ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೯೫

ಈ ಪುಟವನ್ನು ಪ್ರಕಟಿಸಲಾಗಿದೆ
೩೨೪
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.

ಮ್ಮರಸನಿಗೆ ತಿಳಿಸಿದನು ಆಮೇಲೆ ರಾಜಾಜ್ಞೆಯಿಂದ ಇವರನ್ನು ಕರೆದುತ ಕೊಂಡುಹೋಗಿ ರಾಜನಸಮ್ಮುಖದಲ್ಲಿ ನಿಲ್ಲಿಸಿದನು ಅವನು ಇವರ ಮುಖವ ನ್ನೀಕ್ಷಿಸಿ ಕುಳಿತುಕೊಳ್ಳುವಂತೆ ಅಪ್ಪಣೆಮಾಡಿ ಆಗಮನದಕಾರಣವೇನೆಂದು ಪ್ರಶ್ನೆ ಮಾಡಿದನು ಬೀರಬಲನು ಬಾದಶಹನುಕೊಟ್ಟಿದ್ದ ಲೇಖನವನ್ನು ಮುಂ ದೆಯಿಟ್ಟನು. ರಾಜನು ಅದನ್ನು ಬಿಚ್ಚಿ ನೋಡಲು ಅದರಲ್ಲಿ ನನ್ನ ಸಭಾಸದ ರಲ್ಲಿ ಈರ್ವರೂ ತಮ್ಮ ಹತ್ತಿರ ನನ್ನ ಪತ್ರವನ್ನು ತೆಗೆದುಕೊಂಡು ಬಂದಿದ್ದಾರೆ ಅವರು ನನ್ನಲ್ಲಿ ಮಹಾಪರಾಧವನ್ನು ಮಾಡಿದ್ದಾರೆ ಅದರಿಂದ ಅವರಿಗೆ ದೇ ಹಾಂತ ಶೀಕ್ಷೆಯನ್ನೇ ಕೊಡಬೇಕಾಗಿರುವದು. ಇವರು ನನ್ನ ಪಟ್ಟಣದಲ್ಲಿ ಪ್ರತಿಷ್ಕೃತರಾಗಿರುವವರಿಂದ ಬಹಿರಂಗವಾಗಿ ಇವರಿಗೆ ದೇಹಾಂತಶೀಕ್ಷೆಯ ನ್ನು ನನ್ನ ರಾಜಧಾನಿಯಲ್ಲಿ ಕೊಟ್ಟರೆ, ಪ್ರಜೆಗಳಲ್ಲಿ ಅಸಂತೋಷ ವುತ್ಪನ್ನ ವಾಗುವಂತೆ ಆದೆ ಅದರಿಂದ ತಮ್ಮ ಬಳಿಯಲ್ಲಿ ಕಳುಹಿಕೊಟ್ಟಿದ್ದೇನೆ ನ ನ್ನ ಮಿತ್ರತ್ವದ ದೆಶೆಯಿಂದ ಈ ಕಾರ್ಯವನ್ನು ತಾವು ಅವಶ್ಯವಾಗಿ ನಡೆ ಯಿಸಬೇಕು. ” ಎಂಬ ಅಭಿಪ್ರಾಯವಿತ್ತು ಅದನ್ನು ಚನ್ನಾಗಿ ಮನನ ಮಾ ಡಿಕೊಂಡು ತನ್ನ ಅಮಾತ್ಯನ ಕೈಯಲ್ಲಿ ಇತ್ತನು ಅವನು ಆ ಪತ್ರಾಭಿ ಯವನ್ನು ನೋಡಿಕೊಂಡು ಆಶ್ಚರ್ಯಾನ್ವಿ ತನಾದನು ಆಗ ಆ ರಾಜನು “ ಏ ನು ವ್ಯವಸ್ಥೆಯನ್ನು ಮಾಡಬೇಕು? ” ಎಂದು ಕೇಳಿದನು ಚತುರನಾದ ಆ ಅಮಾತ್ಯನು ಮಹಾರಾಜ ! ಇದರಲ್ಲಿ ಏನೋ ಗೂಢವಿದ್ದಂತೆ ಕಾಣುತ್ತ ದೆ ಆದ್ದರಿಂದ ಇವರನ್ನು ಏಳು ದಿವಸಗಳಮಟ್ಟಿಗೆ ಕಾರಾಗೃಹದಲ್ಲಿಟ್ಟು ಆ ಮೇಲೆ ಏನು ಮಾಡತಕ್ಕದ್ದನ್ನು ಮಾಡಿದರಾಯಿತು. ” ಎಂದು ಹೇಳಿದನು ಆರಾಜನಿಗೂ ಇದು ಸರಿಯಾಗಿ ತೋರಿತು ಕೂಡಲೆ ಕರ್ಮಚಾರಿಗಳಿಂದಇ ವರ ಕೈಯಲ್ಲಿ ಸಂಕೋಲೆಗಳನ್ನು ಹಾಕಿಸಿ, ಕಾರಾಗೃಹಕ್ಕೆ ತೆಗೆದುಕೊಂ ಡುಹೋಗಿರಿ, ಎಂದು ಅಪ್ಪಣೆ ಮಾಡಿದನು ಇದನ್ನು ಕಂಡು ತಾನಸೇನನ ಬುದ್ಧಿಯು ಮಂಕಾಗಿ ಹೋಯಿತು ಈರ್ವರನ್ನೂ, ಒಂದು ಸೆರೆಮನೆಯಲ್ಲಿ ಇಟ್ಟುಬಿಟ್ಟರು ಕರ್ಮಚಾರಿಗಳು ಹೊರಟುಹೋದಮೇಲೆ ತಾನಸೇನನು ಮಿತ್ರಾ ! ಬೀರಬಲ್ಲ ! ಇದು ಏನಾಯಿತು? ನಾವು ಇಲ್ಲಿಗೆ ಬಂದು ಮೋಸ ಹೋದವು ಪ್ರಾಣದ ಮೇಲೆಯೇ ಬಂದಂತೆಕಾಣುತ್ತದೆ ಜೀವವು ಉಳಿಯು ವರ್ಹಾ ಯಾವದಾದರೊಂದು ಹಂಚಿಕೆಯನ್ನು ಮಾಡು ! ನಿನ್ನ ಬುದ್ಧಿ ಸಾಮರ್ಥ್ಯದಿಂದಲೇ ಪಾರಾಗಬೇಕೇ ಹೊರತು ಅನ್ಯಉಪಾಯವೇ ಇಲ್ಲ ನನ್ನ ಬುದ್ಧಿಯಂತೂ ಭ್ರಂಶವಾಗಿ ಹೋಗಿದೆ. ” "ಎಂದನು ಆಗ ಬೀರಬಲ ನು ತನ್ನ ಮನಸ್ಸಿನಲ್ಲಿ - "ಬಾದಶಹನು ನಮ್ಮಿಬ್ಬರ ಬುದ್ಧಿ ಚಾತುರ್ಯವ