ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೯೨

ಈ ಪುಟವನ್ನು ಪ್ರಕಟಿಸಲಾಗಿದೆ
(೪೧)
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು
೩೨೧


-(೧೭೩, ತಾನಸೇನ ಮತ್ತು ಬೀರಬಲರಪರೀಕ್ಷೆ)-

ದಿಲ್ಲಿಯಲ್ಲಿ ತಾನಸೇನನೆಂಬ ಒಬ್ಬ ಪ್ರಖ್ಯಾತನಾದ ಗಾಯನ ಪಂಡಿತನು ಇದ್ದನು. ಆ ಕಾಲದಲ್ಲಿ ಅವನನ್ನು ಎದುರಿಸುವವರು ಯಾರೂ ಇದ್ದಿಲ್ಲ ದೂರದೂರಿಂದ ಗಾಯಕರೂ ರಾಜರೂ ಶ್ರೀಮಂತರೂ ಮೊದಲಾದವರು ದಿಲ್ಲಿಗೆ ಬಂದು ತಾನಸೇನನ ಗಾಯನಾಮೃತವನ್ನು ಪಾನಮಾಡಿ ಸಂತುಷ್ಟ ರಾಗಿ ಹೋಗುತ್ತಿದ್ದರು. ಅವನು ಮುಸಲ್ಮಾನ ಧರ್ಮದವನಾದ್ದರಿಂದ ಮುಸಲ್ಮಾನರಲ್ಲೆಲ್ಲ ಅವನ ಪ್ರತಿಷ್ಟೆಯು ಬೆಳೆದು ಹೋಗಿತ್ತು ಮುಸಲ್ಮಾನ ಸರದಾರರೂ ಮುತ್ಸದ್ದಿಗಳೂ ಪ್ರತಿಯೊಂದು ಪ್ರಸಂಗದಲ್ಲಿ ಅವನ ಹೆಸ ರನ್ನೆ ಮುಂದಕ್ಕೆ ತರುತ್ತಿದ್ದನು ತಾನಸೇನನಿಗಿಂತ ಬೀರಬಲನ ಹೆಚ್ಚಳವು ಬಾದಶಹನ ಬಳಿಯಲ್ಲಿ ಅಧಿಕವಾಗಿರುವದನ್ನು ನೋಡಿ, ಮುಸಲ್ಮಾನರಿಗೆ ಸಹನವಾಗುತ್ತಿದ್ದಿಲ್ಲ. ಈತರದ ಸ್ಥಿತಿಯಿರಲು ಒಂದು ದಿವಸ ಯಾವದೋ ಒಂದು ಕಾರ್ಯಾಂತರದಿಂದ, ಮುಸಲ್ಮಾನರು, ತಾನಸೇನನನ್ನು ಬಹುಪರಿಯಾಗಿ, ಬಾದಶಹನ ಮುಂದೆ ಶ್ಲಾಘನೆ ಮಾಡಿದರು. ಅದು ಬಾದಶಹನಿಗೆ ಸಹನವಾಗಲಿಲ್ಲ ಕಡೆಗೆ ಅವರೆಲ್ಲರನ್ನು ಕುರಿತು ನೀನು ತಾನಸೇನನನ್ನು ಬಹುಪರಿಯಾಗಿ ವರ್ಣಿಸುವಿರಿ ಅವನು ತನ್ನ ವಿದ್ಯೆಯಲ್ಲಿ ಅದ್ವಿತೀಯ ಪಂಡಿತನಿರುವನು ಇದುನಿಜ, ಆದರೆ ಅವನಿಂದ ಬೀರಬಲನನ್ನು ಸರಿಗಟ್ಟುವು ದಸಾಧ್ಯವು, ಅವನು ಬೀರಬಲನ ಪ್ರಾಸಂಗಕ್ಕೆ ಸಹ ಹತ್ತಲಾರನು.
ಬಾದಶಹನ ಈ ವಾಕ್ಯವನ್ನು ಕೇಳಿ, ಆ ಜನರೆಲ್ಲರೂ ಆ ಕಾಲಕ್ಕೆ ಸುಮ್ಮನಾದರು. ಆಮೇಲೆ ಓಲಗವು ವಿಸರ್ಜನೆಯಾದ ಬಳಿಕ ಎಲ್ಲರೂ ಒಬ್ಬ ಸರದಾರನ ಗೃಹದಲ್ಲಿ ಏಕತ್ರರಾಗಿ ಆಸ್ಥಾನವನ್ನು ಬಹುರಮಣೀಯವಾಗಿ ತೋರುವಂತೆ ಸಿಂಗರಿಸಿ ಬಾದಶಹನ ಸಲುವಾಗಿ ಒಂದು ಉಚ್ಚಸ್ಥಾನವನ್ನು ಸಿದ್ಧ ಮಾಡಿ ಇಟ್ಟು ತಾನಸೇನನನ್ನು ಕರೆಯಿಸಿಕೊಂಡರು, ಅವನು ಬಂದಮೇಲೆ ಬಾದಶಹನನ್ನು ಕರೆಯಹೋದರು, ಬಾದಶಹನು ಆಸ್ಥಾನಕ್ಕೆ ಬರುವದರೊಳಗಾಗಿ ಅಂಧಕಾರವಾಗಿ ಹೋಯಿತು ಅವನು ಆ ಸಭಾಮಂದಿರವನ್ನು ಪ್ರವೇಶಿಸಲು ತಾನಸೇನನು ದೀಪರಾಗವನ್ನು ಮಾಡಹತ್ತಿದನು, ಆ ಕೂಡಲೆ ಅಲ್ಲಿದ್ದ ದೀಪಸ್ತಂಭಗಳಲ್ಲಿ ತಮ್ಮಷ್ಟಕ್ಕೆ ತಾವೇ ದೀಪಗಳುಹತ್ತಿ ಗೃಹವೆಲ್ಲ ಪ್ರಕಾಶಮಯವಾಯಿತು, ಉಷ್ಣಕಾಲವಿದ್ದದರಿಂದ ಎಲ್ಲರ ಮೈಮೇಲೆ ಬೆವರೊಡೆಯ ಹತ್ತಿತು ಜನರು ಉಪವಸ್ತ್ರಗಳಿಂದ ಗಾಳಿಯನ್ನು ಹಾಕಿಕೊಳ್ಳ ಹತ್ತಿದರು. ಅದನ್ನು ಕಂಡು ತಾನಸೇನನು " ಮಲ್ಲಾರ” ವೆಂಬ ರಾಗವನ್ನು ಮಾಡಿ ವೃಷ್ಟಿಯನ್ನುಂಟು ಮಾಡಿದನು ಈ ಅತ್ಯದ್ಭುತದ ಕೆಲ