ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೯೪

ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು
೩೨೩



ಊಟ ಉಡಿಗೆಗಳನ್ನು ತೀರಿಸಿಕೊಂಡು ಶಯನ ಮಾಡಿದನು, ಮರು ದಿವಸ ಬೀರಬಲನ ಸೇವಕನೊಬ್ಬನು ತಾನಸೇನನ ಬಳಿಗೆ ಬಂದು “ ಅಮಾತ್ಯರವರು ಪ್ರಯಾಣದ ಸನ್ನಾಹಗಳನ್ನೆಲ್ಲ ಮಾಡಿಕೊಂಡು ತಮ್ಮ ಮಾರ್ಗವನ್ನೇ ಪ್ರತೀಕ್ಷಿಸುತ್ತ ಕುಳಿತುಕೊಂಡಿದ್ದಾರೆ ನಡೆಯಬೇಕು ” ಎಂದು ವಿಜ್ಞಾಪ ನೆಯನ್ನು ಮಾಡಿಕೊಂಡನು. ಕೂಡಲೆ ತಾನಸೇನನು ಬೀರಬಲನೆಡೆಗೆ ಬಂ ದನು. ಈರ್ವರೂ ವೇಗಶಾಲಿಗಳಾದ ಅಶ್ವಾರೋಹಣ ಮಾಡಿಕೊಂಡು, ಮಾರ್ಗವನ್ನು ಹಿಡಿದರು. ಪಯಣದ ಮೇಲೆ ಪಯಣ ಮಾಡುತ್ತ ಎಷ್ಟೊ ದಿವಸಗಳಾದಮೇಲೆ ಬ್ರಹ್ಮದೇಶದ ರಾಜಧಾನಿಯಸಾನ್ನಿಧ್ಯವನ್ನು ಸೇರಿದರು ಇವರು ರಾಜಧಾನಿಗೆ ತಲುಪಿದ ಕಾಲದಲ್ಲಿ ರಾತ್ರಿಯಾಗಿತ್ತು ನಗರದಮಹಾ ದ್ವಾರವು ಮುಚ್ಚಲ್ಪಟ್ಟಿತ್ತು, ಅಲ್ಲಿ ಅವರಿಗೆ ಯಾರ ಪರಿಚಯವೂ ಇದ್ದಿಲ್ಲ, ರಾತ್ರಿಯಾದರೋ ಗಾಡಾಂಧಕಾರ ಕೋಟಿಯ ಹೊರಗೆ ಜನಸಂಚಾರವಿಲ್ಲ ಹೀಗಾಗಿ ಅವರಿಗೆ ಆಶ್ರಯಕ್ಕೆ ನಿರ್ಭಯವಾದ ಸ್ಥಳವು ಸಿಕ್ಕದೇಹೋಯಿತು ಅವರಿಬ್ಬರೂ ಪಗಡಿಯಪ್ರಕಾರ ಜಾಗರೂಕರಾಗಿದ್ದು ರಾತ್ರಿಯನ್ನು ಕಳೆ ಯಬೇಕೆಂದು ಯೋಚಿಸಿದರು. ಅಷ್ಟರಲ್ಲಿ ಕೋಟೆಯ ರಕ್ಷಕನೊಬ್ಬನು ಇವರನ್ನು ಕಂಡು ನಿಮ್ಮ ಸ್ಥಿತಿಗತಿಯಮೇಲಿಂದ ನೋಡಿದರೆ ನೀವು ಪ್ರ ಯಾಣಸ್ಥರಂತೆ ತೋರುವಿರಿ, ಇಲ್ಲಿ ಸಿಂಹದಭಯವು ಬಹಳ ನನ್ನ ಕುಟೀರಕ್ಕೆ ಬಂದು ಇಳಿದುಕೊಳ್ಳಬೇಕು; ” ಎಂದು ವಿಜ್ಞಾಪನೆ ಮಾಡಿಕೊಂಡನು. ಬೀರಬಲನು ಹಿಂದೆಮುಂದೆ ನೋಡಹತ್ತಿದನು, ಆದರೆ ಅವನು ಅತ್ಯಾಗ್ರಹ ಮಾಡಹತ್ತಿದ್ದರಿಂದ ತಮ್ಮ ತಮ್ಮ ಕುದುರೆಗಳನ್ನು ಏರಿಕೊಂಡು ಅವನ ಬೆನ್ನ ಹಿಂದೆ ಹೊರಟರು ಅವನು ತನ್ನ ಮನೆಗೆ ಇವರನ್ನು ಕರೆದುಕೊಂಡು ಹೋಗಿ ಅಶ್ವಗಳನ್ನು ತನ್ನ ದನದಕೊಟ್ಟಿಗೆಯಲ್ಲಿ ಕಟ್ಟಿಸಿ ಪೃಥಕ್‌ ಪೃಥಕ್ ಸ್ಥಾನಗಳನ್ನು ಮಲಗಲಿಕ್ಕೆ ತೋರಿಸಿದನು, ಇಬ್ಬರೂ ನಿಶ್ಚಿಂತೆಯಿಂದ ರಾತ್ರಿಯನ್ನು ಕಳೆದರು. ಪ್ರಾತಃಕಾಲವಾಗುತ್ತಲೇ ಸ್ನಾನ ಉಪಹಾರಾದಿಗಳನ್ನು ತೀರಿಸಿಕೊಂಡು ರಾಜಧಾನಿಯನ್ನು ಪ್ರವೇಶಿಸಿದರು. ಆ ನಗರವು ಒಳ್ಳೇ ಅಚ್ಚುಕಟ್ಟಾಗಿದ್ದು, ಇಂದ್ರನ ಅಮರಾವತಿಯಂತೆ ಕಂಗೊಳಿಸು ತಿತ್ತು, ರಾಜನು ದಯಾಳುವಾಗಿದ್ದದರಿಂದ ಪ್ರಜೆಗಳೆಲ್ಲರೂ ಸುಖದಿಂದ ಕಾಲಹರಣ ಮಾಡುತ್ತಿದ್ದರು. ಇದನ್ನೆಲ್ಲಾ ಕಂಡು ಇವರಿಬ್ಬರೂ ಹರುಷಿ ತರಾಗಿ ಪಟ್ಟಣದ ಸೌಂದರ್ಯವನ್ನವಲೋಕಿಸುತ್ತಾ ರಾಜಪ್ರಾಸಾದದ ಹತ್ತಿರರ ಬಂದರು. ಆಗ ಒಬ್ಬ ಪ್ರತಿಹಾರಿಯು ಮುಂದೆಬಂದು ಇವರ ಹೆಸರನ್ನು ವಾಸ ಸ್ಥಳವನ್ನು ಇಲ್ಲಿಗೆ ಬಂದಿರುವ ಉದ್ದೇಕವೇನೆಂಬುದನ್ನು ತಿಳಿದುಕೊಂಡು