು ಉತ್ತರಕೊಟ್ಟನು. ಅದನ್ನು ಕೇಳಿ ಬಾದಶ
ಹನಿಗೆ ಪರಮಾಶ್ಚರ್ಯವಾಯಿತು ತನ್ನ ಮನಸ್ಸಿನಲ್ಲಿ ತಾನೇ ಸುಮ್ಮನಿರ
ಬೇಕು ಎಂದು ಉತ್ತರಕೊಟ್ಟನು. ಅದನ್ನು ಕೇಳಿ ಬಾದಶಹನಿಗೆ ಪರಮಾ
ಶ್ಚರ್ಯವಾಯಿತು, ತನ್ನ ಮನಸ್ಸಿನಲ್ಲಿ ತಾನೆ - ನಾನು ಈ ಪ್ರಶ್ನೆಯನ್ನು
ಮಾಡಿ, ಬೀರಬಲನೇ ನಿನ್ನ ಗುರುವು ಶುದ್ಧಮೂರ್ಖನಿರುವೆನೆಂದು ಹೇಳ
ಬೇಕೆಂದು ಮಾಡಿದ್ದೆನು ಆದರೆ ಬೀರಬಲನು ನನ್ನನ್ನೆ ಮೂರ್ಖನನ್ನಾಗಿ
ಮಾಡಿ ಬಿಟ್ಟನು ನಾನು ಆ ಗುರುವನ್ನು ಮಾತಾಡಿಸಬೇಕೆಂದು ಅತೀ ಸಾಹಸಪಟ್ಟೆನು. ಕಡೆಗೆ ದ್ರವ್ಯದಾಕೆಯನ್ನೂ ತೋರಿಸಿದನು. ಆದರೆ ಅವನು ಧನವನ್ನು ಮೃತ್ತಿಕಾ ಸಮಾನವೆಂದು ತಿಳಿದು ಲಕ್ಷ್ಯಕ್ಕೆ ತಂದುಕೊಳ್ಳಲಿಲ್ಲ
ನನ್ನನ್ನೇ ಮೂರ್ಖನನ್ನಾಗಿ ಮಾಡಿಕುಳ್ಳಿರಿಸಿ ಬಿಟ್ಟನು. ಇನ್ನು ಮೇಲೆ
ಎಂದಾದರೂ ಮಹಾತ್ಮರ ದರುಶನಕ್ಕೆ ಹೋದರೆ ನಮ್ರತೆಯಿಂದ ಆಚರಿಸು
ವೆನು ಎಂದು ನಿಶ್ಚಯಿಸಿಕೊಂಡು ಬೀರಬಲನನ್ನು, ಗುರುವಿನ ಹತ್ತಿರ ಕ್ಷಮಾ ಯಾಚನೆಯನ್ನು ನನ್ನ ಸಲುವಾಗಿ ಕೇಳಿಕೊಂಡು ಬಾ ; ಎಂದು ಹೇಳಿ
ಕಳುಹಿಸಿಕೊಟ್ಟನು. ಆ ಕೂಡಲೆ ಬೀರಬಲನು ಮಾರುತಿಯ ದೇವಾಲಯಕ್ಕೆ ಬಂದು ಅಂಧಕಾರ ವ್ಯಾಪ್ತವಾಗಿ, ಜನಸಮ್ಮರ್ದವು ಕಡಿಮೆಯಾಗುವ
ತನಕ ಕುಳಿತುಕೊಂಡು ಆ ಮೇಲೆ ಗುರುವನ್ನು ಕರೆದುಕೊಂಡು ತನ್ನ ಗೃ
ಹಕ್ಕೆ ಹೋಗಿ ಒಂದು ಕಾಲನ್ನೂ ಒಂದು ನೂರುರೂಪಾಯಿಗಳನ್ನೂ ಕೃತಿಮ
ಗುರುವಿಗೆ ಕೊಟ್ಟು ಕಳುಹಿಸಿಕೊಟ್ಟನು ಈ ಸಂಗತಿಯನ್ನು ಎಂದೂ
ಪ್ರಕಟಿಸಕೂಡದೆಂದು ಅಪ್ಪಣೆ ಮಾಡಿದನು ಆ ಕಾಷ್ಟವಿಕ್ರಯಿಯು ಅಷ್ಟು
ರೂಪಾಯಿಗಳನ್ನು ಎಂದೂ ನೋಡಿದ್ದಿಲ್ಲ. ಅದರಿಂದ ಹರುಷಿತನಾಗಿ ಬೀರ
ಬಲನ ಪಾದಗಳಿಗೆ ನಮಸ್ಕರಿಸಿ ಹೊರಟು ಹೋದನು.
ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೯೧
ಈ ಪುಟವನ್ನು ಪ್ರಕಟಿಸಲಾಗಿದೆ
೩೨೦
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೩೦೩